IPL 2025: ಐಪಿಎಲ್ ಮೆಗಾ ಹರಾಜಿನ ಬಿಗ್ ಅಪ್ಡೇಟ್

|

Updated on: Sep 19, 2024 | 8:43 AM

IPL 2025 Mega Auction: ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ನಾಲ್ಕರಿಂದ ಆರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಇನ್ನುಳಿದ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಬೇಕಾಗುತ್ತದೆ. ಹೀಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ದಿನಾಂಕ ಸಹ ನಿಗದಿಯಾಗಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)​ ಸೀಸನ್-18ರ ಮೆಗಾ ಹರಾಜಿನ ಕುರಿತಾದ ಬಿಗ್ ಅಪ್​ಡೇಟ್​​ವೊಂದು ಹೊರಬಿದ್ದಿದೆ. ಈ ಮಾಹಿತಿ ಪ್ರಕಾರ, ಈ ಬಾರಿಯ ಮೆಗಾ ಆಕ್ಷನ್ ವಿದೇಶದಲ್ಲಿ ಜರುಗಲಿದೆ. ಇದಕ್ಕಾಗಿ ಈಗಾಗಲೇ ರೂಪುರೇಷೆಗಳು ಸಿದ್ಧವಾಗಿದ್ದು, ಅದರಂತೆ ನವೆಂಬರ್ ತಿಂಗಳಾಂತ್ಯದೊಳಗೆ ಮೆಗಾ ಹರಾಜು ನಡೆಯಲಿದೆ.

2 / 6
ಐಪಿಎಲ್​ನ ಮೆಗಾ ಹರಾಜಿನ ಆತಿಥ್ಯವಹಿಸಿಕೊಳ್ಳಲು ಈಗಾಗಲೇ ಸೌದಿ ಅರೇಬಿಯಾ ಆಸಕ್ತಿವಹಿಸಿದೆ. ಈ ಹಿಂದೆ ದುಬೈನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆಗಳು ನಡೆದಿದ್ದವು. ಹೀಗಾಗಿ ಈ ಸಲ ಕೂಡ ಅರಬ್ ನಾಡಿನಲ್ಲಿ ಮೆಗಾ ಆಕ್ಷನ್ ನಡೆಯುವುದು ಬಹುತೇಕ ಖಚಿತ ಎನ್ನಬಹುದು.

3 / 6
ಇನ್ನು ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಮೆಗಾ ಹರಾಜು ನವೆಂಬರ್ 3ನೇ ಅಥವಾ 4ನೇ ವಾರ ನಡೆಯಲಿದೆ. ಅಂದರೆ ನವೆಂಬರ್ ಅಂತ್ಯದೊಳಗೆ ಹರಾಜು ಪ್ರಕ್ರಿಯೆ ಮುಗಿಸಲು ಈಗಾಗಲೇ ನಿರ್ಧರಿಸಲಾಗಿದೆ. ಹೀಗಾಗಿ ಡಿಸೆಂಬರ್​ಗೂ ಮುನ್ನ 10 ಫ್ರಾಂಚೈಸಿಗಳು ತಮ್ಮ ಹೊಸ ತಂಡಗಳನ್ನು ಘೋಷಿಸುವುದು ಖಚಿತ.

4 / 6
ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 4 ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಹೀಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 15 ರವರೆಗೆ ಗಡುವು ನೀಡಲಾಗುತ್ತದೆ. ಅಂದರೆ ನವೆಂಬರ್ 15 ಕ್ಕೂ ಮುಂಚಿತವಾಗಿ ಪ್ರತಿ ಫ್ರಾಂಚೈಸಿಗಳು ರಿಟೈನ್ ಪಟ್ಟಿಯನ್ನು ಸಲ್ಲಿಸಬೇಕು.

5 / 6
ಇದಾದ ಬಳಿಕ ಐಪಿಎಲ್ ಹರಾಜು ನೋಂದಾಣಿ ಶುರುವಾಗಲಿದೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ ಸಾವಿರಕ್ಕೂ ಆಟಗಾರರು ತಮ್ಮ ಹೆಸರು ರಿಜಿಸ್ಟರ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಆಟಗಾರರನ್ನು ಶಾರ್ಟ್ ಲೀಸ್ಟ್ ಮಾಡಿದ ಬಳಿಕ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಂತೆ 500 ರಿಂದ 600 ಆಟಗಾರರು ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

6 / 6
ಪ್ರಸ್ತುತ ಮಾಹಿತಿ ಪ್ರಕಾರ, ಐಪಿಎಲ್ ಮೆಗಾ ಹರಾಜಿಗೂ ಮುನ್ನ 4 ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಿದ್ದಾರೆ. ಅಂದರೆ ಇಲ್ಲಿ ನಾಲ್ವರನ್ನು ರಿಟೈನ್ ಮಾಡಿಕೊಂಡರೆ, ಇಬ್ಬರ ಮೇಲೆ ಆರ್​ಟಿಎಂ ಆಯ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ವರದಿಗಳಾಗಿವೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ 4+2 ನಿಯಮ ಜಾರಿಗೆಯಾಗುವ ಸಾಧ್ಯತೆಯಿದೆ.