IPL 2025: ಸ್ಟಾರ್ ಆಟಗಾರರನ್ನು ಕೈ ಬಿಟ್ಟ ರಾಜಸ್ಥಾನ್: ನಾಲ್ವರು ರಿಟೈನ್

|

Updated on: Oct 31, 2024 | 8:53 AM

IPL 2025 Retention: ಐಪಿಎಲ್ ಮೆಗಾ ಹರಾಜಿಗೂ ಮುನ್ನ ತನ್ನೆಲ್ಲಾ ವಿದೇಶಿ ಆಟಗಾರರನ್ನು ಬಿಡುಗಡೆ ಮಾಡಲು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ನಿರ್ಧರಿಸಿದೆ. ಈ ಪಟ್ಟಿಯಲ್ಲಿ ಪ್ರಮುಖ ಆಟಗಾರರು ಇರುವುದು ವಿಶೇಷ. ಇನ್ನು ಆರ್​ಆರ್​ ಫ್ರಾಂಚೈಸಿಯು ನಾಲ್ವರು ಭಾರತೀಯ ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಮುಂದಾಗಿದೆ.

1 / 6
IPL 2025: ಐಪಿಎಲ್ ಸೀಸನ್-18 ರ ಮೆಗಾ ಹರಾಜಿಗೂ ಮೊದಲು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಆದರೆ ಈ ಪಟ್ಟಿಯಲ್ಲಿ ಸ್ಟಾರ್ ಆಟಗಾರರಾದ ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್, ರವಿಚಂದ್ರನ್ ಅಶ್ವಿನ್ ಹಾಗೂ ಯುಜ್ವೇಂದ್ರ ಚಹಲ್ ಇಲ್ಲ ಎಂಬುದು ವಿಶೇಷ. ಹಾಗಿದ್ರೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಉಳಿಸಿಕೊಂಡಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ...

2 / 6
ಸಂಜು ಸ್ಯಾಮ್ಸನ್: ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ತನ್ನ ಮೊದಲ ರಿಟೈನ್ ಆಗಿ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಉಳಿಸಿಕೊಂಡಿದೆ. ಇದಕ್ಕಾಗಿ ಆರ್​ಆರ್ ಫ್ರಾಂಚೈಸಿ ಸ್ಯಾಮ್ಸನ್ ಅವರಿಗೆ 18 ಕೋಟಿ ರೂ. ನೀಡಲಿದೆ ಎಂದು ತಿಳಿದು ಬಂದಿದೆ.

3 / 6
ಯಶಸ್ವಿ ಜೈಸ್ವಾಲ್: ಟೀಮ್ ಇಂಡಿಯಾ ಯುವ ಸೆನ್ಸೇಷನ್ ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 14 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ. ಕಳೆದ ಕೆಲ ಸೀಸನ್​ಗಳಿಂದ ಆರ್​ಆರ್​ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಜೈಸ್ವಾಲ್ ಐಪಿಎಲ್ 2025 ರಲ್ಲೂ ರಾಜಸ್ಥಾನ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.

4 / 6
ರಿಯಾನ್ ಪರಾಗ್: ಐಪಿಎಲ್ 2024 ರಲ್ಲಿ ಅತ್ಯುತ್ತಮ ಆಲ್​ರೌಂಡರ್ ಆಟದೊಂದಿಗೆ ಮಿಂಚಿರುವ ರಿಯಾನ್ ಪರಾಗ್ ಅವರನ್ನು ಸಹ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಂಡಿದೆ. ಇದಕ್ಕಾಗಿ ಪರಾಗ್ ಅವರಿಗೆ 11 ಕೋಟಿ ರೂ. ಪಾವತಿಸಲಿದೆ ಎಂದು ತಿಳಿದು ಬಂದಿದೆ.

5 / 6
ಸಂದೀಪ್ ಶರ್ಮಾ: ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬೌಲರ್​ಗಳ ಪಟ್ಟಿಯಲ್ಲಿ ಉಳಿಸಿಕೊಂಡಿರುವುದು ಸಂದೀಪ್ ಶರ್ಮಾ ಅವರನ್ನು. ಡೆತ್ ಬೌಲಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಸಂದೀಪ್ ಅವರನ್ನು ನಾಲ್ಕನೇ ರಿಟೈನ್ ಆಗಿ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ.

6 / 6
ಇನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯಲ್ಲಿ ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೇಲ್, ಟ್ರೆಂಟ್ ಬೌಲ್ಟ್, ಚಹಲ್​ನಂತಹ ಸ್ಟಾರ್ ಆಟಗಾರರಿದ್ದು, ಇವರಲ್ಲಿ ಯಾರ ಮೇಲೆ ಆರ್​ಟಿಎಂ ಆಯ್ಕೆಗಳನ್ನು ಬಳಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.