ಟೀಮ್ ಇಂಡಿಯಾದ ಸ್ಪೋಟಕ ದಾಂಡಿಗ ಯಶಸ್ವಿ ಜೈಸ್ವಾಲ್ (Yashasvi Jaiswal) ಕಡೆಯಿಂದ ಈ ಬಾರಿಯ ಐಪಿಎಲ್ನಲ್ಲಿ (IPL 2025) ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿರುವ ಜೈಸ್ವಾಲ್ ಆಡಿದ ಮೂರು ಪಂದ್ಯಗಳಿಂದ ಕಲೆಹಾಕಿರುವುದು ಕೇವಲ 34 ರನ್ಗಳು ಮಾತ್ರ.
ಈ ಕಳಪೆ ಪ್ರದರ್ಶನದ ಹೊರತಾಗಿಯೂ ಯಶಸ್ವಿ ಜೈಸ್ವಾಲ್ ಸಖತ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಐಪಿಎಲ್ ವೇಳೆ ಜೈಸ್ವಾಲ್ ಜೊತೆ ಅವರ ಗರ್ಲ್ಫ್ರೆಂಡ್ ಮ್ಯಾಡಿ ಹ್ಯಾಮಿಲ್ಟನ್ ಕಾಣಿಸಿಕೊಂಡಿರುವುದು. ಈ ಫೋಟೋವನ್ನು ಖುದ್ದು ಜೈಸ್ವಾಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೇಲ್ನೋಟಕ್ಕೆ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಮ್ಯಾಡಿ ಹ್ಯಾಮಿಲ್ಟನ್ ಭಾರತಕ್ಕೆ ಬಂದಿರುವಂತೆ ತೋರುತ್ತಿದೆ. ಈ ವೇಳೆ ಹೋಟೆಲ್ ರೂಮ್ನಲ್ಲಿ ಮ್ಯಾಡಿ ಜೊತೆ ಕಾಲ ಕಳೆದಿದ್ದಾರೆ. ಅಲ್ಲದೆ ಈ ಫೋಟೋವನ್ನು ಜೈಸ್ವಾಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಮಯ ಕಳೆದರೂ ಬಂಧಗಳು ಎಂದಿಗೂ ಮಸುಕಾಗುವುದಿಲ್ಲ, ಇಂತಹ ಕ್ಷಣಗಳು ಅದ್ಭುತ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಯಶಸ್ವಿ ಜೈಸ್ವಾಲ್ ಜೊತೆ ಮ್ಯಾಡಿ ಹ್ಯಾಮಿಲ್ಟನ್ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇಂಗ್ಲೆಂಡ್ನಲ್ಲಿ ಇಬ್ಬರು ಜೊತೆಯಾಗಿ ಓಡಾಡುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಅಲ್ಲದೆ ಮ್ಯಾಡಿ ಅವರ ಕುಟುಂಬಸ್ಥರೊಂದಿಗೆ ಕೂಡ ಜೈಸ್ವಾಲ್ ಕಾಣಿಸಿಕೊಂಡಿದ್ದರು.
ಸದ್ಯ ಐಪಿಎಲ್ ಅಂಗಳದಲ್ಲಿ ಬ್ಯುಸಿಯಾಗಿರುವ ಯಶಸ್ವಿ ಜೈಸ್ವಾಲ್ ಮುಂಬರುವ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಅದು ಸಹ ಪಂಜಾಬ್ ಕಿಂಗ್ಸ್ ವಿರುದ್ಧ. ಶನಿವಾರ ನಡೆಯಲಿರುವ ಐಪಿಎಲ್ನ 18ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಈ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್ ಫಾರ್ಮ್ಗೆ ಮರಳಲಿದ್ದಾರಾ ಕಾದು ನೋಡಬೇಕಿದೆ.