AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಆರ್​ಸಿಬಿ vs ಡೆಲ್ಲಿ ಪಂದ್ಯದ ಟಿಕೆಟ್ ಮಾರಾಟ ಆರಂಭ: ಖರೀದಿಸುವುದು ಹೇಗೆ?

RCB IPL 2025 Tickets: ಆರ್​ಸಿಬಿ ತನ್ನ ತವರು ಪಂದ್ಯಗಳ ಟಿಕೆಟ್​ಗಳ ಮಾರಾಟವನ್ನು ಆರಂಭಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿವೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಟಿಕೆಟ್​ಗಳು ಆನ್​ಲೈನ್​ನಲ್ಲಿ ಲಭ್ಯವಿವೆ. ಟಿಕೆಟ್​ ಬೆಲೆಗಳು 2300 ರಿಂದ 42000 ರೂಪಾಯಿಗಳವರೆಗೆ ಇವೆ. ಕೆಲವು ಸ್ಟ್ಯಾಂಡ್​ಗಳ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿವೆ. ಉಳಿದ ಟಿಕೆಟ್​ಗಳನ್ನು ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ಖರೀದಿಸಬಹುದು.

ಪೃಥ್ವಿಶಂಕರ
|

Updated on: Mar 20, 2025 | 2:51 PM

Share
ಮಾರ್ಚ್​ 22 ರಂದು ನಡೆಯಲ್ಲಿರುವ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದ ಆರಂಭದೊಂದಿಗೆ 2025 ರ ಐಪಿಎಲ್​ಗೂ ಚಾಲನೆ ಸಿಗಲಿದೆ.

1 / 6
ಈ ಪಂದ್ಯದ ಬಳಿಕ ತನ್ನ ಎರಡನೇ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್​ 28 ರಂದು ಚೆನ್ನೈನಲ್ಲಿ ಆಡುವ ಆರ್​ಸಿಬಿ ತಂಡ ಆ ಬಳಿಕ ತನ್ನ ತವರು ಮೈದಾನದತ್ತ ಪ್ರಯಾಣ ಬೆಳೆಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್ 2 ರಂದು ತನ್ನ ಮೊದಲ ತವರು ಪಂದ್ಯವನ್ನು ಆಡಲಿರುವ ಆರ್​ಸಿಬಿಗೆ ಗುಜರಾತ್ ಟೈಟನ್ಸ್ ತಂಡ ಎದುರಾಳಿಯಾಗಿದೆ.

2 / 6
ಆರ್​ಸಿಬಿ ಫ್ರಾಂಚೈಸಿ ಈಗಾಗಲೇ ತನ್ನ ತವರು ಪಂದ್ಯಗಳ ಆನ್​ಲೈನ್​ ಟಿಕೆಟ್​ಗಳ ಮಾರಾಟವನ್ನು ಆರಂಭಿಸಿದೆ. ಏಪ್ರಿಲ್ 2 ರಂದು ನಡೆಯಲ್ಲಿರುವ ಆರ್​ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ಟಿಕೆಟ್​ಗಳು ಸೋಲ್ಡ್ ಔಟ್ ಆಗಿವೆ. ಉಳಿದಂತೆ ಈ ಪಂದ್ಯದ ಆಫ್ ಲೈನ್​ ಟಿಕೆಟ್​ಗಳನ್ನು ಕ್ರೀಡಾಂಗಣದ ಕೌಂಟರ್​ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಖರೀದಿಸಬಹುದಾಗಿದೆ.

3 / 6
ಈ ಪಂದ್ಯದ ಬಳಿಕ ಆರ್​ಸಿಬಿ ತನ್ನ ಎರಡನೇ ತವರು ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ  ಏಪ್ರಿಲ್ 10 ರಂದು ಆಡಲಿದೆ. ಇದೀಗ ಈ ಪಂದ್ಯದ ಆನ್​ಲೈನ್ ಟಿಕೆಟ್ ಮಾರಾಟವನ್ನು ಇಂದು ಆರಂಭಿಸಲಾಗಿದೆ. ಟಿಕೆಟ್ ಕೊಳ್ಳಲು ಆಸಕ್ತರಿರುವವರು ಆರ್​ಸಿಬಿಯ https://shop.royalchallengers.com ಅಧಿಕೃತ ವೆಬ್​ಸೈಟ್​ನಲ್ಲಿ ಹೋಗಿ ಖರೀದಿಸಬಹುದಾಗಿದೆ.

4 / 6
ಇನ್ನು ಟಿಕೆಟ್​ಗಳ ಬೆಲೆಯ ವಿಚಾರಕ್ಕೆ ಬರುವುದಾದರರೆ, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೆ ನಿಗದಿಪಡಿಸಿದಷ್ಟೇ ಮೊತ್ತವನ್ನು ಡೆಲ್ಲ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ನಿಗದಿಪಡಿಸಲಾಗಿದೆ. ಈ ಪಂದ್ಯದ ಕನಿಷ್ಠ ಟಿಕೆಟ್ ಬೆಲೆ 2300 ರೂಗಳಾಗಿದ್ದರೆ, ಗರಿಷ್ಠ ಟಿಕೆಟ್ ಬೆಲೆ 42000 ರೂ ಆಗಿದೆ. ಈಗಾಗಲೇ ಕೆಲವು ಸ್ಟ್ಯಾಂಡ್​ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಉಳಿದಿರುವ ಸ್ಟ್ಯಾಂಡ್​ಗಳ ವಿವರ ಹೀಗಿದೆ.

5 / 6
ಈ ಸುದ್ದಿ ಬರೆಯುವ ಹೊತ್ತಿಗೆ ಕೇವಲ 3 ಸ್ಟ್ಯಾಂಡ್​ಗಳ ಟಿಕೆಟ್​ಗಳು ಖರೀದಿಗೆ ಲಭ್ಯವಿವೆ. ಅದರಲ್ಲಿ ​
3 ಸ್ಟ್ಯಾಂಡ್​ನ ಟಿಕೆಟ್​ ಬೆಲೆ ಕ್ರಮವಾಗಿ 10000, 11000 ಹಾಗೂ 15000 ರೂಗಳಾಗಿದೆ. ಉಳಿದ ಸ್ಟ್ಯಾಂಡ್​ಗಳ ಆನ್​ಲೈನ್​ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿದ್ದು, ಆಫ್​ಲೈನ್​ ಟಿಕೆಟ್​ಗಳನ್ನು ಕ್ರೀಡಾಂಗಣದ ಕೌಂಟರ್​ಗಳಲ್ಲಿ ಖರೀದಿಸಬಹುದಾಗಿದೆ.

ಈ ಸುದ್ದಿ ಬರೆಯುವ ಹೊತ್ತಿಗೆ ಕೇವಲ 3 ಸ್ಟ್ಯಾಂಡ್​ಗಳ ಟಿಕೆಟ್​ಗಳು ಖರೀದಿಗೆ ಲಭ್ಯವಿವೆ. ಅದರಲ್ಲಿ ​ 3 ಸ್ಟ್ಯಾಂಡ್​ನ ಟಿಕೆಟ್​ ಬೆಲೆ ಕ್ರಮವಾಗಿ 10000, 11000 ಹಾಗೂ 15000 ರೂಗಳಾಗಿದೆ. ಉಳಿದ ಸ್ಟ್ಯಾಂಡ್​ಗಳ ಆನ್​ಲೈನ್​ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿದ್ದು, ಆಫ್​ಲೈನ್​ ಟಿಕೆಟ್​ಗಳನ್ನು ಕ್ರೀಡಾಂಗಣದ ಕೌಂಟರ್​ಗಳಲ್ಲಿ ಖರೀದಿಸಬಹುದಾಗಿದೆ.

6 / 6
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್

ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?

ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ

ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?

ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ

ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!

ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು

ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್

ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 