IPL 2025: ಅನ್​ಸೋಲ್ಡ್ ಆದ ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ

|

Updated on: Nov 26, 2024 | 9:32 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೆಗಾ ಹರಾಜಿನಲ್ಲಿ ಹತ್ತಕ್ಕೂ ಸ್ಟಾರ್ ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಇಂಗ್ಲೆಂಡ್​ನ ಜಾನಿ ಬೈರ್​ಸ್ಟೋವ್, ಟೀಮ್ ಇಂಡಿಯಾದ ಶಾರ್ದೂಲ್ ಠಾಕೂರ್ ಕೂಡ ಇದ್ದಾರೆ.

1 / 12
ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 574 ಆಟಗಾರರು ಕಾಣಿಸಿಕೊಂಡಿದ್ದರು. ಇವರಲ್ಲಿ 182 ಆಟಗಾರರು ಹರಾಜಾದರೆ, 392 ಆಟಗಾರರು ಬಿಕರಿಯಾಗದೇ ಉಳಿದಿದ್ದಾರೆ. ಇನ್ನು ಅನ್​​ಸೋಲ್ಡ್ ಆಗಿರುವ ಪ್ಲೇಯರ್ಸ್​ ಪಟ್ಟಿಯಲ್ಲಿ ಕೆಲ ಸ್ಟಾರ್ ಆಟಗಾರರು ಕೂಡ ಇದ್ದಾರೆ. ಹೀಗೆ ಮಾರಾಟವಾಗದೇ ಉಳಿದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ…

2 / 12
ಡೇವಿಡ್ ವಾರ್ನರ್: ಐಪಿಎಲ್​ ಇತಿಹಾಸದ ಅತ್ಯಂತ ಯಶಸ್ವಿ ಬ್ಯಾಟರ್​ಗಳಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು. ಆದರೆ ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ವಾರ್ನರ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಿಲ್ಲ.

3 / 12
ಶಾರ್ದೂಲ್ ಠಾಕೂರ್: ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಆಲ್​ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಲ್ಲ.

4 / 12
ಮಯಾಂಕ್​ ಅಗರ್ವಾಲ್: ಕಳೆದ ಸೀಸನ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದ ಮಯಾಂಕ್ ಅಗರ್ವಾಲ್ ಈ ಬಾರಿ 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಕನ್ನಡಿಗನ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗದಿರುವುದು ವಿಪರ್ಯಾಸ.

5 / 12
ಕೇನ್ ವಿಲಿಯಮ್ಸನ್: ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದ ಕೇನ್ ವಿಲಿಯಮ್ಸನ್ ಕೂಡ ಈ ಬಾರಿ ಮಾರಾಟವಾಗದೇ ಉಳಿದಿದ್ದಾರೆ. 1.50 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ನ್ಯೂಝಿಲೆಂಡ್ ಆಟಗಾರನ ಖರೀದಿಗೆ 10 ಫ್ರಾಂಚೈಸಿಗಳು ನಿರಾಸಕ್ತಿ ತೋರಿದೆ.

6 / 12
ಜಾನಿ ಬೈರ್​ಸ್ಟೋವ್: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಪರ ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದ ಜಾನಿ ಬೈರ್​ಸ್ಟೋವ್ ಕೂಡ ಬಿಕರಿಯಾಗದೇ ಉಳಿದಿದ್ದಾರೆ. 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಬೈರ್​ಸ್ಟೋವ್ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.

7 / 12
ಮುಸ್ತಾಫಿಜುರ್ ರೆಹಮಾನ್: ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡಿದ್ದ ಮುಸ್ತಫಿಜುರ್ ರೆಹಮಾನ್ ಕೂಡ ಅನ್​ಸೋಲ್ಡ್ ಆಗಿದ್ದಾರೆ. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಬಾಂಗ್ಲಾ ಬೌಲರ್​​ನ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ನಿರಾಸಕ್ತಿ ತೋರಿದೆ.

8 / 12
ರೈಲಿ ರೊಸ್ಸೊವ್: ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಬ್ಯಾಟ್ ಬೀಸಿದ್ದ ಸೌತ್ ಆಫ್ರಿಕಾ ದಾಂಡಿಗ ರೈಲಿ ರೊಸ್ಸೊವ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ಖರೀದಿಗೂ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ.

9 / 12
ಸ್ಟೀವ್ ಸ್ಮಿತ್: ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್ ಕಳೆದ ಸೀಸನ್​​ನಲ್ಲಿ ಅನ್​ಸೋಲ್ಡ್ ಆಗಿದ್ದರು. ಇದಾಗ್ಯೂ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಮಿತ್ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಿಲ್ಲ.

10 / 12
ಅಲ್ಝಾರಿ ಜೋಸೆಫ್: ಐಪಿಎಲ್ 2024 ರಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ವೆಸ್ಟ್ ಇಂಡೀಸ್ ವೇಗಿ ಅಲ್ಝಾರಿ ಜೋಸೆಫ್ ಕೂಡ ಅನ್​ಸೋಲ್ಡ್ ಆಗಿದ್ದಾರೆ. ಕಳೆದ ಬಾರಿ 11.5 ಕೋಟಿ ರೂ. ಪಡೆದಿದ್ದ ಅಲ್ಝಾರಿ ಈ ಬಾರಿ 2 ಕೋಟಿ ರೂ. ಮೂಲ ಬೆಲೆಗೆ ಮಾರಾಟವಾಗದಿರುವುದು ವಿಶೇಷ.

11 / 12
ಸಿಕಂದರ್ ರಾಝ: ಕಳೆದ ಸೀಸನ್​​ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಝಿಂಬಾಬ್ವೆ ತಂಡದ ಆಲ್​ರೌಂಡರ್ ಸಿಕಂದರ್ ರಾಝ ಅವರನ್ನು 1.25 ಕೋಟಿ ರೂ.ಗೆ ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ.

12 / 12
ಜೇಮ್ಸ್ ಅ್ಯಂಡರ್ಸನ್: ಇದೇ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ತಂಡದ ಮಾಜಿ ವೇಗಿ ಜೇಮ್ಸ್ ಅ್ಯಂಡರ್ಸನ್ ಕೂಡ ಅನ್​ಸೋಲ್ಡ್ ಆಗಿದ್ದಾರೆ. 1.25 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜು ಪಟ್ಟಿಯಲ್ಲಿದ್ದ ಅ್ಯಂಡರ್ಸನ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.