AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ವಿರಾಟ್ ಕೊಹ್ಲಿ ಜೊತೆಗಿನ ಕಿರಿಕ್​​ಗೆ ಭಾರೀ ಬೆಲೆ ತೆತ್ತ ‘ಮ್ಯಾಂಗೊ’ ನವೀನ

IPL 2025 Naveen-ul-Haq: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಾಗ ನವೀನ್ ಉಲ್ ಹಕ್ ಸೋಷಿಯಲ್ ಮೀಡಿಯಾದಲ್ಲಿ ಮಾವಿನ ಹಣ್ಣಿನ ಫೋಟೋ ಹಂಚಿಕೊಂಡು, ಸ್ವೀಟ್ ಮ್ಯಾಂಗೊ ಎಂದು ಆರ್​​ಸಿಬಿಯ ಕಾಲೆಳೆದಿದ್ದರು. ಇದಾದ ಬಳಿಕ ಅಫ್ಘಾನ್ ಆಟಗಾರನಿಗೆ ಮ್ಯಾಂಗೊ ನವೀನ ಎಂಬ ಟ್ಯಾಗ್​ ಲೈನ್ ಸೃಷ್ಟಿಯಾಯಿತು.

ಝಾಹಿರ್ ಯೂಸುಫ್
|

Updated on:Nov 28, 2024 | 10:32 AM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಲ್ಲಿ ಸಖತ್ ಸದ್ದು ಮಾಡಿದ್ದ ಅಫ್ಘಾನಿಸ್ತಾನ್ ಆಟಗಾರ ನವೀನ್ ಉಲ್ ಹಕ್​ಗೆ ಈ ಬಾರಿ ಅದೃಷ್ಟ ಕೈ ಕೊಟ್ಟಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ನವೀನ್ ಅವರ ಖರೀದಿಗೆ ಈ ಬಾರಿ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಸಿಲ್ಲ ಎಂಬುದು ವಿಶೇಷ.

1 / 5
ಇದಕ್ಕೆ ಒಂದು ಕಾರಣ ಈ ಹಿಂದಿನ ಘಟನೆ ಎಂದು ವಿಶ್ಲೇಷಿಸಲಾಗುತ್ತಿದೆ. ಐಪಿಎಲ್ 2023ರ RCB vs LSG ನಡುವಣ ಪಂದ್ಯದ ವೇಳೆ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಇದಾದ ಬಳಿಕ ಅಫ್ಘಾನ್ ಆಟಗಾರ ಕಿಂಗ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

2 / 5
ಅಲ್ಲದೆ ಕಳೆದ ಸೀಸನ್​​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದ ವೇಳೆ ನವೀನ್ ಉಲ್ ಹಕ್ ವಿರುದ್ಧ ಅಭಿಮಾನಿಗಳಿಂದ ಮೂದಲಿಕೆ ಕೂಡ ಕೇಳಿ ಬಂದಿತ್ತು. ಇದು ಲಕ್ನೋ ಫ್ರಾಂಚೈಸಿಯ ಮೇಲೂ ಪರೋಕ್ಷ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

3 / 5
ಇದೇ ಕಾರಣದಿಂದ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಕೂಡ ನವೀನ್ ಉಲ್ ಹಕ್ ಅವರನ್ನು ಕೈ ಬಿಟ್ಟಿದೆ. ಅತ್ತ ಉಳಿದ ಫ್ರಾಂಚೈಸಿಗಳ ಕೂಡ ನವೀನ್ ಅವರನ್ನು ಮೂಲ ಬೆಲೆಗೆ ಖರೀದಿಸಲು ಮುಂದಾಗಲಿಲ್ಲ. ಇನ್ನು ಕೊನೆಯ ಸುತ್ತಿನ ಶಾರ್ಟ್ ಲಿಸ್ಟ್ ಪಟ್ಟಿಯಲ್ಲೂ ನವೀನ್ ಉಲ್ ಹಕ್ ಸ್ಥಾನ ಪಡೆದಿರಲಿಲ್ಲ. ಅಂದರೆ ಕಳೆದ ಸೀಸನ್​​ನಲ್ಲಿ 10 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದ ನವೀನ್ ಈ ಬಾರಿ ಯಾವುದೇ ಫ್ರಾಂಚೈಸಿಯ ಹಿಟ್ ಲಿಸ್ಟ್​​ನಲ್ಲಿರಲಿಲ್ಲ ಎಂಬುದು ಸ್ಪಷ್ಟ.

4 / 5
ಹೀಗಾಗಿಯೇ ಇದೀಗ ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಯ ಮೂಲಕ ನವೀನ್ ಉಲ್ ಹಕ್ ಅವರನ್ನು ವಿರಾಟ್ ಕೊಹ್ಲಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಅತ್ತ ಎರಡು ಸೀಸನ್​​ಗಳ ಮೂಲಕ 18 ಪಂದ್ಯಗಳನ್ನಾಡಿರುವ ನವೀನ್ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಡುತ್ತಿರಬಹುದೇನೋ?

5 / 5

Published On - 10:31 am, Thu, 28 November 24