IPL 2025: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ​: ಅಂತಿಮ 4 ಪಂದ್ಯ ನಡೆಯುವುದೆಲ್ಲಿ?

Updated on: May 13, 2025 | 8:36 AM

IPL 2025 Playoffs Schedule: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) ಪ್ಲೇಆಫ್ ಪಂದ್ಯಗಳಿಗೆ ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂ ಹಾಗೂ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನಗಳನ್ನು ನಿಗದಿ ಮಾಡಲಾಗಿತ್ತು. ಆದರೀಗ ಬದಲಾದ ವೇಳಾಪಟ್ಟಿಯಲ್ಲಿ ಪ್ಲೇಆಫ್ ಪಂದ್ಯಗಳು ನಡೆಯುವುದೆಲ್ಲಿ ಎಂಬುದನ್ನು ತಿಳಿಸಲಾಗಿಲ್ಲ.

1 / 5
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18 ರ ಪುನರಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ಹೊಸ ವೇಳಾಪಟ್ಟಿಯಂತೆ ಮೇ 17 ರಿಂದ ಐಪಿಎಲ್​ಗೆ ಮತ್ತೆ ಚಾಲನೆ ದೊರೆಯಲಿದೆ. ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ.

2 / 5
ಮೇ 27 ರಂದು ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದೊಂದಿಗೆ ಐಪಿಎಲ್ 2025ರ ಲೀಗ್ ಹಂತದ ಪಂದ್ಯಗಳು ಮುಗಿಯಲಿದೆ. ಈ ಪಂದ್ಯಗಳ ಬಳಿಕ ಪ್ಲೇಆಫ್ ಹಂತದ ಮ್ಯಾಚ್​ಗಳು ಶುರುವಾಗಲಿದೆ. ಆದರೆ ಈ ಮ್ಯಾಚ್​ಗಳು ಎಲ್ಲಿ ನಡೆಯಲಿದೆ ಎಂಬುದನ್ನು ಇನ್ನೂ ಸಹ ನಿರ್ಧರಿಸಲಾಗಿಲ್ಲ.

3 / 5
ಭಾರತ ಮತ್ತು ಪಾಕಿಸ್ತಾನ್ ನಡುವಣ ಯುದ್ಧ ಭೀತಿ ಹಿನ್ನಲೆಯಲ್ಲಿ ವೇಳಾಪಟ್ಟಿಯನ್ನು ಮರು ನಿಗದಿ ಮಾಡಲಾಗಿದ್ದು, ಹೀಗಾಗಿ ಟೂರ್ನಿಯ ಅಂತಿಮ ನಾಲ್ಕು ಪಂದ್ಯಗಳನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳನ್ನು ಹೈದರಾಬಾದ್​ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಹಾಗೆಯೇ ದ್ವಿತೀಯ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನವನ್ನು ನಿಗದಿ ಮಾಡಲಾಗಿತ್ತು.

4 / 5
ಆದರೆ ಇದೀಗ ಹೊಸ ವೇಳಾಪಟ್ಟಿಯಲ್ಲಿ ದಿನಾಂಕ ಮಾತ್ರ ನಿಗದಿ ಮಾಡಲಾಗಿದೆ. ಅದರಂತೆ ಮೇ 29 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಮೇ 30 ರಂದು ಎಲಿಮಿನೇಟರ್ ಪಂದ್ಯ ಜರುಗಲಿದೆ. ಇನ್ನು ಎರಡನೇ ಕ್ವಾಲಿಫೈಯರ್ ಪಂದ್ಯವು ಜೂನ್ 1 ರಂದು ನಡೆಯಲಿದೆ. ಹಾಗೆಯೇ ಜೂನ್ 3 ರಂದು ಫೈನಲ್ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

5 / 5
ಅಂದರೆ ಪ್ಲೇಆಫ್ ಹಂತದ ನಾಲ್ಕು ಪಂದ್ಯಗಳನ್ನು ಎಲ್ಲಿ ಆಯೋಜಿಸಬೇಕೆಂದು ನಿರ್ಧರಿಸಲಾಗಿಲ್ಲ. ಮುಂದಿನ ದಿನಗಳ ಪರಿಸ್ಥಿತಿ ಹಾಗೂ ಹವಾಮಾನ ಮುನ್ಸೂಚನೆಯನ್ನು ಪರಿಗಣಿಸಿ ಪ್ಲೇಆಫ್ ಪಂದ್ಯಗಳಿಗೆ ಮೈದಾನಗಳನ್ನು ನಿಗದಿ ಮಾಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಮುಂದಿನ ವಾರದೊಳಗೆ ಪ್ಲೇಆಫ್ ಪಂದ್ಯಗಳು ನಡೆಯುವುದೆಲ್ಲಿ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿದೆ.