IPL 2023: ದಾಖಲೆಯ 263 ರನ್ಸ್: ಅಂದು RCB ಪರ ಯಾರ್ಯಾರು ಎಷ್ಟು ರನ್ಗಳಿಸಿದ್ದರು? ಇಲ್ಲಿದೆ ಮಾಹಿತಿ
TV9 Web | Updated By: ಝಾಹಿರ್ ಯೂಸುಫ್
Updated on:
Apr 29, 2023 | 3:57 PM
IPL Highest Team Score: 5ನೇ ಕ್ರಮಾಂಕದಲ್ಲಿ ಆಡಿದ ಸೌರವ್ ತಿವಾರಿ 2 ಎಸೆತಗಳಲ್ಲಿ 2 ರನ್ಗಳಿಸಿ ಅಶೋಕ್ ದಿಂಡಾಗೆ ವಿಕೆಟ್ ಒಪ್ಪಿಸಿದರೆ, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರವಿ ರಾಂಪಾಲ್ ಶೂನ್ಯಕ್ಕೆ ಔಟಾಗಿದ್ದರು.
1 / 13
IPL 2024: ದಾಖಲೆಯ 263 ರನ್ಗಳು. 11 ವರ್ಷಗಳ ಹಿಂದೆ ಐಪಿಎಲ್ನಲ್ಲಿ ಆರ್ಸಿಬಿ ಕಲೆಹಾಕಿದ 263 ರನ್ಗಳ ಸ್ಕೋರ್ಕಾರ್ಡ್ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಸನ್ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಬಾರಿಸಿ ದಾಖಲೆ ಬರೆದಿರುವುದು.
2 / 13
ಅಂದರೆ ಐಪಿಎಲ್ ಇತಿಹಾಸದಲ್ಲೇ ಕೇವಲ 2 ತಂಡಗಳು ಮಾತ್ರ 250 ಕ್ಕಿಂತ ಹೆಚ್ಚು ರನ್ ಕಲೆಹಾಕಿದೆ. 2013 ರಲ್ಲಿ ಆರ್ಸಿಬಿ 263 ರನ್ಗಳಿಸಿದರೆ, 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ 257 ರನ್ ಬಾರಿಸಿದೆ.
3 / 13
ಇದಾಗ್ಯೂ ಐಪಿಎಲ್ ಇತಿಹಾಸದಲ್ಲಿ ಮೂಡಿಬಂದ ಮೊದಲ 250+ ರನ್ಗಳ ದಾಖಲೆ ಈಗಲೂ ವಿಶೇಷ ದಾಖಲೆಯಾಗಿಯೇ ಉಳಿದಿದೆ. ಈ ದಾಖಲೆಯ ಇನಿಂಗ್ಸ್ನಲ್ಲಿ ಅಂದು ಆರ್ಸಿಬಿ ಪರ ಯಾರ್ಯಾರು ಎಷ್ಟೆಷ್ಟು ರನ್ ಕಲೆಹಾಕಿದ್ದರು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
4 / 13
2013, ಏಪ್ರಿಲ್ 23...ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪುಣೆ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ವಾರಿಯರ್ಸ್ ತಂಡದ ನಾಯಕ ಆರೋನ್ ಫಿಂಚ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.
5 / 13
ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಸ್ಪೋಟಕ ಆರಂಭ ಒದಗಿಸಿದ್ದರು. ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅತ್ತ ಯೂನಿವರ್ಸ್ ಬಾಸ್ನ ಅಬ್ಬರದಿಂದ ಪುಣೆ ವಾರಿಯರ್ಸ್ ಬೌಲರ್ಗಳು ಲಯ ತಪ್ಪಿದರು. ಪರಿಣಾಮ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದರು.
6 / 13
ಅಷ್ಟೇ ಅಲ್ಲದೆ 66 ಎಸೆತಗಳಲ್ಲಿ 17 ಸಿಕ್ಸ್ ಹಾಗೂ 13 ಫೋರ್ನೊಂದಿಗೆ ಅಜೇಯ 175 ರನ್ ಬಾರಿಸಿ ಐಪಿಎಲ್ನಲ್ಲಿ ಹೊಸ ದಾಖಲೆಯನ್ನೂ ಕೂಡ ಬರೆದರು.
7 / 13
ಮತ್ತೊಂದೆಡೆ ತಿಲಕರತ್ನೆ ದಿಲ್ಶಾನ್ ಆರಂಭದಲ್ಲಿ ತುಸು ಬಿರುಸಿನ ಬ್ಯಾಟಿಂಗ್ ನಡೆಸಿದರೂ, ಆ ಬಳಿಕ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ 36 ಎಸೆತಗಳನ್ನು ಎದುರಿಸಿದ ದಿಲ್ಶಾನ್ 5 ಫೋರ್ನೊಂದಿಗೆ 33 ರನ್ಗಳಿಸಿ ಲೂಕ್ ರೈಟ್ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಇದಕ್ಕೂ ಮುನ್ನ ಗೇಲ್ ಜೊತೆ ಮೊದಲ ವಿಕೆಟ್ಗೆ 167 ರನ್ಗಳ ಭರ್ಜರಿ ಜೊತೆಯಾಟವಾಡಿದ್ದರು.
8 / 13
ಆ ನಂತರ ಬಂದ ವಿರಾಟ್ ಕೊಹ್ಲಿ 9 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ನೊಂದಿಗೆ 11 ರನ್ಗಳಿಸಿದರೂ ಅಶೋಕ್ ದಿಂಡಾ ಅವರ ಅತ್ಯುತ್ತಮ ಫೀಲ್ಡಿಂಗ್ನಿಂದಾಗಿ ರನೌಟ್ ಆಗಿ ಹೊರ ನಡೆದರು.
9 / 13
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ಅಕ್ಷರಶಃ ಅಬ್ಬರಿಸುವ ಮೂಲಕ ಪಂದ್ಯವನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ದರು. ಕೇವಲ 8 ಎಸೆತಗಳನ್ನು ಎದುರಿಸಿದ್ದ ಎಬಿಡಿ 3 ಭರ್ಜರಿ ಸಿಕ್ಸ್ ಹಾಗೂ 3 ಫೋರ್ನೊಂದಿಗೆ 31 ರನ್ ಬಾರಿಸಿ ಮಿಚೆಲ್ ಮಾರ್ಷ್ಗೆ ವಿಕೆಟ್ ಒಪ್ಪಿಸಿದ್ದರು. ಅಷ್ಟರಲ್ಲಾಗಲೇ ಆರ್ಸಿಬಿ ತಂಡದ ಮೊತ್ತ 250 ರ ಗಡಿದಾಟಿತ್ತು.
10 / 13
ಹಾಗೆಯೇ 5ನೇ ಕ್ರಮಾಂಕದಲ್ಲಿ ಆಡಿದ ಸೌರವ್ ತಿವಾರಿ 2 ಎಸೆತಗಳಲ್ಲಿ 2 ರನ್ಗಳಿಸಿ ಅಶೋಕ್ ದಿಂಡಾಗೆ ವಿಕೆಟ್ ಒಪ್ಪಿಸಿದರೆ, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರವಿ ರಾಂಪಾಲ್ ಶೂನ್ಯಕ್ಕೆ ಔಟಾಗಿದ್ದರು. ಇದರೊಂದಿಗೆ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ಗಳಿಸಿತು.
11 / 13
264 ರನ್ಗಳ ಬೃಹತ್ ಟಾರ್ಗೆಟ್ ಪಡೆದ ಪುಣೆ ವಾರಿಯರ್ಸ್ ಪರ ಸ್ಟೀವ್ ಸ್ಮಿತ್ 31 ಎಸೆತಗಳಲ್ಲಿ 41 ರನ್ಗಳಿಸಿದ್ದು ಗರಿಷ್ಠ ಸ್ಕೋರ್. ಅಲ್ಲದೆ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 133 ರನ್ಗಳಿಸುವ ಮೂಲಕ ಪುಣೆ ವಾರಿಯರ್ಸ್ ತಂಡವು 130 ರನ್ಗಳ ಅಂತರದಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿತ್ತು. ಈ ದಾಖಲೆಯ ಪಂದ್ಯದ ಉಭಯ ತಂಡಗಳ ಪ್ಲೇಯಿಂಗ್ 11 ಈ ಕೆಳಗಿನಂತಿದೆ...
12 / 13
ಪುಣೆ ವಾರಿಯರ್ಸ್ ಪ್ಲೇಯಿಂಗ್ 11: ಆರೋನ್ ಫಿಂಚ್ (ನಾಯಕ) , ರಾಬಿನ್ ಉತ್ತಪ್ಪ ( ವಿಕೆಟ್ ಕೀಪರ್ ) , ಯುವರಾಜ್ ಸಿಂಗ್ , ಸ್ಟೀವ್ ಸ್ಮಿತ್ , ಲೂಕ್ ರೈಟ್ , ಮಿಚೆಲ್ ಮಾರ್ಷ್ , ಮಿಥುನ್ ಮನ್ಹಾಸ್ , ಭುವನೇಶ್ವರ್ ಕುಮಾರ್ , ಈಶ್ವರ್ ಪಾಂಡೆ , ಅಲಿ ಮುರ್ತಾಜಾ , ಅಶೋಕ್ ದಿಂಡಾ.
13 / 13
ಆರ್ಸಿಬಿ ಪ್ಲೇಯಿಂಗ್ 11: ತಿಲಕರತ್ನೆ ದಿಲ್ಶನ್ , ಕ್ರಿಸ್ ಗೇಲ್ , ವಿರಾಟ್ ಕೊಹ್ಲಿ (ನಾಯಕ) , ಎಬಿ ಡಿವಿಲಿಯರ್ಸ್ , ಸೌರಭ್ ತಿವಾರಿ , ಅರುಣ್ ಕಾರ್ತಿಕ್ ( ವಿಕೆಟ್ ಕೀಪರ್ ) , ರವಿ ರಾಂಪಾಲ್ , ವಿನಯ್ ಕುಮಾರ್ , ಮುರಳಿ ಕಾರ್ತಿಕ್ , ಆರ್ ಪಿ ಸಿಂಗ್ , ಜಯದೇವ್ ಉನಾದ್ಕಟ್.