IPL 2025: ಐಪಿಎಲ್​ಗಾಗಿ ಹೇರ್​ ಸ್ಟೈಲ್ ಬದಲಿಸಿದ ವಿರಾಟ್ ಕೊಹ್ಲಿ; ಫೋಟೋ ನೋಡಿ

|

Updated on: Mar 14, 2025 | 4:03 PM

Virat Kohli's New Hairstyle: 18ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಆರ್‌ಸಿಬಿ ಹಾಗೂ ಕೆಕೆಆರ್ ಮುಖಾಮುಖಿಯಾಗಲಿವೆ. ಈ ನಡುವೆ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ಜೊತೆ ಕಣಕ್ಕಿಳಿಯಲಿದ್ದಾರೆ. ಇದೀಗ ಆರ್‌ಸಿಬಿ ತಂಡದ ತಯಾರಿ ಮತ್ತು ಕೊಹ್ಲಿ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

1 / 6
18ನೇ ಆವೃತ್ತಿಯ ಐಪಿಎಲ್ ಇದೇ ಮಾರ್ಚ್​ 22 ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ನೂತನ ನಾಯಕರೊಂದಿಗೆ ಕಣಕ್ಕಿಳಿಯುತ್ತಿರುವ ಕಾರಣ ಯಾರ ತಂತ್ರ ಕೈಹಿಡಿಯಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.

2 / 6
ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುತ್ತಿರುವ ಕಾರಣ ಆರ್​ಸಿಬಿ ಈಗಾಗಲೇ ತಯಾರಿ ಆರಂಭಿಸಿದೆ. ತಂಡದ ಭಾಗಶಃ ಆಟಗಾರರು ನೆಟ್ಸ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ಆದರೆ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಮಾತ್ರ ಇದುವರೆಗೆ ತಂಡವನ್ನು ಸೇರಿಕೊಂಡಿಲ್ಲ. ಆದಾಗ್ಯೂ ಕೊಹ್ಲಿ ಇಷ್ಟರಲ್ಲೇ ತಂಡ ಸೇರಿಕೊಳ್ಳಲಿದ್ದಾರೆ.

3 / 6
ಕೊಹ್ಲಿ ತಡವಾಗಿ ತಂಡವನ್ನು ಸೇರಿಕೊಳ್ಳುವುದಕ್ಕೆ ಕಾರಣವೂ ಇದ್ದು, ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗಿಯಾಗಿದ್ದ ಕೊಹ್ಲಿ ತಂಡವನ್ನು ಚಾಂಪಿಯನ್ ಮಾಡಿದ ಬಳಿಕ ಎರಡು ದಿನಗಳ ಹಿಂದಷ್ಟೇ ಭಾರತಕ್ಕೆ ವಾಪಸ್ಸಾಗಿದ್ದಾರೆ. ಹೀಗಾಗಿ ವಿಶ್ರಾಂತಿಯಲ್ಲಿರುವ ಕೊಹ್ಲಿ ಕೆಲವೇ ದಿನಗಳಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ಕೊಹ್ಲಿ ತನ್ನ ಹೊಸ ಲುಕ್​ನೊಂದಿಗೆ ಸೋಶಿಯಲ್ ಮೀಡಿಯಾಕ್ಕೆ ಬೆಂಕಿ ಹಚ್ಚಿದ್ದಾರೆ.

4 / 6
ವಾಸ್ತವವಾಗಿ ಪ್ರತಿಯೊಂದು ಪ್ರಮುಖ ಈವೆಂಟ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ತನ್ನ ಹೇರ್​ ಸ್ಟೈಲ್ ಬದಲಿಸುತ್ತಾರೆ. ಈ ಪ್ರವೃತ್ತಿಯನ್ನು ಕೊಹ್ಲಿ ಬಹಳ ವರ್ಷಗಳಿಂದ ನಡೆಸುಕೊಂಡು ಬಂದಿದ್ದಾರೆ. ಇದೀಗ ಐಪಿಎಲ್ ಆರಂಭಕ್ಕೂ ಮುನ್ನ ತನ್ನ ಹೇರ್​ ಸ್ಟೈಲ್ ಬದಲಿಸಿಕೊಂಡಿರುವ ವಿರಾಟ್ ಕೊಹ್ಲಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

5 / 6
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗುವುದಕ್ಕೂ ಮುನ್ನ ಕೊಹ್ಲಿ ತಮ್ಮ ಹೇರ್ ಸ್ಟೈಲ್ ಬದಲಿಸಿದ್ದರು. ಆ ಸಮಯದಲ್ಲಿ ಕೊಹ್ಲಿಗೆ ಹೊಸ ಲುಕ್ ನೀಡಿದ್ದು, ಆಸ್ಟ್ರೇಲಿಯಾದ ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜೋರ್ಡಾನ್ ತಬಕ್‌ಮನ್. ಇದೀಗ ಭಾರತದ ಖ್ಯಾತ ಸೆಲೆಬ್ರಿಟಿ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಕೊಹ್ಲಿಗೆ ಹೊಸ ಲುಕ್ ನೀಡಿದ್ದಾರೆ.

6 / 6
ಆರ್‌ಸಿಬಿ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಖ್ ದಾರ್, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜೇಕಬ್ ಬೆತೆಲ್, ದೇವದತ್ತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.

Published On - 3:41 pm, Fri, 14 March 25