IPL 2025: ಐಪಿಎಲ್ ಮೆಗಾ ಹರಾಜಿನ ನಿಯಮದಲ್ಲಿ ಮಹತ್ವದ ಬದಲಾವಣೆ

|

Updated on: Oct 30, 2024 | 10:55 AM

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಆರು ಆಟಗಾರರಲ್ಲಿ ಓರ್ವ ಅನ್​ಕ್ಯಾಪ್ಡ್ ಆಟಗಾರನಿರಬೇಕೆಂದು ತಿಳಿಸಲಾಗಿದೆ. ಅಲ್ಲದೆ ಹರಾಜಿನ ಬಳಿಕ ಕನಿಷ್ಠ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ ಮಾಡಲಾಗಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಈ ಪಟ್ಟಿಯನ್ನು ಅಕ್ಟೋಬರ್ 31 ರೊಳಗೆ ಸಲ್ಲಿಸಬೇಕಿದ್ದು, ಇದಾದ ಬಳಿಕ ಐಪಿಎಲ್ ಮೆಗಾ ಹರಾಜಿಗಾಗಿ ಆಟಗಾರರ ನೋಂದಣಿ ಪ್ರಕ್ರಿಯೆ ನಡೆಯಲಿದೆ.

2 / 5
ಅದರಂತೆ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಕನಿಷ್ಠ ಬಿಡ್ಡಿಂಗ್ ಬೆಲೆ 30 ಲಕ್ಷ ರೂ. ಇರಲಿದೆ. ಇದಕ್ಕೂ ಮುನ್ನ ಕನಿಷ್ಠ ಹರಾಜು ಮೊತ್ತ 20 ಲಕ್ಷ ರೂ. ಆಗಿತ್ತು. ಆದರೆ ಈ ಬಾರಿ ಈ ಮೊತ್ತವನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ.

3 / 5
ಅಂದರೆ ಇಲ್ಲಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಕನಿಷ್ಠ ಮೂಲ ಬೆಲೆ 30 ಲಕ್ಷ ರೂ. ಆಗಿರಲಿದೆ. ಹಾಗೆಯೇ 50 ಲಕ್ಷ ರೂ., 1 ಕೋಟಿ ರೂ. ಹಾಗೂ 1.5 ಕೋಟಿ ರೂ. ಮೂಲ ಬೆಲೆಯಲ್ಲಿ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು. ಹಾಗೆಯೇ ಇಲ್ಲಿ ಗರಿಷ್ಠ ಮೂಲ ಬೆಲೆ 2 ಕೋಟಿ ರೂ. ನಿಗದಿ ಮಾಡಲಾಗಿದೆ.

4 / 5
ಅದರಂತೆ ಈ ಬಾರಿಯ ಹರಾಜಿನಲ್ಲಿ ಕನಿಷ್ಠ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಆಟಗಾರರನ್ನು ಖರೀದಿಸಲು 30 ಲಕ್ಷ ರೂ. ವ್ಯಯಿಸಬೇಕಾಗುತ್ತದೆ. ಈ ಮೂಲಕ ಹೊಸ ಆಟಗಾರರಿಗೆ ಹೆಚ್ಚಿನ ಮೊತ್ತ ಸಿಗುವಂತೆ ಮಾಡಲು ಬಿಸಿಸಿಐ ಮುಂದಾಗಿದೆ.

5 / 5
ಇನ್ನು ಈ ಬಾರಿಯ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯುವ ಸಾಧ್ಯತೆಯಿದೆ. ಪ್ರಸ್ತುತ ಮಾಹಿತಿ ಪ್ರಕಾರ, 18ನೇ ಸೀಸನ್​ನ ಮೆಗಾ ಆಕ್ಷನ್​ಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್​​ ಆತಿಥ್ಯವಹಿಸಲಿದೆ. ಅಂದರೆ ಅರಬ್ಬರ ನಾಡಿನಲ್ಲಿ ಆಟಗಾರರ ಐಪಿಎಲ್ ಭವಿಷ್ಯ ನಿರ್ಧಾರವಾಗಲಿದೆ.