IPL 2026: ಕ್ಯಾಮರೋನ್​ ಗ್ರೀನ್ RCB ತಂಡಕ್ಕೆ ರಿಎಂಟ್ರಿ?

Updated on: Aug 25, 2025 | 9:10 AM

Cameron Green: ಕ್ಯಾಮರೋನ್ ಗ್ರೀನ್ ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 13 ಪಂದ್ಯಗಳನ್ನಾಡಿದ್ದರು. ಈ ವೇಳೆ ಬ್ಯಾಟಿಂಗ್​ನಲ್ಲಿ 255 ರನ್ ಕಲೆಹಾಕಿದರೆ, ಬೌಲಿಂಗ್​ನಲ್ಲಿ 10 ವಿಕೆಟ್ ಪಡೆದಿದ್ದರು. ಆದರೆ ಗಾಯದ ಕಾರಣ ಅವರು ಐಪಿಎಲ್ 2025 ರಲ್ಲಿ ಕಾಣಿಸಿಕೊಂಡಿರಲಿಲ್ಲ.

1 / 7
ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಗ್ರೀನ್, ಇದೀಗ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲೂ ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ದಾರೆ.

2 / 7
ಮೆಕೆಯಲ್ಲಿನ ಗ್ರೇಟ್ ಬಾರಿಯರ್ ಗ್ರೀಫ್ ಅರೆನಾ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ರೀನ್ ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ 55 ಎಸೆತಗಳನ್ನು ಎದುರಿಸಿದ ಗ್ರೀನ್ 8 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 118 ರನ್ ಬಾರಿಸಿದ್ದರು.

3 / 7
ಕ್ಯಾಮರೋನ್ ಗ್ರೀನ್ ಅವರ ಈ ವಿಸ್ಫೋಟಕ ಸೆಂಚುರಿ ಬೆನ್ನಲ್ಲೇ ಆಸೀಸ್ ಆಲ್​ರೌಂಡರ್ ಮುಂಬರುವ ಐಪಿಎಲ್​ನಲ್ಲಿ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಗಾಯದ ಕಾರಣ ಕಳೆದ ಬಾರಿಯ ಐಪಿಎಲ್​ನಿಂದ ಗ್ರೀನ್ ಹೊರಗುಳಿದಿದ್ದರು.

4 / 7
ಅದಕ್ಕೂ ಮುನ್ನ ಅಂದರೆ 2024 ರಲ್ಲಿ ಕ್ಯಾಮರೋನ್ ಗ್ರೀನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದರು. ಆರ್​ಸಿಬಿ ಪರ 13 ಪಂದ್ಯಗಳನ್ನಾಡಿದ್ದ ಗ್ರೀನ್ ಒಟ್ಟು 255 ರನ್ ಕಲೆಹಾಕಿದ್ದರು. ಅಲ್ಲದೆ 10 ವಿಕೆಟ್​ಗಳನ್ನು ಸಹ ಪಡೆದಿದ್ದರು.

5 / 7
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಉತ್ತಮ ಆಲ್​ರೌಂಡರ್ ಪ್ರದರ್ಶನ ನೀಡಿದ್ದರಿಂದ ಐಪಿಎಲ್ 2025 ರ ಹರಾಜಿಗೂ ಮುನ್ನ ಕ್ಯಾಮರೋನ್ ಗ್ರೀನ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಆರ್​ಸಿಬಿ ಪ್ಲ್ಯಾನ್ ಮಾಡಿತ್ತು. ಆದರೆ ಗಾಯಗೊಂಡಿದ್ದ ಕಾರಣ ಅವರನ್ನು ರಿಟೈನ್ ಮಾಡಿರಲಿಲ್ಲ ಎಂಬುದನ್ನು ಆರ್​ಸಿಬಿ ತಂಡದ ನಿರ್ದೇಶಕರಾದ ಮೋ ಬೊಬಾಟ್ ತಿಳಿಸಿದ್ದಾರೆ.

6 / 7
ಅಂದರೆ ಕ್ಯಾಮರೋನ್ ಗ್ರೀನ್ ಐಪಿಎಲ್ 2025 ರಲ್ಲಿ ಆಡುವುದು ಖಚಿತವಾಗಿದ್ದರೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡುತ್ತಿರಲಿಲ್ಲ. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಿರುವ ಗ್ರೀನ್ ಭರ್ಜರಿ ಪ್ರದರ್ಶನದೊಂದಿಗೆ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಆಸೀಸ್ ಆಲ್​ರೌಂಡರ್​ನ ಖರೀದಿಗೆ ಹಲವು ಫ್ರಾಂಚೈಸಿಗಳು ಪ್ಲ್ಯಾನ್ ರೂಪಿಸುತ್ತಿದ್ದಾರೆ.

7 / 7
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಗ್ರೀನ್ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಲು ತುದಿಗಾಲಲ್ಲಿ ನಿಂತಿದೆ. ಏಕೆಂದರೆ ಕಳೆದ ಬಾರಿ ಆರ್​ಸಿಬಿ ಪರ ಆಲ್​ರೌಂಡರ್ ಆಗಿ ಕಣಕ್ಕಿಳಿದ ಲಿಯಾಮ್ ಲಿವಿಂಗ್​ಸ್ಟೋನ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಲಿವಿಂಗ್​ಸ್ಟೋನ್ ಅವರನ್ನು ಬಿಡುಗಡೆ ಮಾಡಿ ಅವರ ಸ್ಥಾನಕ್ಕೆ ಕ್ಯಾಮರೋನ್ ಗ್ರೀನ್ ಅವರನ್ನು ಆಯ್ಕೆ ಮಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆಸಕ್ತಿ ಹೊಂದಿದೆ. ಹೀಗಾಗಿ ಐಪಿಎಲ್ 2026 ರಲ್ಲಿ ಗ್ರೀನ್ ಮತ್ತೆ ರೆಡ್ ಜೆರ್ಸಿಯಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.