IPL 2025: RCB ಉಳಿಸಿಕೊಂಡಿರುವ 3 ಆಟಗಾರರು ಇವರೇ
IPL 2025 Retention: ಐಪಿಎಲ್ ಮೆಗಾ ಹರಾಜಿಗೂ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ಆರು ಆಟಗಾರರನ್ನು ಉಳಿಸಿಕೊಂಡರೆ 79 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಹೀಗಾಗಿಯೇ ಆರ್ಸಿಬಿ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ ಕೇವಲ ಮೂವರನ್ನು ಮಾತ್ರ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.
1 / 5
IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳುವುದು ಖಚಿತವಾಗಿದೆ. ವಿಶೇಷ ಎಂದರೆ ಈ ಮೂವರು ಆಟಗಾರರು ಕೂಡ ಭಾರತೀಯರು. ಅದರಂತೆ RCB ತಂಡದ ರಿಟೈನ್ ಪಟ್ಟಿಯಲ್ಲಿರುವ ಆಟಗಾರರ ಹೆಸರು ಕೆಳಗಿನಂತಿವೆ...
2 / 5
ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮೊದಲ ರಿಟೈನ್ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಮುಂದಿನ ಸೀಸನ್‌ನಲ್ಲೂ ಆರ್ಸಿಬಿ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ಇದರ ಜೊತೆ ನಾಯಕತ್ವದ ಜವಾಬ್ದಾರಿಯನ್ನು ಸಹ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
3 / 5
ರಜತ್ ಪಾಟಿದಾರ್: ಆರ್ಸಿಬಿ ಫ್ರಾಂಚೈಸಿಯ ಎರಡನೇ ರಿಟೈನ್ ಸ್ಪೋಟಕ ದಾಂಡಿಗ ರಜತ್ ಪಾಟಿದಾರ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೂರು ಸೀಸನ್ ಆಡಿರುವ ಪಾಟಿದಾರ್ 27 ಪಂದ್ಯಗಳಿಂದ 799 ರನ್ ಕಲೆಹಾಕಿದ್ದಾರೆ. ಹೀಗಾಗಿ ಪಾಟಿದಾರ್ ಅವರನ್ನು ಉಳಿಸಿಕೊಳ್ಳಲು RCB ನಿರ್ಧರಿಸಿದೆ.
4 / 5
ಯಶ್ ದಯಾಳ್: ಐಪಿಎಲ್ 2024 ರಲ್ಲಿ RCB ಪರ 14 ಪಂದ್ಯಗಳನ್ನಾಡಿರುವ ಯುವ ವೇಗಿ ಯಶ್ ದಯಾಳ್ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದರು. ಹೀಗಾಗಿ ಮುಂದಿನ ಸೀಸನ್‌ಗೂ ಆರ್ಸಿಬಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಎಡಗೈ ವೇಗಿ ಯಶ್ ದಯಾಳ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.
5 / 5
ಸದ್ಯದ ಮಾಹಿತಿ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮೂವರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಂಡಿದೆ. ಇತ್ತ ಮೂವರನ್ನು ಉಳಿಸಿಕೊಂಡಿರುವ ಕಾರಣ ಮೂರು RTM ಕಾರ್ಡ್ ಬಳಸಿಕೊಳ್ಳಬಹುದು. ಅದರಂತೆ RCB ಯಾರನ್ನು RTM ಆಯ್ಕೆಯಡಿಯಲ್ಲಿ ಯಾರನ್ನು ಬಿಡುಗಡೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.