IPL 2026: ಟಾಪ್-5 ಸೆಟ್ನಲ್ಲಿ ಹರಾಜಾಗಲಿರುವ 34 ಆಟಗಾರರ ಪಟ್ಟಿ ಇಲ್ಲಿದೆ
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (ಐಪಿಎಲ್ 2026) ಮಿನಿ ಹರಾಜಿನಲ್ಲಿ ಒಟ್ಟು 350 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಆಟಗಾರರಿಂದ ಪ್ರಮುಖರನ್ನು ಟಾಪ್-5 ಸೆಟ್ಗಳಲ್ಲಿ ವಿಂಗಡಿಸಲಾಗಿದೆ. ಅದರಂತೆ ಈ ಸೆಟ್ಗಳಲ್ಲಿ ಕಾಣಿಸಿಕೊಂಡಿರುವ ಆಟಗಾರರಿಗಾಗಿ ಮೊದಲ ಸುತ್ತಿನಲ್ಲೇ ಬಿಡ್ಟಿಂಗ್ ನಡೆಯಲಿದೆ.
Updated on:Dec 09, 2025 | 10:56 AM

IPL 2026: ಐಪಿಎಲ್ 2026ರ ಮಿನಿ ಹರಾಜಿಗಾಗಿ ಅಂತಿಮ ಪಟ್ಟಿ ಸಿದ್ಧವಾಗಿದೆ. ಈ ಬಾರಿ 350 ಆಟಗಾರರು ಹರಾಜಿಗಾಗಿ ಆಯ್ಕೆಯಾಗಿದ್ದಾರೆ. ಅಂದರೆ 1390 ಆಟಗಾರರು ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದರೂ, ಅವರಲ್ಲಿ 350 ಆಟಗಾರರು ಮಾತ್ರ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಕೆಲ ಆಟಗಾರರು ಟಾಪ್-5 ಸೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಮೊದಲ ಸುತ್ತಿನಲ್ಲೇ ಹರಾಜಾಗಲಿರುವ ಸೆಟ್ಗಳಲ್ಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

A1 ಸೆಟ್ ಆಟಗಾರರು: ಗಸ್ ಅಟ್ಕಿನ್ಸನ್ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ದೀಪಕ್ ಹೂಡಾ (ಭಾರತ), ವೆಂಕಟೇಶ್ ಅಯ್ಯರ್ (ಭಾರತ), ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್), ವಿಯಾನ್ ಮುಲ್ಡರ್ (ಸೌತ್ ಆಫ್ರಿಕಾ), ರಚಿನ್ ರವೀಂದ್ರ (ನ್ಯೂಝಿಲೆಂಡ್)

ಬಿ1 ಸೆಟ್ ಆಟಗಾರರು: ಡೆವೊನ್ ಕಾನ್ವೆ (ನ್ಯೂಝಿಲೆಂಡ್), ಜೇಕ್ ಫ್ರೆಸರ್ ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ಕ್ಯಾಮರೋನ್ ಗ್ರೀನ್ (ಆಸ್ಟ್ರೇಲಿಯಾ), ಸರ್ಫರಾಝ್ ಖಾನ್ (ಭಾರತ), ಡೇವಿಡ್ ಮಿಲ್ಲರ್ (ಸೌತ್ ಆಫ್ರಿಕಾ), ಪೃಥ್ವಿ ಶಾ (ಭಾರತ).

ವಿಕೆಟ್ ಕೀಪರ್ಸ್ ಸೆಟ್ ಆಟಗಾರರು: ಫಿನ್ ಅಲೆನ್ (ನ್ಯೂಝಿಲೆಂಡ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಕೆಎಸ್ ಭರತ್ (ಭಾರತ), ಕ್ವಿಂಟನ್ ಡಿ ಕಾಕ್ (ಸೌತ್ ಆಫ್ರಿಕಾ), ಬೆನ್ ಡಕೆಟ್ (ಇಂಗ್ಲೆಂಡ್), ರಾಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಜೇಮಿ ಸ್ಮಿತ್ (ಇಂಗ್ಲೆಂಡ್).

ವೇಗದ ಬೌಲರ್ಗಳ ಸೆಟ್ ಆಟಗಾರರು: ಜೆರಾಲ್ಡ್ ಕೋಟ್ಝಿ (ಸೌತ್ ಆಫ್ರಿಕಾ), ಆಕಾಶ್ ದೀಪ್ (ಭಾರತ), ಜೇಕಬ್ ಡಫಿ (ನ್ಯೂಝಿಲೆಂಡ್), ಫಝಲ್ಹಕ್ ಫಾರೂಕಿ (ಅಫ್ಘಾನಿಸ್ತಾನ್), ಮ್ಯಾಟ್ ಹೆನ್ರಿ (ನ್ಯೂಝಿಲೆಂಡ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಶಿವಂ ಮಾವಿ (ಭಾರತ), ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ), ಮಥೀಶ ಪತಿರಾಣ (ಶ್ರೀಲಂಕಾ).

ಸ್ಪಿನ್ ಬೌಲರ್ಗಳ ಸೆಟ್: ರವಿ ಬಿಷ್ಣೋಯ್ (ಭಾರತ), ರಾಹುಲ್ ಚಹರ್ (ಭಾರತ), ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್), ಮುಜೀಬ್ ಉರ್ ರೆಹಮಾನ್ (ಅಫ್ಗಾನಿಸ್ತಾನ್), ಮಹೀಶ್ ತೀಕ್ಷಣ (ಶ್ರೀಲಂಕಾ).
Published On - 10:55 am, Tue, 9 December 25




