IPL 2026: ಹೆಚ್ಚುವರಿ 10 ಪಂದ್ಯಗಳು… ಐಪಿಎಲ್​​ನಲ್ಲಿ ಮಹತ್ವದ ಬದಲಾವಣೆ

Updated on: Nov 04, 2025 | 7:05 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಏಕೆಂದರೆ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಐಪಿಎಲ್ ಸೀಸನ್-19 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಅದರಂತೆ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಒಟ್ಟು 84 ಪಂದ್ಯಗಳನ್ನಾಡಬೇಕಾಗುತ್ತದೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL) ಮಹತ್ವದ ಬದಲಾವಣೆಯಾಗಲಿರುವುದು ಖಚಿತವಾಗಿದೆ. ಅದು ಕೂಡ ಪಂದ್ಯಗಳ ಸಂಖ್ಯೆಗಳ ಹೆಚ್ಚಳದೊಂದಿಗೆ ಎಂಬುದು ವಿಶೇಷ. ಅಂದರೆ ಐಪಿಎಲ್ 2026 ರಿಂದ ಹೆಚ್ಚುವರಿ 10 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತಿಸಿದೆ.

2 / 7
ಈ ಹಿಂದೆಯೇ ಐಪಿಎಲ್ ಪಂದ್ಯಗಳ ಹೆಚ್ಚಳದ ಬಗ್ಗೆ ಬಿಸಿಸಿಐ ಚರ್ಚಿಸಿತ್ತು. ಅದರಂತೆ ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿತ್ತು. ಅಲ್ಲದೆ 2027 ರಲ್ಲಿ ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು 94 ಕ್ಕೇರಿಸಲು ಚಿಂತಿಸಲಾಗಿತ್ತು.

3 / 7
ಆದರೆ ಈ ಯೋಜನೆಯು ಐಪಿಎಲ್ 2025 ರಲ್ಲಿ ಕಾರ್ಯಗತವಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಆಟಗಾರರ ವಿಂಡೋ. ಅಂದರೆ ಪಂದ್ಯಗಳ ಹೆಚ್ಚಳದಿಂದಾಗಿ ವಿದೇಶಿ ಆಟಗಾರರು ಅಲಭ್ಯರಾಗುವ ಸಾಧ್ಯತೆಗಳಿದ್ದವು. ಆದರೆ ಈ ಬಾರಿ 84 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ.

4 / 7
ಅದರಂತೆ ಐಪಿಎಲ್ 2026 ರಲ್ಲಿ ಒಟ್ಟು 84 ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿ 10 ಪಂದ್ಯಗಳಿರಲಿದೆ. ಇದಕ್ಕೂ ಮುನ್ನ 74 ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. ಇದೀಗ 84 ಪಂದ್ಯಗಳ ಟೂರ್ನಿ ನಡೆಸಲು ಚಿಂತಿಸಲಾಗಿದೆ.

5 / 7
ಅಷ್ಟೇ ಅಲ್ಲದೆ 2027 ರಿಂದ ಐಪಿಎಲ್​ ಅನ್ನು ಲೀಗ್​ ಮಾದರಿಯಲ್ಲಿ ಆಯೋಜಿಸಲಾಗುತ್ತದೆ. ಅಂದರೆ ಇಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ. 9 ಪಂದ್ಯಗಳು ಹೋಮ್ ಗ್ರೌಂಡ್​ನಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಅವೇ ಮೈದಾನದಲ್ಲಿ ಜರುಗಲಿದೆ. ಈ ಮೂಲಕ ಲೀಗ್​ ಹಂತದಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ.

6 / 7
ಒಟ್ಟಿನಲ್ಲಿ ಐಪಿಎಲ್ ಸೀಸನ್-19 ರಲ್ಲಿ 84 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರೆಯಲಿದೆ. ಅಲ್ಲದೆ ಮರುವರ್ಷವೇ, ಅಂದರೆ 2027 ರಿಂದ 94 ಪಂದ್ಯಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್​ ಸಾಕ್ಷಿಯಾಗುವುದು ಬಹುತೇಕ ಖಚಿತವಾಗಿದೆ.

7 / 7
ಪಂದ್ಯಗಳ ಹೆಚ್ಚಳವೇಕೆ? ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಐಪಿಎಲ್ ಸೀಸನ್-18 ಮತ್ತು 19 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿತ್ತು. ಆದರೆ ಕಳೆದ ಬಾರಿ ಆಟಗಾರರ ಅಲಭ್ಯತೆಯ ಕಾರಣ 84 ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಇದೀಗ ಮತ್ತೊಮ್ಮೆ ಪಂದ್ಯಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಐಪಿಎಲ್ ಪ್ರಸಾರಕ ಸಂಸ್ಥೆಗಳು ಮುಂದಿಟ್ಟಿವೆ. ಹೀಗಾಗಿ ಐಪಿಎಲ್ 2026 ರಲ್ಲಿ 84 ಪಂದ್ಯಗಳು ನಡೆಯುವುದು ಬಹುತೇಕ ಖಚಿತ ಎನ್ನಬಹುದು.