AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: RCB ಜಸ್ಟ್ 3 ಪಂದ್ಯ ಗೆದ್ದರೆ ಸಾಕು!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒಂದು ತಂಡವು ಪ್ಲೇಆಫ್​ ಅನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ 8 ಪಂದ್ಯಗಳನ್ನು ಗೆದ್ದರೆ ಸಾಕು. ಈ ಎಂಟು ಮ್ಯಾಚ್​ಗಳ ಮೂಲಕ 16 ಅಂಕಗಳನ್ನು ಕಲೆಹಾಕಿದರೆ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವುದು ಕನ್ಫರ್ಮ್​ ಆಗಲಿದೆ. ಇದರೊಂದಿಗೆ ಪ್ಲೇಆಫ್ ಆಡುವುದು ಸಹ ಖಚಿತವಾಗಲಿದೆ.

ಝಾಹಿರ್ ಯೂಸುಫ್
|

Updated on: Apr 25, 2026 | 8:41 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಸೀಸನ್-19ರ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಈ ಪ್ರದರ್ಶನದೊಂದಿಗೆ ಆರ್​ಸಿಬಿ ಪಡೆ ಮೊದಲ ಏಳು ಪಂದ್ಯಗಳ ಮೂಲಕ 10 ಅಂಕಗಳನ್ನು ಪಡೆದುಕೊಂಡಿದೆ.

1 / 6
ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗು ಬಡಿಯುವ ಮೂಲಕ ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸಿದ್ದ ಆರ್​ಸಿಬಿ, ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಆದರೆ ಮೂರನೇ ಮ್ಯಾಚ್​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲೊಪ್ಪಿಕೊಂಡಿದ್ದರು.

2 / 6
ಆರ್​ಆರ್ ವಿರುದ್ಧದ ಈ ಸೋಲಿನ ಬಳಿಕ ಕಂಬ್ಯಾಕ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬಗ್ಗು ಬಡಿದಿದ್ದರು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುವ ಮೂಲಕ ನಿರಾಸೆ ಮೂಡಿಸಿದ್ದರು.

3 / 6
ಇದೀಗ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 10 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

4 / 6
ಮೊದಲಾರ್ಧದಲ್ಲಿ 5 ಗೆಲುವುಗಳೊಂದಿಗೆ 10 ಅಂಕ ಪಡೆದಿರುವ ಆರ್​ಸಿಬಿ ತಂಡವು ಪ್ಲೇಆಫ್​ನಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಮೂರೇ ಮೂರು ಗೆಲುವು ಸಾಕು. ಅಂದರೆ ದ್ವಿತೀಯಾರ್ಧದ 7 ಮ್ಯಾಚ್​​ಗಳಲ್ಲಿ ಆರ್​ಸಿಬಿ ತಂಡ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಒಟ್ಟು 16 ಅಂಕಗಳನ್ನು ಪಡೆದು ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ.

5 / 6
ಹೀಗಾಗಿ ಮುಂದಿನ ಏಳು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಮ್ಯಾಚ್​ಗಳಲ್ಲಿ ಜಯ ಸಾಧಿಸಿ ಪ್ಲೇಆಫ್​ಗೇರುವುದನ್ನು ಎದುರು ನೋಡಬಹುದು. ಈ ಮೂಲಕ ದ್ವಿತೀಯ ಸುತ್ತಿನಲ್ಲೂ ಅಮೋಘ ಪ್ರದರ್ಶನ ನೀಡಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

6 / 6
Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್

100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ

ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?

11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ

ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ

ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು

‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ

ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್

ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ