Updated on: Mar 19, 2023 | 7:21 AM
ಐಪಿಎಲ್ ಇತಿಹಾಸದಲ್ಲಿ ಹಲವು ಆಟಗಾರರು ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಇನ್ನು ಕೆಲವರು ದಾಖಲೆಯಲ್ಲಿ ಹೊಸ್ತಿಲಿನಲ್ಲಿ ಎಡವಿದ್ದಾರೆ. ಇದೀಗ ಅಂತಹ ಆಟಗಾರರ ಬಗ್ಗೆ ಮಾತನಾಡುತ್ತಿದ್ದು, ಶತಕದಂಚ್ಚಿನಲ್ಲಿ ಎಡವಿದ ಆಟಗಾರರು ಯಾರು ಎಂಬುದರ ವಿವರ ಇಲ್ಲಿದೆ.
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 3 ಬಾರಿ ನರ್ವಸ್ 90 ಗೆ ಬಲಿಯಾಗಿದ್ದಾರೆ.
ಈ ಪಟ್ಟಿಯಲ್ಲಿ ಮತ್ತೊಬ್ಬ ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಮೊದಲ ಸ್ಥಾನದಲ್ಲಿದ್ದು, ಅವರು ಕೂಡ ಒಟ್ಟು 3 ಬಾರಿ ನರ್ವಸ್ 90 ಗೆ ಬಲಿಯಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಫಾಫ್ ಡು ಪ್ಲೆಸಿಸ್ ಎರಡು ಬಾರಿ 90 ರನ್ ಗಳಿಸಿ ಔಟಾಗಿದ್ದಾರೆ.
ಸಿಕ್ಸರ್ ಕಿಂಗ್ ಕ್ರಿಸ್ ಗೇಲ್ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ನರ್ವಸ್ 90ಕ್ಕೆ ಬಲಿಯಾಗಿದ್ದಾರೆ.
ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಕೂಡ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ನರ್ವಸ್ 90ಕ್ಕೆ ಬಲಿಯಾಗಿದ್ದಾರೆ.