IPL 2025: ರೋಹಿತ್ ಶರ್ಮಾ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಕಿಂಗ್ಸ್

|

Updated on: Aug 26, 2024 | 10:04 AM

IPL 2025: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದರು. ಅಲ್ಲದೆ ತಂಡದ ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿಯೇ ಈ ಬಾರಿಯ ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವುದಿಲ್ಲ ಎನ್ನಲಾಗುತ್ತಿದೆ. ಇತ್ತ ರೋಹಿತ್ ಶರ್ಮಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದನ್ನು ಹಲವು ಫ್ರಾಂಚೈಸಿಗಳು ಎದುರು ನೋಡುತ್ತಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್​ನ ಯಶಸ್ವಿ ನಾಯಕ ರೋಹಿತ್ ಶರ್ಮಾ ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲೇ ಉಳಿಯಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ಹಿಟ್​ಮ್ಯಾನ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಲವು ಫ್ರಾಂಚೈಸಿಗಳು ಹವಣಿಸುತ್ತಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಪಂಜಾಬ್ ಕಿಂಗ್ಸ್.

2 / 6
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ರೋಹಿತ್ ಶರ್ಮಾ ಅವರ ಮುಂದಿನ ನಡೆಯನ್ನು ಎದುರು ನೋಡುತ್ತಿದೆ. ಅಲ್ಲದೆ ಹಿಟ್​ಮ್ಯಾನ್ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದರೆ, ಅವರ ಖರೀದಿಗಾಗಿಯೇ 50 ಕೋಟಿ ರೂ. ತೆಗೆದಿಡಲು ಈ ಎರಡು ಫ್ರಾಂಚೈಸಿಗಳು ಪ್ಲ್ಯಾನ್ ರೂಪಿಸಿದೆ ಎಂದು ವರದಿಯಾಗಿದೆ.

3 / 6
ಇದರ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಹಿಟ್​​ ಲಿಸ್ಟ್​ನಲ್ಲೂ ರೋಹಿತ್ ಶರ್ಮಾ ಹೆಸರು ಇರುವುದು ಬಹಿರಂಗವಾಗಿದೆ. ಏಕೆಂದರೆ  ಮುಂದಿನ ಸೀಸನ್​ ಐಪಿಎಲ್​​ಗಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ನಾಯಕನ ಅಗತ್ಯತೆಯಿದೆ. ಹಾಲಿ ನಾಯಕರಾಗಿರುವ ಶಿಖರ್ ಧವನ್ ಅವರನ್ನು ಪಂಜಾಬ್ ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿಲ್ಲ.

4 / 6
ಹೀಗಾಗಿ ನಾಯಕತ್ವ ಗುಣವಿರುವ ಕೆಲ ಆಟಗಾರರ ಹಿಟ್​ ಲಿಸ್ಟ್ ಅನ್ನು ಪಂಜಾಬ್ ಕಿಂಗ್ಸ್ ರೆಡಿ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರು ಮುಂಚೂಣಿಯಲ್ಲಿದೆ. ಒಂದು ವೇಳೆ ಹಿಟ್​ಮ್ಯಾನ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗೆ ಪಂಜಾಬ್ ಕಿಂಗ್ಸ್ ಪೈಪೋಟಿಗೆ ಇಳಿಯುವುದು ಖಚಿತ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಸಂಜಯ್ ಬಂಗಾರ್ ನೀಡಿರುವ ಹೇಳಿಕೆ.

5 / 6
ಪಂಜಾಬ್ ಕಿಂಗ್ಸ್ ಅಭಿವೃದ್ಧಿಯ ಮುಖ್ಯಸ್ಥರಾಗಿರುವ ಸಂಜಯ್ ಬಂಗಾರ್ ಅವರಲ್ಲಿ ರೋಹಿತ್ ಶರ್ಮಾ ಅವರ ಖರೀದಿ ಬಗ್ಗೆ ಪ್ರಶ್ನಿಸಲಾಗಿದೆ. ಈ ವೇಳೆ ಈ ಸಾಧ್ಯತೆಯನ್ನು ತಳ್ಳಿ ಹಾಕಲು ಅವರು ನಿರಾಕರಿಸಿದರು. ಅಲ್ಲದೆ ರೋಹಿತ್ ಶರ್ಮಾ ಅವರು ಹರಾಜಿಗೆ ಬಂದರೆ ಬೃಹತ್ ಮೊತ್ತ ಪಡೆಯಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ಕೂಡ ಹಿಟ್​ಮ್ಯಾನ್ ಖರೀದಿಗಾಗಿ ಬೃಹತ್ ಮೊತ್ತವನ್ನು ವ್ಯಯಿಸಲು ಸಿದ್ಧವಿರುವುದಾಗಿ ಸಂಜಯ್ ಬಂಗಾರ್ ಪರೋಕ್ಷವಾಗಿ ತಿಳಿಸಿದ್ದಾರೆ.

6 / 6
ಹೀಗಾಗಿ ರೋಹಿತ್ ಶರ್ಮಾ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಬಿಡ್ಡಿಂಗ್ ಪೈಪೋಟಿಯಂತು ಕಂಡು ಬರಲಿದೆ. ಅದರಲ್ಲೂ ನಾಯಕನ ಹುಡುಕಾಟದಲ್ಲಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಹಿಟ್​ಮ್ಯಾನ್ ಖರೀದಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುವುದಂತು ದಿಟ. ಅದರಂತೆ ರೋಹಿತ್ ಶರ್ಮಾ ಮುಂದಿನ ಸೀಸನ್​ನಲ್ಲಿ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಕಾದು ನೋಡಬೇಕಿದೆ.