IPL 2025: ಪಂಜಾಬ್ ಕಿಂಗ್ಸ್ ಈಗ ಮಿನಿ ಆಸ್ಟ್ರೇಲಿಯಾ

|

Updated on: Nov 28, 2024 | 1:32 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​​ನ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಗ್ಲೆನ್ ಮ್ಯಾಕ್ಸ್​​ವೆಲ್ ಅಥವಾ ಮಾರ್ಕಸ್ ಸ್ಟೋಯಿನಿಸ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

1 / 5
ಐಪಿಎಲ್ ಮೆಗಾ ಹರಾಜಿನ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 25 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ. ಈ ಇಪ್ಪತ್ತೈದು ಆಟಗಾರರಲ್ಲಿ 8 ವಿದೇಶಿ ಪ್ಲೇಯರ್ಸ್ ಇದ್ದಾರೆ. ಇವರಲ್ಲಿ ಐವರು ಆಸ್ಟ್ರೇಲಿಯನ್ನರು ಎಂಬುದು ವಿಶೇಷ. ಅಂದರೆ ಈ ಬಾರಿಯ ಹರಾಜಿನ ಮೂಲಕ ಪಂಜಾಬ್ ಕಿಂಗ್ಸ್ ಆಸ್ಟ್ರೇಲಿಯನ್ ಆಟಗಾರರಿಗೆ ಮಣೆ ಹಾಕಿದೆ.

2 / 5
ಇದಕ್ಕೆ ಮುಖ್ಯ ಕಾರಣ ಪಂಜಾಬ್ ಕಿಂಗ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್. ಹೊಸ ತಂಡ ಕಟ್ಟುವ ಇರಾದೆಯಲ್ಲಿದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಪಾಂಟಿಂಗ್ ಅವರಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದು, ಅದರಂತೆ ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿತ್ತು.

3 / 5
ಈ ಅವಕಾಶವನ್ನು ಬಳಸಿಕೊಂಡ ರಿಕಿ ಪಾಂಟಿಂಗ್ ಆಸ್ಟ್ರೇಲಿಯನ್ನರಿಗೆ ಮಣೆ ಹಾಕಿದ್ದಾರೆ. ಅದರಂತೆ ಇದೀಗ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್, ಕ್ಸೇವಿಯರ್ ಬ್ರಾಟ್​ಲೆಟ್, ಆರೋನ್ ಹಾರ್ಡಿ ಇದ್ದಾರೆ. ಹೀಗಾಗಿಯೇ ಪಂಜಾಬ್ ಕಿಂಗ್ಸ್ ತಂಡವನ್ನು ಆಸೀಸ್ ಮಾಧ್ಯಮಗಳು ಮಿನಿ ಆಸ್ಟ್ರೇಲಿಯಾ ತಂಡ ಎಂದು ಕರೆದಿದೆ.

4 / 5
ಇನ್ನು ಆಸ್ಟ್ರೇಲಿಯನ್ನರಲ್ಲದೆ ಪಂಜಾಬ್ ಕಿಂಗ್ಸ್​​ಗೆ ಆಯ್ಕೆಯಾದ ವಿದೇಶಿ ಆಟಗಾರರೆಂದರೆ ಅಫ್ಘಾನಿಸ್ತಾನದ ಅಝ್ಮತುಲ್ಲಾ ಒಮರ್​​ಝಾಹಿ,ಸೌತ್ ಆಫ್ರಿಕಾದ ಮಾರ್ಕೊ ಯಾನ್ಸೆನ್ ಹಾಗೂ ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್. ಇತ್ತ ಐವರು ಆಸ್ಟ್ರೇಲಿಯನ್ನರಲ್ಲಿ ಮೂವರು ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಪಡೆಯುವುದು ಖಚಿತ. ಅದರಂತೆ ಈ ಬಾರಿ ರಿಕಿ ಪಾಂಟಿಂಗ್ ಮುಂದಾಳತ್ವದಲ್ಲಿ ಪಂಜಾಬ್ ಕಿಂಗ್ಸ್ ಕಮಾಲ್ ಮಾಡಲಿದೆಯಾ ಕಾದು ನೋಡಬೇಕಿದೆ.

5 / 5
ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಲ್, ಅರ್ಷ್‌ದೀಪ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಪ್ರಭ್​ಸಿಮ್ರಾನ್ ಸಿಂಗ್, ಹರ್‌ಪ್ರೀತ್ ಬ್ರಾರ್, ವಿಜಯ್‌ಕುಮಾರ್ ವೈಶಾಕ್, ಯಶ್ ಠಾಕೂರ್, ಮಾರ್ಕೊ ಯಾನ್ಸೆನ್, ಜೋಶ್ ಇಂಗ್ಲಿಸ್, ಲಾಕಿ ಫರ್ಗುಸನ್, ಅಝ್ಮತುಲ್ಲಾ ಒಮರ್​​ಝಾಹಿ,ಆರೋನ್ ಹಾರ್ಡಿ, ಮುಶೀರ್ ಖಾನ್, ಸೂರ್ಯಾಂಶ, ಕ್ಸೇವಿಯರ್ ಬ್ರಾಟ್​ಲೆಟ್, ಪೈಲಾ ಅವಿನಾಶ್, ಪ್ರವೀಣ್ ದುಬೆ, ನೆಹಾಲ್ ವಧೇರಾ, ಹರ್ನೂರ್ ಪನ್ನು, ಕುಲ್ದೀಪ್ ಸೇನ್.