IPL 2025: ಬ್ಯಾಟ್ಸ್‌ಮನ್​ಗಳ ಅಬ್ಬರಕ್ಕೆ ಬ್ರೇಕ್ ಹಾಕಿ ಬೌಲರ್‌ಗಳ ಬೆನ್ನಿಗೆ ನಿಂತ ಬಿಸಿಸಿಐ

|

Updated on: Mar 20, 2025 | 4:50 PM

BCCI Introduces Two-Ball Rule in IPL: ಬಿಸಿಸಿಐ ಐಪಿಎಲ್‌ನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ರಾತ್ರಿ ಪಂದ್ಯಗಳ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಎರಡು ಚೆಂಡುಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಇದು ಇಬ್ಬನಿಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಟಾಸ್ ಗೆದ್ದ ತಂಡಕ್ಕೆ ಆಗುವ ಅನುಕೂಲವನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. 11ನೇ ಓವರ್ ನಂತರ ಎರಡನೇ ಚೆಂಡನ್ನು ಬಳಸಬಹುದು. ಆದರೆ ಎರಡೂ ಹೊಸ ಚೆಂಡುಗಳಾಗಿರುತ್ತವೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಿಯಮವು ರಾತ್ರಿ ಪಂದ್ಯಗಳಿಗೆ ಮಾತ್ರ ಅನ್ವಯವಾಗುತ್ತದೆ.

1 / 7
ವಾಡಿಕೆಯಂತೆ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈನ ಕೇಂದ್ರ ಕಛೇರಿಯಲ್ಲಿ ಎಲ್ಲಾ 10 ತಂಡಗಳ ನಾಯಕರ ಸಭೆ ನಡೆಸುತ್ತಿರುವ ಬಿಸಿಸಿಐ, ಈ ಸಭೆಯಲ್ಲಿ ಇದುವರೆಗೆ ಜಾರಿಯಲ್ಲಿದ್ದ ಕೆಲವು ಐಪಿಎಲ್​ ನಿಯಮಗಳನ್ನು ರದ್ದು ಮಾಡುವುದರ ಜೊತೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದೆ. ಹೊಸದಾಗಿ ಜಾರಿಗೆ ತಂದಿರುವ ನಿಯಮಗಳ ಪೈಕಿ ಒಂದು ಇನ್ನಿಂಗ್ಸ್​ನಲ್ಲಿ 2 ಚೆಂಡುಗಳನ್ನು ಬಳಸುವ ನಿಯಮವೂ ಒಂದಾಗಿದೆ.

2 / 7
ಈ ಮೊದಲು ಐಪಿಎಲ್​ ಪಂದ್ಯದ ಒಂದು ಇನ್ನಿಂಗ್ಸ್​ನಲ್ಲಿ ಒಂದು ಚೆಂಡನ್ನು ಮಾತ್ರ ಬಳಸಲಾಗುತ್ತಿತ್ತು. ಒಂದು ವೇಳೆ ಚೆಂಡು ತನ್ನ ಆಕಾರವನ್ನು ಕಳೆದುಕೊಂಡರೆ, ಕಳೆದುಹೋದರೆ ಅಥವಾ ಆಡಲು ಯೋಗ್ಯವಿಲ್ಲದಿದ್ದರೆ ಮಾತ್ರ ಬದಲಿ ಚೆಂಡನ್ನು ಬಳಸಲಾಗುತ್ತಿತ್ತು. ಆದರೆ ಆ ಸಮಯದಲ್ಲೂ ಹೊಸ ಚೆಂಡನ್ನು ನೀಡಲಾಗುತ್ತಿರಲಿಲ್ಲ. ಬದಲಿಗೆ ಸಂದರ್ಭಕ್ಕನುಸಾರವಾಗಿ ಹಳೆಯ ಚೆಂಡನ್ನು ಬಳಸಲಾಗುತ್ತಿತ್ತು.

3 / 7
ಇದೀಗ ಹೊಸದಾಗಿ ಜಾರಿಗೆ ಬಂದಿರುವ ನಿಯಮದ ಪ್ರಕಾರ, ರಾತ್ರಿ ಪಂದ್ಯದ ಸಮಯದಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಎರಡು ಚೆಂಡುಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಎರಡೂ ಹೊಸ ಚೆಂಡನ್ನು ನೀಡಲಾಗುತ್ತದೆಯೋ ಅಥವಾ ಸೆಮಿ-ನ್ಯೂ ಚೆಂಡನ್ನು ನೀಡಲಾಗುತ್ತದೆಯೋ ಎಂಬುದು ಇನ್ನು ಖಚಿತವಾಗಿಲ್ಲ.

4 / 7
ಈ ನಿಯಮದ ಪ್ರಕಾರ, ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡವು ಪಂದ್ಯದ 11 ನೇ ಓವರ್‌ನ ನಂತರ ಎರಡನೇ ಚೆಂಡನ್ನು ಬಳಸಬಹುದಾಗಿದೆ. ರಾತ್ರಿ ಪಂದ್ಯಗಳಲ್ಲಿ ಇಬ್ಬನಿಯ ಪರಿಣಾಮವನ್ನು ಕಡಿಮೆ ಮಾಡುವುದು ಈ ನಿಯಮವನ್ನು ಪರಿಚಯಿಸುವ ಹಿಂದಿನ ಉದ್ದೇಶವಾಗಿದೆ. ಇಬ್ಬನಿಯಿಂದಾಗಿ ಚೆಂಡು ಜಾರುತ್ತದೆ, ಇದು ಬೌಲರ್‌ಗಳಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲವಾಗುತ್ತದೆ.

5 / 7
ಹೀಗಾಗಿ ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಇಷ್ಟು ದಿನ ಆಗುತ್ತಿದ್ದ ಅನಾನುಕೂಲವನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ ಈ ನಿಯಮವನ್ನು ಜಾರಿಗೆ ತಂದಿದೆ. ಇದೀಗ ಈ ನಿಯಮ ಮೇಲೆ ಹೇಳಿದಂತೆ ಟಾಸ್ ಗೆದ್ದ ತಂಡಕ್ಕೆ ನೀಡುವ ಅನುಕೂಲವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ ಎರಡು ಚೆಂಡುಗಳ ಬಳಕೆ ಹೇಗೆ ಎಂಬುದರ ಬಗ್ಗೆ ಸ್ಪಷ್ಟನೆ ಇನ್ನಷ್ಟೆ ಹೊರಬೀಳಬೇಕಾಗಿದೆ.

6 / 7
ಒಂದು ವೇಳೆ ಬೌಲಿಂಗ್ ಮಾಡುವ ತಂಡಕ್ಕೆ 11 ಓವರ್​ಗಳ ನಂತರ ಹೊಸ ಚೆಂಡನ್ನು ನೀಡಿದರೆ, ಇದು ಮತ್ತೆ ಬೌಲಿಂಗ್ ಮಾಡುವ ತಂಡಕ್ಕೆ ನಷ್ಟವನ್ನುಂಟು ಮಾಡುತ್ತದೆ. ಏಕೆಂದರೆ 11 ಓವರ್​ಗಳ ನಂತರ ಸಾಮಾನ್ಯವಾಗಿ ಸ್ಪಿನ್ನರ್​ಗಳು ಬೌಲ್ ಮಾಡುವುದು ಹೆಚ್ಚು, ಅಂತಹ ಪರಿಸ್ಥಿತಿಯಲ್ಲಿ ಹೊಸ ಚೆಂಡು ಸ್ಪಿನ್ ಬೌಲರ್‌ಗಳು ಹೆಚ್ಚು ನೆರವು ನೀಡುವುದಿಲ್ಲ. ಹೀಗಾಗಿ ಬಿಸಿಸಿಐ ಈ ನಿಯಮದ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.

7 / 7
ಆದಾಗ್ಯೂ ಎರಡು ಚೆಂಡುಗಳ ಬಳಕೆ ಕೇವಲ ರಾತ್ರಿಯ ಪಂದ್ಯಗಳಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದಂತೆ ಡಬಲ್ ಹೆಡರ್ ಪಂದ್ಯಗಳಂದು ಮಧ್ಯಾಹ್ನ ನಡೆಯುವ ಪಂದ್ಯಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಇದು ಮಾತ್ರವಲ್ಲದೆ, ರಾತ್ರಿ ಪಂದ್ಯಗಳಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡ ಎರಡನೇ ಚೆಂಡನ್ನು ಅವಶ್ಯಕತೆ ಇದ್ದರೆ ಮಾತ್ರ ಬದಲಿಸಬಹುದು. ಇಲ್ಲದಿದ್ದರೆ ಆರಂಭದಲ್ಲಿ ನೀಡಿದ ಚೆಂಡಿನಲ್ಲೇ ಪಂದ್ಯವನ್ನು ಮುಗಿಸಬಹುದು.