IPL 2025: ಹೈದರಾಬಾದ್‌- ಲಕ್ನೋ ಫೈಟ್; ಮೂವರು ಆಟಗಾರರಿಗೆ ಮೊದಲ ಪಂದ್ಯ

Updated on: May 19, 2025 | 8:32 PM

IPL 2025 debut: ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮೂವರು ಆಟಗಾರರು ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ. ಹೈದರಾಬಾದ್ ಪರ ಹರ್ಷ್ ದುಬೆ ಮತ್ತು ಅಥರ್ವ ಟೈಡೆ, ಮತ್ತು ಲಕ್ನೋ ಪರ ವಿಲ್ ಓ'ರೂರ್ಕ್ ಆಡಿದ್ದಾರೆ. ಹರ್ಷ್ ದುಬೆ ಎಡಗೈ ಸ್ಪಿನ್ನರ್, ಅಥರ್ವ ಟೈಡೆ ಅನುಭವಿ ಬ್ಯಾಟ್ಸ್‌ಮನ್, ಮತ್ತು ವಿಲ್ ಓ'ರೂರ್ಕ್ ವೇಗದ ಬೌಲರ್.

1 / 6
ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಮೂವರು ಆಟಗಾರರಿಗೆ ಚೊಚ್ಚಲ ಐಪಿಎಲ್ ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ. ಅದರಲ್ಲಿ ಇಬ್ಬರು ಆಟಗಾರರು ಹೈದರಾಬಾದ್ ಪರ ಕಣಕ್ಕಿಳಿದರೆ, ಒಬ್ಬ ಆಟಗಾರ ಲಕ್ನೋ ಪರ ಐಪಿಎಲ್​ ಲೋಕಕ್ಕೆ ಕಾಲಿಟ್ಟಿದ್ದಾನೆ.

2 / 6
ಟಾಸ್ ಬಳಿಕ ಮಾತನಾಡಿದ ಹೈದರಾಬಾದ್‌ ನಾಯಕ ಕಮ್ಮಿನ್ಸ್ ತಂಡದ ಪರ ಇಬ್ಬರು ಆಟಗಾರರು ಚೊಚ್ಚಲ ಪಂದ್ಯವನ್ನಾಡುತ್ತಿದ್ದಾರೆ. ಅದರಲ್ಲಿ ಒಬ್ಬ ಆಟಗಾರ ವಿದರ್ಭದ ಎಡಗೈ ಸ್ಪಿನ್ನರ್ ಹರ್ಷ್ ದುಬೆ. ಮತ್ತೊಬ್ಬ ಆಟಗಾರ ಅಥರ್ವ ಟೈಡೆ.

3 / 6
ಲಕ್ನೋ ಸೂಪರ್‌ಜೈಂಟ್ಸ್ ತಮ್ಮ ತಂಡದಲ್ಲಿ ನ್ಯೂಜಿಲೆಂಡ್ ಆಟಗಾರ ವೇಗದ ಬೌಲರ್ ವಿಲ್ ಒ'ರೂರ್ಕ್‌ಗೆ ಅವಕಾಶ ನೀಡಿತು. ವಿಲ್ ಅವರ ವೇಗ ಮತ್ತು ಬೌನ್ಸ್ ಅದ್ಭುತವಾಗಿದೆ ಮತ್ತು ಅದಕ್ಕಾಗಿಯೇ ಅವರು ಭಾರತಕ್ಕೆ ಬಂದ ತಕ್ಷಣ ಅವಕಾಶ ಪಡೆದಿದ್ದು, ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಓ'ರಾರ್ಕ್ ಸುದ್ದಿಯಾಗಿದ್ದರು.

4 / 6
ಎಡಗೈ ಸ್ಪಿನ್ನರ್ ಹರ್ಷ್ ದುಬೆ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 97 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 20 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20ಯಲ್ಲಿ, ಈ ಆಟಗಾರ 16 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದು, ಅವರ ಎಕಾನಮಿ ರೇಟ್ ಕೂಡ ಪ್ರತಿ ಓವರ್‌ಗೆ 7 ರನ್‌ಗಳಿಗಿಂತ ಕಡಿಮೆಯಿದೆ.

5 / 6
ವಿಲ್ ಒ'ರಾರ್ಕ್ ಬಗ್ಗೆ ಹೇಳುವುದಾದರೆ, ಈ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಅನುಭವ ಹೊಂದಿಲ್ಲ. ಆದರೆ ಈ ಬಲಗೈ ಬೌಲರ್ ಆಡಿರುವ 10 ಟೆಸ್ಟ್ ಪಂದ್ಯಗಳಲ್ಲಿ 36 ವಿಕೆಟ್ ಪಡೆದಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20ಯಲ್ಲೂ ಸಹ ಆಡಿರುವ 5 ಪಂದ್ಯಗಳಲ್ಲಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

6 / 6
ಅಥರ್ವ ಟೈಡೆ ಬಗ್ಗೆ ಹೇಳುವುದಾದರೆ, ಈ ಆಟಗಾರ ಆಡಿರುವ 52 ಟಿ20 ಪಂದ್ಯಗಳಲ್ಲಿ 30 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 1479 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 6 ಅರ್ಧಶತಕಗಳು ಕೂಡ ಬಂದಿವೆ. ಈ ಹಿಂದೆ ಐಪಿಎಲ್‌ನಲ್ಲಿ ಪಂಜಾಬ್ ಪರ 9 ಪಂದ್ಯಗಳಲ್ಲಿ 247 ರನ್ ಗಳಿಸಿದ್ದು, ಅವರ ಬ್ಯಾಟ್‌ನಿಂದ 2 ಅರ್ಧಶತಕಗಳು ಬಂದಿವೆ. ಅಥರ್ವ ಅವರಿಗೆ ಐಪಿಎಲ್ ಅನುಭವವೂ ಇದೆ, ಅದಕ್ಕಾಗಿಯೇ ಹೈದರಾಬಾದ್ ಅವರಿಗೆ ಅವಕಾಶ ನೀಡಿದೆ.