IPL 2026: ಕೆಕೆಆರ್ ತಂಡಕ್ಕೆ ಆರ್​ಸಿಬಿ ಮಾಜಿ ಆಟಗಾರ ಕೋಚ್

Updated on: Nov 13, 2025 | 3:49 PM

Shane Watson Joins KKR: ಐಪಿಎಲ್ 2026 ಹರಾಜಿಗೆ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಕೋಚಿಂಗ್ ಸಿಬ್ಬಂದಿಯನ್ನು ಬಲಪಡಿಸಿದೆ. ಐಪಿಎಲ್ ಲೆಜೆಂಡ್ ಶೇನ್ ವ್ಯಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಿದೆ. ಆರ್​ಸಿಬಿ, ರಾಜಸ್ಥಾನ್ ರಾಯಲ್ಸ್, ಸಿಎಸ್‌ಕೆ ಪರ ಮಿಂಚಿದ್ದ ಆಲ್‌ರೌಂಡರ್ ವ್ಯಾಟ್ಸನ್ ಸೇರ್ಪಡೆ ಕೆಕೆಆರ್‌ಗೆ 2026ರ ಐಪಿಎಲ್ ಪ್ರಶಸ್ತಿ ಗೆಲ್ಲಲು ನೆರವಾಗಲಿದೆ. ಅಭಿಷೇಕ್ ನಾಯರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

1 / 7
ಐಪಿಎಲ್ 2026 ರ ಆಟಗಾರರ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳ ನ್ಯೂನತೆಗಳನ್ನು ಸರಿದೂಗಿಸುವ ಕೆಲಸಕ್ಕೆ ಕೈಹಾಕಿವೆ. ಆ ಪ್ರಕಾರ ಕೆಲವು ಫ್ರಾಂಚೈಸಿಗಳು ಇತರ ಫ್ರಾಂಚೈಸಿಗಳಿಂದ ತಮಗೆ ಬೇಕಾದ ಆಟಗಾರರನ್ನು ಟ್ರೇಡಿಂಗ್ ಮಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವು ಫ್ರಾಂಚೈಸಿಗಳು ತಮ್ಮ ತಂಡದ ಕೋಚಿಂಗ್ ವಿಭಾಗಕ್ಕೆ ಹೊಸಬರನ್ನು ಕರೆತರುತ್ತಿವೆ. ಅಂತಹ ಫ್ರಾಂಚೈಸಿಗಳಲ್ಲಿ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್​ ಕೂಡ ಒಂದಾಗಿದೆ.

2 / 7
ಐಪಿಎಲ್​ನಲ್ಲಿ ಮೂರು ಬಾರಿಯ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್​, ತಮ್ಮ ಕೋಚಿಂಗ್ ಸಿಬ್ಬಂದಿಯ ನವೀಕರಣವನ್ನು ಮುಂದುವರೆಸಿದ್ದು, ಆಸ್ಟ್ರೇಲಿಯಾದ ಪ್ರಸಿದ್ಧ ಆಲ್‌ರೌಂಡರ್ ಹಾಗೂ ಆರ್​ಸಿಬಿ ತಂಡದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಅವರನ್ನು ತಂಡದ ಹೊಸ ಸಹಾಯಕ ಕೋಚ್ ಆಗಿ ನೇಮಿಸಿದೆ.

3 / 7
2024 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಕೋಲ್ಕತ್ತಾ, ನವೆಂಬರ್ 13 ರ ಗುರುವಾರ ವ್ಯಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಕ ಮಾಡಿರುವುದಾಗಿ ಘೋಷಿಸಿದೆ. ವ್ಯಾಟ್ಸನ್ ಅವರನ್ನು ಕೆಕೆಆರ್‌ಗೆ ಸ್ವಾಗತಿಸುತ್ತಾ, ಫ್ರಾಂಚೈಸಿ ಸಿಇಒ ವೆಂಕಿ ಮೈಸೂರು, ಆಸ್ಟ್ರೇಲಿಯಾದ ದಂತಕಥೆ ಆಟಗಾರ ಮತ್ತು ತರಬೇತುದಾರರಾಗಿ ಟಿ20 ಕ್ರಿಕೆಟ್‌ನ ಜ್ಞಾನವು ಕೋಲ್ಕತ್ತಾಗೆ ತುಂಬಾ ಉಪಯುಕ್ತವಾಗಲಿದೆ ಎಂದಿದ್ದಾರೆ.

4 / 7
ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ವಿದೇಶಿ ಆಟಗಾರರಲ್ಲಿ ಒಬ್ಬರಾದ ಶೇನ್ ವ್ಯಾಟ್ಸನ್ ತಮ್ಮ ವೃತ್ತಿಜೀವನದುದ್ದಕ್ಕೂ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವು ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶೇನ್ ವಾಟ್ಸನ್​ ಟೂರ್ನಮೆಂಟ್ ಆಫ್ ದಿ ಪ್ಲೇಯರ್ ಪ್ರಶಸ್ತಿಯನ್ನು ಗೆದ್ದಿದ್ದರು.

5 / 7
2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವ ಮೊದಲು ಶೇನ್ ವಾಟ್ಸನ್ 2016 ಮತ್ತು 2017 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ತಮ್ಮ ಚೊಚ್ಚಲ ಸೀಸನ್​ನಲ್ಲಿ 555 ರನ್ ಬಾರಿಸುವ ಮೂಲಕ ತಂಡವು ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಾಟ್ಸನ್ ಪ್ರಮುಖ ಪಾತ್ರವಹಿಸಿದ್ದರು. ಒಟ್ಟಾರೆಯಾಗಿ, ವ್ಯಾಟ್ಸನ್ 145 ಐಪಿಎಲ್ ಪಂದ್ಯಗಳನ್ನು ಆಡಿದ್ದು, 3,874 ರನ್ ಮತ್ತು 92 ವಿಕೆಟ್‌ಗಳನ್ನು ಪಡೆದಿದ್ದಾರೆ.

6 / 7
ಕೋಲ್ಕತ್ತಾದ ಕೋಚಿಂಗ್ ಸಿಬ್ಬಂದಿಗೆ ವ್ಯಾಟ್ಸನ್ ಎರಡನೇ ಪ್ರಮುಖ ಸೇರ್ಪಡೆ. ಕೆಲವೇ ದಿನಗಳ ಹಿಂದೆ, ಕೆಕೆಆರ್ ಅಭಿಷೇಕ್ ನಾಯರ್ ಅವರನ್ನು ತಮ್ಮ ಹೊಸ ಮುಖ್ಯ ಕೋಚ್ ಆಗಿ ನೇಮಿಸಿತು. ಕಳೆದ ಆವೃತ್ತಿಯ ನಂತರ ರಾಜೀನಾಮೆ ನೀಡಿದ ಚಂದ್ರಕಾಂತ್ ಪಂಡಿತ್ ಅವರ ಬದಲಿಗೆ ನಾಯರ್ ನೇಮಕಗೊಂಡರು.

7 / 7
ಅಭಿಷೇಕ್ ನಾಯರ್ ಈ ಹಿಂದೆ ಕೆಕೆಆರ್‌ ತಂಡದಲ್ಲಿ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಟೀಂ ಇಂಡಿಯಾದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು. ಆದಾಗ್ಯೂ, ಕೇವಲ ಎಂಟು ತಿಂಗಳ ನಂತರ ಅವರನ್ನು ಭಾರತೀಯ ತಂಡದಿಂದ ವಜಾಗೊಳಿಸಲಾಯಿತು.