IPL 2026: CSK ತಂಡದಿಂದ 5 ಆಟಗಾರರು ಔಟ್..!

Updated on: Oct 11, 2025 | 10:23 AM

IPL 2026 CSK: ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಐವರು ಆಟಗಾರರು ಹೊರಬೀಳುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೆ ಅಂತಿಮ ಪಟ್ಟಿಯಲ್ಲಿ ಮತ್ತಷ್ಟು ಆಟಗಾರರು ಕೂಡ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಐಪಿಎಲ್ 2026 ರಲ್ಲಿ ಸಿಎಸ್​ಕೆ ಫ್ರಾಂಚೈಸಿ ದೊಡ್ಡ ಮೊತ್ತದ ಪರ್ಸ್ ಹೊಂದುವ ಸಾಧ್ಯತೆಯಿದೆ.

1 / 6
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಿಂದ 5 ಆಟಗಾರರು ಹೊರಬೀಳುವುದು ಬಹುತೇಕ ಖಚಿತವಾಗಿದೆ. ಅಂದರೆ ಕಳೆದ ಸೀಸನ್​ನಲ್ಲಿ ಸಿಎಸ್​ಕೆ ಪರ ಕಳಪೆ ಪ್ರದರ್ಶನ ನೀಡಿದ್ದ ಐವರನ್ನು ಹರಾಜಿಗೂ ಮುನ್ನ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಆ ಆಟಗಾರರು ಯಾರೆಂದರೆ...

2 / 6
ದೀಪಕ್ ಹೂಡಾ: ಐಪಿಎಲ್ 2025 ರ ಮೆಗಾ ಹರಾಜಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ದೀಪಕ್ ಹೂಡಾ ಅವರನ್ನು 1.70 ಕೋಟಿ ರೂ. ಗೆ ಖರೀದಿಸಿದ್ದರು. ಆದರೆ ಕಳೆದ ಸೀಸನ್​ನಲ್ಲಿ 7 ಪಂದ್ಯಗಳನ್ನಾಡಿದ್ದ ಹೂಡಾ ಕಲೆಹಾಕಿದ್ದು ಕೇವಲ 31 ರನ್​ಗಳು ಮಾತ್ರ. ಹೀಗಾಗಿ ಅವರನ್ನು ರಿಲೀಸ್ ಮಾಡಲು ಸಿಎಸ್​ಕೆ ಫ್ರಾಂಚೈಸಿ ನಿರ್ಧರಿಸಿದೆ.

3 / 6
ವಿಜಯ್ ಶಂಕರ್: ತಮಿಳುನಾಡು ಮೂಲದ ಆಲ್​ರೌಂಡರ್ ವಿಜಯ್ ಶಂಕರ್ ಅವರನ್ನು ಸಿಎಸ್​ಕೆ ಫ್ರಾಂಚೈಸಿ ಕಳೆದ ಸೀಸನ್​ಹರಾಜಿನಲ್ಲಿ 1.2 ಕೋಟಿ ರೂ.ಗೆ ಖರೀದಿಸಿದ್ದರು. ಆದರೆ ಕೊನೆಯ ಸೀಸನ್​ನಲ್ಲಿ 6 ಪಂದ್ಯಗಳನ್ನಾಡಿದ್ದ ವಿಜಯ್ ಶಂಕರ್ ಕಲೆಹಾಕಿದ್ದು ಕೇವಲ 112 ರನ್​ಗಳು ಮಾತ್ರ. ಹೀಗಾಗಿ ಅವರನ್ನು ಸಹ ಬಿಡುಗಡೆ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಿರ್ಧರಿಸಿದೆ.

4 / 6
ರಾಹುಲ್ ತ್ರಿಪಾಠಿ: 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ತ್ರಿಪಾಠಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 3.40 ಕೋಟಿ ರೂ.ಗೆ ಖರೀದಿಸಿದ್ದರು. ಅದರಂತೆ ಕಳೆದ ಸೀಸನ್​ನಲ್ಲಿ ಸಿಎಸ್​ಕೆ ಪರ 5 ಪಂದ್ಯಗಳನ್ನಾಡಿದ್ದ ತ್ರಿಪಾಠಿ ಕಲೆಹಾಕಿದ್ದು ಕೇವಲ 55 ರನ್​ಗಳು ಮಾತ್ರ. ಹೀಗಾಗಿ ಈ ಬಾರಿಯ ಹರಾಜಿಗೂ ಮುನ್ನ ಅವರನ್ನು ರಿಲೀಸ್ ಮಾಡಲು ಸಿಎಸ್​ಕೆ ನಿರ್ಧರಿಸಿದೆ.

5 / 6
ಸ್ಯಾಮ್ ಕರನ್: ಐಪಿಎಲ್ 2025 ರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಸ್ಯಾಮ್ ಕರನ್​ಗೆ ನೀಡಿರುವ ಸಂಭಾವನೆ 2.4 ಕೋಟಿ ರೂ. ಇದಾಗ್ಯೂ ಕಳೆದ ಸೀಸನ್​ನಲ್ಲಿ ಸ್ಯಾಮ್ ಕರನ್ ಸಿಎಸ್​ಕೆ ಪರ 5 ಪಂದ್ಯಗಳಲ್ಲಿ ಕಲೆಹಾಕಿದ್ದು 114 ರನ್​ಗಳು ಮಾತ್ರ. ಹಾಗೆಯೇ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಕರನ್ ಅವರನ್ನು ಸಹ ಬಿಡುಗಡೆ ಮಾಡಲು ಸಿಎಸ್​ಕೆ ಮುಂದಾಗಿದೆ.

6 / 6
ಡೆವೊನ್ ಕಾನ್ವೆ: ಚೆನ್ನೈ ಸೂಪರ್ ಕಿಂಗ್ಸ್ ಪರ ಕಳೆದ ಕೆಲ ವರ್ಷಗಳಿಂದ ಕಣಕ್ಕಿಳಿಯುತ್ತಿದ್ದ ಡೆವೊನ್ ಕಾನ್ವೆ ಅವರನ್ನು ಸಹ ಈ ಬಾರಿ ಬಿಡುಗಡೆ ಮಾಡಲು ಸಿಎಸ್​ಕೆ ನಿರ್ಧರಿಸಿದೆ. ಏಕೆಂದರೆ ಕಳೆದ ಸೀಸನ್​ನಲ್ಲಿ ಕಾನ್ವೆ 6 ಪಂದ್ಯಗಳಿಂದ ಕೇವಲ 156 ರನ್​ ಮಾತ್ರ ಕಲೆಹಾಕಿದ್ದರು. ಇದೀಗ ಕಳಪೆ ಫಾರ್ಮ್​ನಲ್ಲಿರುವ ಡೆವೊನ್ ಕಾನ್ವೆಯನ್ನು ಬಿಡುಗಡೆ ಮಾಡಿ 6.25 ಕೋಟಿ ರೂ. ಪರ್ಸ್ ಮೊತ್ತ ಹೆಚ್ಚಿಸಲು ಸಿಎಸ್​ಕೆ ಫ್ರಾಂಚೈಸಿ ನಿರ್ಧರಿಸಿದೆ.