- Kannada News Photo gallery Cricket photos RCB IPL 2025 Tickets: Prices, Availability, How to Buy Online
IPL 2025: ಆರ್ಸಿಬಿ vs ಡೆಲ್ಲಿ ಪಂದ್ಯದ ಟಿಕೆಟ್ ಮಾರಾಟ ಆರಂಭ: ಖರೀದಿಸುವುದು ಹೇಗೆ?
RCB IPL 2025 Tickets: ಆರ್ಸಿಬಿ ತನ್ನ ತವರು ಪಂದ್ಯಗಳ ಟಿಕೆಟ್ಗಳ ಮಾರಾಟವನ್ನು ಆರಂಭಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಟಿಕೆಟ್ಗಳು ಆನ್ಲೈನ್ನಲ್ಲಿ ಲಭ್ಯವಿವೆ. ಟಿಕೆಟ್ ಬೆಲೆಗಳು 2300 ರಿಂದ 42000 ರೂಪಾಯಿಗಳವರೆಗೆ ಇವೆ. ಕೆಲವು ಸ್ಟ್ಯಾಂಡ್ಗಳ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ. ಉಳಿದ ಟಿಕೆಟ್ಗಳನ್ನು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಖರೀದಿಸಬಹುದು.
Updated on: Mar 20, 2025 | 2:51 PM

ಮಾರ್ಚ್ 22 ರಂದು ನಡೆಯಲ್ಲಿರುವ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದ ಆರಂಭದೊಂದಿಗೆ 2025 ರ ಐಪಿಎಲ್ಗೂ ಚಾಲನೆ ಸಿಗಲಿದೆ.

ಈ ಪಂದ್ಯದ ಬಳಿಕ ತನ್ನ ಎರಡನೇ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್ 28 ರಂದು ಚೆನ್ನೈನಲ್ಲಿ ಆಡುವ ಆರ್ಸಿಬಿ ತಂಡ ಆ ಬಳಿಕ ತನ್ನ ತವರು ಮೈದಾನದತ್ತ ಪ್ರಯಾಣ ಬೆಳೆಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್ 2 ರಂದು ತನ್ನ ಮೊದಲ ತವರು ಪಂದ್ಯವನ್ನು ಆಡಲಿರುವ ಆರ್ಸಿಬಿಗೆ ಗುಜರಾತ್ ಟೈಟನ್ಸ್ ತಂಡ ಎದುರಾಳಿಯಾಗಿದೆ.

ಆರ್ಸಿಬಿ ಫ್ರಾಂಚೈಸಿ ಈಗಾಗಲೇ ತನ್ನ ತವರು ಪಂದ್ಯಗಳ ಆನ್ಲೈನ್ ಟಿಕೆಟ್ಗಳ ಮಾರಾಟವನ್ನು ಆರಂಭಿಸಿದೆ. ಏಪ್ರಿಲ್ 2 ರಂದು ನಡೆಯಲ್ಲಿರುವ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಉಳಿದಂತೆ ಈ ಪಂದ್ಯದ ಆಫ್ ಲೈನ್ ಟಿಕೆಟ್ಗಳನ್ನು ಕ್ರೀಡಾಂಗಣದ ಕೌಂಟರ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಖರೀದಿಸಬಹುದಾಗಿದೆ.

ಈ ಪಂದ್ಯದ ಬಳಿಕ ಆರ್ಸಿಬಿ ತನ್ನ ಎರಡನೇ ತವರು ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 10 ರಂದು ಆಡಲಿದೆ. ಇದೀಗ ಈ ಪಂದ್ಯದ ಆನ್ಲೈನ್ ಟಿಕೆಟ್ ಮಾರಾಟವನ್ನು ಇಂದು ಆರಂಭಿಸಲಾಗಿದೆ. ಟಿಕೆಟ್ ಕೊಳ್ಳಲು ಆಸಕ್ತರಿರುವವರು ಆರ್ಸಿಬಿಯ https://shop.royalchallengers.com ಅಧಿಕೃತ ವೆಬ್ಸೈಟ್ನಲ್ಲಿ ಹೋಗಿ ಖರೀದಿಸಬಹುದಾಗಿದೆ.

ಇನ್ನು ಟಿಕೆಟ್ಗಳ ಬೆಲೆಯ ವಿಚಾರಕ್ಕೆ ಬರುವುದಾದರರೆ, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೆ ನಿಗದಿಪಡಿಸಿದಷ್ಟೇ ಮೊತ್ತವನ್ನು ಡೆಲ್ಲ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ನಿಗದಿಪಡಿಸಲಾಗಿದೆ. ಈ ಪಂದ್ಯದ ಕನಿಷ್ಠ ಟಿಕೆಟ್ ಬೆಲೆ 2300 ರೂಗಳಾಗಿದ್ದರೆ, ಗರಿಷ್ಠ ಟಿಕೆಟ್ ಬೆಲೆ 42000 ರೂ ಆಗಿದೆ. ಈಗಾಗಲೇ ಕೆಲವು ಸ್ಟ್ಯಾಂಡ್ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಉಳಿದಿರುವ ಸ್ಟ್ಯಾಂಡ್ಗಳ ವಿವರ ಹೀಗಿದೆ.

ಈ ಸುದ್ದಿ ಬರೆಯುವ ಹೊತ್ತಿಗೆ ಕೇವಲ 3 ಸ್ಟ್ಯಾಂಡ್ಗಳ ಟಿಕೆಟ್ಗಳು ಖರೀದಿಗೆ ಲಭ್ಯವಿವೆ. ಅದರಲ್ಲಿ 3 ಸ್ಟ್ಯಾಂಡ್ನ ಟಿಕೆಟ್ ಬೆಲೆ ಕ್ರಮವಾಗಿ 10000, 11000 ಹಾಗೂ 15000 ರೂಗಳಾಗಿದೆ. ಉಳಿದ ಸ್ಟ್ಯಾಂಡ್ಗಳ ಆನ್ಲೈನ್ ಟಿಕೆಟ್ಗಳು ಈಗಾಗಲೇ ಮಾರಾಟವಾಗಿದ್ದು, ಆಫ್ಲೈನ್ ಟಿಕೆಟ್ಗಳನ್ನು ಕ್ರೀಡಾಂಗಣದ ಕೌಂಟರ್ಗಳಲ್ಲಿ ಖರೀದಿಸಬಹುದಾಗಿದೆ.



















