ಇದಲ್ಲದೇ ನ್ಯೂಯಾರ್ಕ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಪಂದ್ಯವೂ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ ಹಾಗೂ ಕಳಪೆ ಪಿಚ್ ಕಾರಣದಿಂದಾಗಿ ಪಂದ್ಯ ಕಡಿಮೆ ಸ್ಕೋರಿಂಗ್ ಆಗಿತ್ತು. ಇಷ್ಟೇ ಅಲ್ಲ, ಟ್ರಿನಿಡಾಡ್‌ನಲ್ಲಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಮೊದಲ ಸೆಮಿಫೈನಲ್ ಪಂದ್ಯವೂ ಕೂಡ ಏಕಪಕ್ಷೀಯವಾಗಿ ಅಂತ್ಯಗೊಂಡಿದ್ದರಿಂದಲೂ ನಷ್ಟು ಉಂಟಾಗಿದೆ. ಇದಲ್ಲದೆ, ಅನೇಕ ಪಂದ್ಯಗಳ ಆರಂಭದ ಸಮಯ ಮತ್ತು ಪಂದ್ಯಾವಳಿಯ ಮಾರುಕಟ್ಟೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿರುವ ಸ್ಟಾರ್ ಡಿಸ್ನಿ, ಐಸಿಸಿ ಬಳಿ ರಿಯಾಯಿತಿಗೆ ಒತ್ತಾಯಿಸಿದೆ.