ವರದಿಯ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ತೊರೆಯಲು ಸಿದ್ಧರಾಗಿರುವ ಕೆಎಲ್ ರಾಹುಲ್ ಅವರನ್ನು ಕೆಲವು ದೊಡ್ಡ ತಂಡಗಳು ಸಂಪರ್ಕಿಸಿವೆ. ಇದರಲ್ಲಿ ದೊಡ್ಡ ಹೆಸರುಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್. ರಾಹುಲ್ ಈ ಹಿಂದೆ ಆರ್‌ಸಿಬಿ ಪರ ಆಡಿದ್ದು, ಅವರ ಪ್ರದರ್ಶನ ಉತ್ತಮವಾಗಿತ್ತು. ಅದೇ ಸಮಯದಲ್ಲಿ, ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ಕೂಡ ರಾಹುಲ್ರನ್ನು ಖರೀದಿಸಲು ಆಸಕ್ತಿ ತೋರಿಸಿದೆ.