IPL 2025: RCB ತಂಡಕ್ಕಿದೆ ಇನ್ನೂ ಮೂವರನ್ನು ಉಳಿಸಿಕೊಳ್ಳುವ ಅವಕಾಶ..!

IPL 2025 RCB: ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗೆ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆರಕ್ಕಿಂತ ಕಡಿಮೆ ಆಟಗಾರರನ್ನು ಉಳಿಸಿಕೊಂಡರೆ, ಅದರ ಬದಲಿಗೆ ಆರ್​ಟಿಎಂ ಆಯ್ಕೆ ಬಳಸಿಕೊಳ್ಳಬಹುದು. ಅದರಂತೆ ಇದೀಗ ಮೂವರನ್ನು ಉಳಿಸಿಕೊಂಡಿರುವ ಆರ್​ಸಿಬಿ ಬಳಿ 3 ಆರ್​ಟಿಎಂ ಆಯ್ಕೆಗಳಿವೆ.

|

Updated on: Nov 02, 2024 | 8:03 AM

IPL 2025: ಐಪಿಎಲ್ ಸೀಸನ್-18ರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಮೂವರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ಆರ್​ಸಿಬಿ ತಂಡದ ಮೊದಲ ರಿಟೈನ್ ವಿರಾಟ್ ಕೊಹ್ಲಿ. ಹಾಗೆಯೇ ದ್ವಿತೀಯ ರಿಟೈನ್ ರಜತ್ ಪಾಟಿದಾರ್. ಇನ್ನು ಮೂರನೇ ಆಟಗಾರನಾಗಿ ಅನ್​ಕ್ಯಾಪ್ಡ್​ ಪಟ್ಟಿಯಲ್ಲಿ ಯಶ್ ದಯಾಳ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ.

1 / 7
ಇಲ್ಲಿ ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ. ನೀಡಿ ಉಳಿಸಿಕೊಂಡರೆ, ರಜತ್ ಪಾಟಿದಾರ್​ಗೆ 11 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಯಶ್ ದಯಾಳ್ 5 ಕೋಟಿ ರೂ.ಗೆ ರಿಟೈನ್ ಆಗಿದ್ದಾರೆ. ಅಂದರೆ ಆರ್​ಸಿಬಿ ಫ್ರಾಂಚೈಸಿಯು ಮೂವರು ಆಟಗಾರರನ್ನು ಉಳಿಸಿಕೊಳ್ಳಲು 37 ಕೋಟಿ ರೂ. ಖರ್ಚು ಮಾಡಿದೆ.

2 / 7
ಈ ಮೂವರು ಆಟಗಾರರಲ್ಲದೇ ಇನ್ನೂ ಮೂರು ಪ್ಲೇಯರ್ಸ್ ಅನ್ನು ತಂಡದಲ್ಲೇ ಉಳಿಸಿಕೊಳ್ಳಲು ಆರ್​ಸಿಬಿಗೆ ಅವಕಾಶವಿದೆ. ಅಂದರೆ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೂವರು ಆಟಗಾರರ ಮೇಲೆ ಆರ್​ಟಿಎಂ ಆಯ್ಕೆಯನ್ನು ಬಳಸಿಕೊಳ್ಳಬಹುದು. ಈ ಆಯ್ಕೆಯನ್ನು ಬಳಸಿ ಆರ್​ಸಿಬಿ ಮೂವರನ್ನು ಬಿಡುಗಡೆ ಮಾಡಿದರೆ, ಬಿಡ್ಡಿಂಗ್ ವೇಳೆ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು.

3 / 7
ಇಲ್ಲಿ ಆರ್​ಟಿಎಂ ಆಯ್ಕೆ ಎಂದರೆ ರೈಟ್ ಟು ಮ್ಯಾಚ್ (RTM) ಆಪ್ಷನ್. ಅಂದರೆ ಮೆಗಾ ಹರಾಜಿನಲ್ಲಿ ಆಟಗಾರರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ವಿಶೇಷ ಆಯ್ಕೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಆಟಗಾರರ ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುವುದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆರ್​ಟಿಎಂ ಆಯ್ಕೆಯನ್ನು ಬಳಸಲಾದ ಆಟಗಾರನನ್ನು ನೇರವಾಗಿ ಆಯ್ಕೆ ಮಾಡುವಂತಿಲ್ಲ ಎಂಬುದು.

4 / 7
ಅಂದರೆ ಒಬ್ಬ ಆಟಗಾರನ ಮೇಲೆ ಆರ್​ಟಿಎಂ ಆಯ್ಕೆ ಬಳಸಿದರೆ ಆತನನ್ನು ಮೆಗಾ ಹರಾಜಿಗಾಗಿ ಬಿಡುಗಡೆ ಮಾಡಬೇಕಾಗುತ್ತದೆ. ಇದಾಗ್ಯೂ ಮೆಗಾ ಹರಾಜಿನಲ್ಲಿ ಆ ಆಟಗಾರನ ಸಂಪೂರ್ಣ ಹಕ್ಕು ಬಿಡುಗಡೆ ಮಾಡಿದ ಫ್ರಾಂಚೈಸಿಯ ಬಳಿಯೇ ಇರಲಿದೆ. ಇದುವೇ RTM ಆಯ್ಕೆಯ ವಿಶೇಷತೆ.

5 / 7
ಉದಾಹರಣೆಗೆ: ಆರ್​ಸಿಬಿ ತಂಡವು ಮೊಹಮ್ಮದ್ ಸಿರಾಜ್ ಅವರನ್ನು ಬಿಡುಗಡೆ ಮಾಡಿದೆ. ಆದರೆ ಹರಾಜಿಗೂ ಮುನ್ನ ಅವರ ಮೇಲೆ ಆರ್​ಟಿಎಂ ಆಯ್ಕೆ ಬಳಸಿದರೆ, ಸಿರಾಜ್ ಅವರ ಮೇಲಿನ ಹಕ್ಕು ಆರ್​ಸಿಬಿ ಬಳಿಯೇ ಇರುತ್ತದೆ. ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್​ (ಆರ್​ಟಿಎಂ) ಅವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯು 10 ಕೋಟಿ ರೂ.ವರೆಗೆ ಬಿಡ್ ಮಾಡಿತು ಎಂದಿಟ್ಟುಕೊಳ್ಳಿ. ಈ ವೇಳೆ ಆ ಮೊತ್ತವನ್ನು ತಾವೇ ನೀಡುತ್ತೇವೆ ಎಂದು ಸಿರಾಜ್ ಅವರನ್ನು ಆರ್​ಸಿಬಿ ಮರಳಿ ಖರೀದಿಸಬಹುದು. ಒಂದು ವೇಳೆ ಬಿಡುಗಡೆ ಮಾಡಿದ ತಂಡವು ಮರಳಿ ಖರೀದಿಸಲು ಇಚ್ಛಿಸದಿದ್ದರೆ ಮಾತ್ರ ಆರ್​ಟಿಎಂ ಆಯ್ಕೆಯಲ್ಲಿ ಕಾಣಿಸಿಕೊಂಡ ಆಟಗಾರರು ಕೊನೆಯದಾಗಿ ಬಿಡ್ ಮಾಡಿದ ತಂಡದ ಪಾಲಾಗಲಿದ್ದಾರೆ.

6 / 7
ಇದೀಗ ಮೂವರನ್ನು ಮಾತ್ರ ಉಳಿಸಿಕೊಂಡಿರುವ ಆರ್​ಸಿಬಿ ಬಳಿ ಮೂರು ಆರ್​ಟಿಎಂ ಆಯ್ಕೆಗಳಿವೆ. ಅಂದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಇಲ್ಲಿ ಆರ್​ಸಿಬಿ ಮೂವರನ್ನು ಮಾತ್ರ ರಿಟೈನ್ ಮಾಡಿಕೊಂಡಿರುವ ಕಾರಣ, ಇನ್ನುಳಿದ 3 ಸ್ಥಾನಗಳಲ್ಲಿ ಆರ್​ಟಿಎಂ ಆಯ್ಕೆಯನ್ನು ಬಳಸಿಕೊಳ್ಳಬಹುದು. ಅದರಂತೆ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಯಾವೆಲ್ಲಾ ಆಟಗಾರರನ್ನು ಆರ್​ಟಿಎಂ ಆಯ್ಕೆ ಬಳಸಿ ತಂಡದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

7 / 7
Follow us
ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ

ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್

ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್

ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ

ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು

ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೇರ ಪ್ರಸಾರ

ರಾಜ್ಯೋತ್ಸವದಂದು ಹಿಂದಿ ಸಿನಿಮಾ ಕನ್ನಡಪರ ಸಂಘಟನೆಗಳ ವಿರೋಧ

ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ

ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!