IPL 2025: RCB ತಂಡದಿಂದ ಇಬ್ಬರ ನಿರ್ಗಮನ, ಮೂವರ ಆಗಮನ

Updated on: May 26, 2025 | 1:54 PM

IPL 2025 RCB: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (ಐಪಿಎಲ್ 2025) ಪ್ಲೇಆಫ್​ಗೆ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಬ್ಬರು ಹೊಸ ಆಟಗಾರರ ಆಗಮನವಾಗಿದೆ. ಒಬ್ಬರು ನ್ಯೂಝಿಲೆಂಡ್​ನಿಂದ ಬಂದರೆ, ಮತ್ತೊಬ್ಬರು ಝಿಂಬಾಬ್ವೆಯಿಂದ ಆಗಮಿಸಿದ್ದಾರೆ. ಈ ಇಬ್ಬರ ಆಗಮನದೊಂದಿಗೆ ಮತ್ತಿಬ್ಬರು ಆಟಗಾರರು ತವರಿಗೆ ಮರಳಿದ್ದಾರೆ.

1 / 7
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ ಪ್ಲೇಆಫ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ 2 ಮಹತ್ವದ ಬದಲಾವಣೆಯಾಗಿದೆ. ಈ ಬಾರಿಯ ಐಪಿಎಲ್ ಹರಾಜಿನ ಮೂಲಕ ತಂಡಕ್ಕೆ ಆಯ್ಕೆಯಾಗಿದ್ದ ಇಬ್ಬರು ಆಟಗಾರರು ತಂಡದಿಂದ ನಿರ್ಗಮಿಸಿದ್ದಾರೆ. ಇವರ ಬದಲಿಯಾಗಿ ಮತ್ತಿಬ್ಬರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಹಾಗಿದ್ರೆ ಆರ್​ಸಿಬಿ ತಂಡಕ್ಕೆ ಬಂದವರು ಯಾರು, ಹೋದವರು ಯಾರೆಂದು ನೋಡೋಣ...

2 / 7
ಲುಂಗಿ ಎನ್​ಗಿಡಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 2 ಪಂದ್ಯಗಳನ್ನಾಡಿದ್ದ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ತವರಿಗೆ ಹಿಂತಿರುಗಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಸಿದ್ಧತೆಗಾಗಿ ಎನ್​ಗಿಡಿ ಅರ್ಧದಲ್ಲೇ ಐಪಿಎಲ್​ ತೊರೆದಿದ್ದಾರೆ. ಲುಂಗಿ ಎನ್​ಗಿಡಿ ಈ ಬಾರಿ ಆರ್​ಸಿಬಿ ಪರ ಒಟ್ಟು 8 ಓವರ್​ಗಳನ್ನು ಎಸೆದಿದ್ದರು. ಈ ವೇಳೆ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

3 / 7
ಬ್ಲೆಸಿಂಗ್ ಮುಝರಬಾನಿ: ಲುಂಗಿ ಎನ್​ಗಿಡಿ ನಿರ್ಗಮನದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬದಲಿ ಆಟಗಾರನಾಗಿ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿಯನ್ನು ಆಯ್ಕೆ ಮಾಡಿದ್ದಾರೆ. ಅದರಂತೆ ಮುಝರಬಾನಿ ಇದೀಗ ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಝಿಂಬಾಬ್ವೆ ಪರ 67 ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಮುಝರಬಾನಿ ಒಟ್ಟು 78 ವಿಕೆಟ್ ಕಬಳಿಸಿ ಮಿಂಚಿದ್ದಾರೆ. 

4 / 7
ಜೇಕಬ್ ಬೆಥೆಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎರಡು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದ ಜೇಕಬ್ ಬೆಥೆಲ್ ಕೂಡ ತವರಿಗೆ ಮರಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ಇಂಗ್ಲೆಂಡ್ ತಂಡದಲ್ಲಿ ಬೆಥೆಲ್ ಸ್ಥಾನ ಪಡೆದಿದ್ದು, ಹೀಗಾಗಿ ದೇಶದ ಪರ ಕಣಕ್ಕಿಳಿಯಲು ಇಂಗ್ಲೆಂಡ್​​ಗೆ ತೆರಳಿದ್ದಾರೆ. ಆರ್​ಸಿಬಿ ಪರ 2 ಪಂದ್ಯಗಳನ್ನಾಡಿರುವ ಬೆಥೆಲ್ 1 ಅರ್ಧಶತಕದೊಂದಿಗೆ ಒಟ್ಟು 67 ರನ್ ಬಾರಿಸಿದ್ದರು.

5 / 7
ಟಿಮ್ ಸೈಫರ್ಟ್​: ಜೇಕಬ್ ಬೆಥೆಲ್ ತವರಿಗೆ ತೆರಳುವುದು ಖಚಿತವಾಗುತ್ತಿದ್ದಂತೆ ಆರ್​ಸಿಬಿ ಫ್ರಾಂಚೈಸಿ ನ್ಯೂಝಿಲೆಂಡ್​ನ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೈಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿದೆ. ಕಿವೀಸ್ ಪರ ಈವರೆಗೆ 66 ಟಿ20 ಪಂದ್ಯಗಳನ್ನಾಡಿರುವ ಸೈಫರ್ಟ್ 63 ಇನಿಂಗ್ಸ್​ಗಳಿಂದ 1540 ರನ್ ಕಲೆಹಾಕಿದ್ದಾರೆ. ಇದರ ನಡುವೆ 10 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಟಿಮ್ ಸೈಫರ್ಟ್​ ಲಕ್ನೋದಲ್ಲಿ ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ.

6 / 7
ಜೋಶ್ ಹೇಝಲ್​ವುಡ್: ಈ ಬಾರಿಯ ಐಪಿಎಲ್​ನ ಮೊದಲಾರ್ಧದಲ್ಲಿ ಕಾಣಿಸಿಕೊಂಡಿದ್ದ ಜೋಶ್ ಹೇಝಲ್​ವುಡ್, ಆ ಬಳಿಕ ತವರಿಗೆ ತೆರಳಿದ್ದರು. ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಿದ್ದಾರೆ. ಅಲ್ಲದೆ ಆರ್​ಸಿಬಿ ಪರ ಅಭ್ಯಾಸವನ್ನು ಸಹ ಆರಂಭಿಸಿದ್ದಾರೆ. ಆರ್​ಸಿಬಿ ಪರ ಕಳೆದ 10 ಪಂದ್ಯಗಳಲ್ಲಿ 36.5 ಓವರ್​ಗಳನ್ನು ಎಸೆದಿದ್ದ ಹೇಝಲ್​ವುಡ್ ಒಟ್ಟು 18 ವಿಕೆಟ್​ಗಳನ್ನು ಕಬಳಿಸಿ ಮಿಂಚಿದ್ದರು. ಇದೀಗ ಅವರ ಆಗಮನವು ಆರ್​ಸಿಬಿ ಬೌಲಿಂಗ್​ ಬಲಿಷ್ಠತೆಯನ್ನು ಹೆಚ್ಚಿಸಿದೆ.

7 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಲಿಯಾಮ್ ಲಿವಿಂಗ್​ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಝಲ್​ವುಡ್, ರಾಸಿಖ್ ಸಲಾಂ, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಮಯಾಂಕ್ ಅಗರ್ವಾಲ್, ಟಿಮ್ ಸೈಫರ್ಟ್, ಬ್ಲೆಸಿಂಗ್ ಮುಝರಬಾನಿ.

Published On - 1:54 pm, Mon, 26 May 25