IPL 2025: RCB ಗೆ ಎಂಟ್ರಿ ಕೊಟ್ಟಿರುವ 8 ವಿದೇಶಿ ಆಟಗಾರರು ಇವರೇ

IPL 2025 RCB: ಐಪಿಎಲ್ ಸೀಸನ್-18 ಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಪಡೆಯನ್ನು ರೂಪಿಸಿಕೊಂಡಿದೆ. 3 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದ ಆರ್​ಸಿಬಿ ಇದೀಗ ಮೆಗಾ ಹರಾಜಿನ ಮೂಲಕ 19 ಆಟಗಾರರನ್ನು ಖರೀದಿಸಿದೆ. ಈ ಮೂಲಕ 22 ಸದಸ್ಯರ ತಂಡವನ್ನು ಕಟ್ಟಿದೆ.

ಝಾಹಿರ್ ಯೂಸುಫ್
|

Updated on: Nov 26, 2024 | 8:13 AM

ಐಪಿಎಲ್ ಮೆಗಾ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಲಿಷ್ಠ ಪಡೆಯನ್ನು ರೂಪಿಸಿದೆ. ಈ ಹರಾಜಿಗೂ ಮುನ್ನ ಮೂವರನ್ನು ರಿಟೈನ್ ಮಾಡಿಕೊಂಡಿದ್ದ ಆರ್​ಸಿಬಿಯು ಇದೀಗ 19 ಆಟಗಾರರನ್ನು ಖರೀದಿಸಿದೆ. ಈ 19 ಆಟಗಾರರಲ್ಲಿ 8 ವಿದೇಶಿ ಆಟಗಾರರಿದ್ದಾರೆ. ಅವರು ಯಾರೆಂದರೆ…

1 / 10
ಫಿಲ್ ಸಾಲ್ಟ್: ಕಳೆದ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಇಂಗ್ಲೆಂಡ್​ನ ಸ್ಪೋಟಕ ದಾಂಡಿಗ ಫಿಲ್ ಸಾಲ್ಟ್ ಅವರನ್ನು ಈ ಬಾರಿ ಆರ್​ಸಿಬಿ 11.50 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಆರ್​ಸಿಬಿ ಒಪನಿಂಗ್ ಹಾಗೂ ವಿಕೆಟ್ ಕೀಪರ್​ನ ಸ್ಥಾನವನ್ನು ತುಂಬಿಕೊಂಡಿದೆ.

2 / 10
ಲಿಯಾಮ್ ಲಿವಿಂಗ್​ಸ್ಟೋನ್: ಇಂಗ್ಲೆಂಡ್ ತಂಡದ ಆಲ್​ರೌಂಡರ್​ ಲಿಯಾಮ್ ಲಿವಿಂಗ್​ಸ್ಟೋನ್ ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ಲಿವಿಂಗ್​ಸ್ಟೋನ್ ಅವರನ್ನು 8.75 ಕೋಟಿ ರೂ. ನೀಡಿ ಖರೀದಿಸುವಲ್ಲಿ ಆರ್​ಸಿಬಿ ಯಶಸ್ವಿಯಾಗಿದೆ.

3 / 10
ಜೋಶ್ ಹ್ಯಾಝಲ್​ವುಡ್: ಐಪಿಎಲ್ 2023 ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಜೋಶ್ ಹ್ಯಾಝಲ್​ವುಡ್ ಕಳೆದ ಸೀಸನ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಐಪಿಎಲ್​ಗೆ ಮರಳಿರುವ ಆಸ್ಟ್ರೇಲಿಯಾ ವೇಗಿಯನ್ನು ಆರ್​ಸಿಬಿ 12.50 ಕೋಟಿ ರೂ. ನೀಡಿ ಖರೀದಿಸಿದೆ.

4 / 10
ಟಿಮ್ ಡೇವಿಡ್: ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾದ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್ ಅವರನ್ನು ಆರ್​ಸಿಬಿ ಫ್ರಾಂಚೈಸಿಯು 3 ಕೋಟಿ ರೂ.ಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.

5 / 10
ರೊಮಾರಿಯೊ ಶೆಫರ್ಡ್: ವೆಸ್ಟ್ ಇಂಡೀಸ್​ನ ಆಲ್​ರೌಂಡರ್ ರೊಮಾರಿಯೊ ಶೆಫರ್ಡ್ ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಈ ಬಾರಿಯ ಮೆಗಾ ಹರಾಜಿನಲ್ಲಿ ಕೇವಲ 1.5 ಕೋಟಿ ರೂ. ನೀಡಿ ರೊಮಾರಿಯೊ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಆರ್​ಸಿಬಿ ಯಶಸ್ವಿಯಾಗಿದೆ.

6 / 10
ಜೇಕೊಬ್ ಬೆಥೆಲ್: ಇಂಗ್ಲೆಂಡ್​ನ ಯುವ ಆಲ್​ರೌಂಡರ್​ನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 2.6 ಕೋಟಿ ರೂ. ನೀಡಿ ಖರೀದಿಸಿದೆ.

7 / 10
ನುವಾನ್ ತುಷಾರ: ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಈ ಬಾರಿ ಆರ್​ಸಿಬಿ ಫ್ರಾಂಚೈಸಿ ನುವಾನ್ ಅವರನ್ನು 1.6 ಕೋಟಿ ರೂ. ನೀಡಿ ಖರೀದಿಸಿದೆ.

8 / 10
ಲುಂಗಿ ಎನ್​ಗಿಡಿ: ಸೌತ್ ಆಫ್ರಿಕಾದ ವೇಗದ ಬೌಲರ್​ನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 1 ಕೋಟಿ ರೂ. ನೀಡಿ ಖರೀದಿಸಿದೆ. ಕಳೆದ ಸೀಸನ್​ನಲ್ಲಿ ಎನ್​ಗಿಡಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು.

9 / 10
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್​ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್​ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕೊಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್​ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್​ಗಿಡಿ.

10 / 10
Follow us
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ

Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ

ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!

ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್

‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ

ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್

ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ

ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?

ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ

ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು