IPL 2025: CSK ಉಳಿಸಿಕೊಂಡ ಐವರು ಆಟಗಾರರು ಇವರೇ

IPL 2025 Retention: ಸಿಎಸ್​ಕೆ ಫ್ರಾಂಚೈಸಿಯು ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಒಟ್ಟು ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಇದರ ಜೊತೆಗೆ ಒಂದು ಆರ್​ಟಿಎಂ ಕೂಡ ಬಳಸಿಕೊಳ್ಳಲು ಅವಕಾಶವಿದ್ದು, ಅದರಂತೆ ಚೆನ್ನೈ ಸೂಪರ್ ಕಿಂಗ್ಸ್​ ಯಾರನ್ನು ಆರ್​ಟಿಎಂ ಆಯ್ಕೆಯಡಿಯಲ್ಲಿ ಬಿಡುಗಡೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

|

Updated on: Oct 31, 2024 | 11:23 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ಆರು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಇಂದು (ಅ.31) ಸಲ್ಲಿಸಬೇಕು. ಅದಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ರಿವೀಲ್ ಆಗಿದೆ. ಆ ಆಟಗಾರರು ಯಾರೆಂದರೆ....

1 / 6
ರುತುರಾಜ್ ಗಾಯಕ್ವಾಡ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಮುಂದಿನ ಸೀಸನ್​ಗಾಗಿ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಅಲ್ಲದೆ ಕಳೆದ ಸೀಸನ್​ನಲ್ಲಿ ತಂಡವನ್ನು ಮುನ್ನಡೆಸಿರುವ ಕಾರಣ ಐಪಿಎಲ್ 2025 ರಲ್ಲೂ ರುತುರಾಜ್ ನಾಯಕರಾಗಿ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

2 / 6
ರವೀಂದ್ರ ಜಡೇಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ಯೆಲ್ಲೋ ಆರ್ಮಿಯಲ್ಲೇ ಮುಂದುವರೆದಿದ್ದಾರೆ. ಕಳೆದ ಬಾರಿ 16 ಕೋಟಿ ರೂ. ಪಡೆದಿದ್ದ ಜಡ್ಡು ಈ ಬಾರಿ 18 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

3 / 6
ಶಿವಂ ದುಬೆ: ಸಿಎಸ್​ಕೆ ಪರ ಕಳೆದ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶಿವಂ ದುಬೆ ಅವರನ್ನು ಸಹ ಮುಂದಿನ ಸೀಸನ್​ಗಾಗಿ ಮುಂದುವರೆಸಿದ್ದಾರೆ. ಹೀಗಾಗಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ದುಬೆ ಕೂಡ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.

4 / 6
ಮತೀಶ ಪತಿರಾಣ: ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆ ಮಾಡಲು ಸುತಾರಂ ಸಿದ್ಧರಿಲ್ಲ. ಹೀಗಾಗಿಯೇ ಬೃಹತ್ ಮೊತ್ತ ನೀಡಿ ಯಾರ್ಕರ್ ಸ್ಪೆಷಲಿಸ್ಟ್ ಬೌಲರ್​ನನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಅದರಂತೆ ಐಪಿಎಲ್ 2025 ರಲ್ಲೂ ಪತಿರಾಣ ಸಿಎಸ್​ಕೆ ಪರ ಕಣಕ್ಕಿಳಿಯಲಿದ್ದಾರೆ.

5 / 6
ಮಹೇಂದ್ರ ಸಿಂಗ್ ಧೋನಿ: ನಿರೀಕ್ಷೆಯಂತೆ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2025 ರಲ್ಲೂ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಈ ಬಾರಿ ಸಿಎಸ್​ಕೆ ಫ್ರಾಂಚೈಸಿಯು ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಅದರಂತೆ ಐಪಿಎಲ್ ಸೀಸನ್-18 ರಲ್ಲೂ ಧೋನಿ ಹವಾ ಮುಂದುವರೆಯಲಿದೆ.

6 / 6
Follow us
‘ನಿಮ್ಮ ಗುಣವೇ ಸರಿಯಿಲ್ಲ’; ಮಂಜು-ಭವ್ಯಾ ಮಧ್ಯೆ ನಡೆಯಿತು ಜಗಳ

Daily Devotional: ಅಭ್ಯಂಜನ ಸ್ನಾನದ ಮಹತ್ವ ಹಾಗೂ ಪ್ರಯೋಜನ ತಿಳಿಯಿರಿ

Nithya Bhavishya: ನರಕ ಚತುರ್ದಶಿ ದಿನದ ರಾಶಿ ಭವಿಷ್ಯ ತಿಳಿಯಿರಿ

ಜಾಮೀನು ಪಡೆದು ಬಳ್ಳಾರಿಯಿಂದ ಹೊರಟ ದರ್ಶನ್ ಕಾರಿಗೆ ಮುಗಿಬಿದ್ದ ಅಭಿಮಾನಿಗಳು

ಪ್ರಚಾರಕ್ಕೆ ಹೋದ ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ತರಾಟೆಗೆ ತೆಗೆದುಕೊಂಡ ಜನ

‘ಕಾಟೇರ’ ಶೂಟಿಂಗ್ ವೇಳೆಯೇ ದರ್ಶನ್​ಗೆ ಬೆನ್ನು ನೋವು ಇತ್ತು: ತರುಣ್ ಸುಧೀರ್

ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು

ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು

ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ

ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ