
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮುಂಬರುವ ಟಿ20 ವಿಶ್ವಕಪ್ 2026 ಕ್ಕೆ 17 ತಂಡಗಳು ಎಂಟ್ರಿ ಕೊಟ್ಟಿವೆ. ಈ ಹದಿನೇಳು ತಂಡಗಳಲ್ಲಿ 12 ಟೀಮ್ಗಳು ರ್ಯಾಂಕಿಂಗ್ ಮೂಲಕ ಅರ್ಹತೆ ಪಡೆದರೆ, 5 ತಂಡಗಳು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಮೂಲಕ ಟಿ20 ವಿಶ್ವಕಪ್ಗೆ ಕ್ವಾಲಿಫೈ ಆಗಿದೆ.

ಇಲ್ಲಿ ಅರ್ಹತಾ ಸುತ್ತಿನ ಮೂಲಕ ಕ್ವಾಲಿಫೈ ಆಗಿರುವ ತಂಡಗಳೆಂದರೆ ನೇಪಾಳ, ಒಮಾನ್, ಕೆನಡಾ, ಇಟಲಿ, ನಮೀಬಿಯಾ, ಝಿಂಬಾಬ್ವೆ, ಯುಎಇ ಮತ್ತು ನೆದರ್ಲೆಂಡ್ಸ್. ಅಮೆರಿಕ ಪ್ರಾದೇಶಿಕ ಅರ್ಹತಾ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕೆನಡಾ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಈ ಮೂಲಕ ಮುಂಬರುವ ಟಿ20 ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಇನ್ನು ಯುರೋಪ್ ಪ್ರಾದೇಶಿಕ ಅರ್ಹತಾ ಸುತ್ತಿನಲ್ಲಿ ಪಂದ್ಯಗಳಲ್ಲಿ ನೆದರ್ಲೆಂಡ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ನೆದರ್ಲೆಂಡ್ಸ್ ಪಡೆ ಯಶಸ್ವಿಯಾಗಿದೆ.

ಅತ್ತ ಸ್ಕಾಟ್ಲೆಂಡ್ ತಂಡವನ್ನು ಬಗ್ಗು ಬಡಿಯುವ ಮೂಲಕ ಈ ಬಾರಿ ಇಟಲಿ ತಂಡ ಟಿ20 ವಿಶ್ವಕಪ್ಗೆ ಎಂಟ್ರಿ ಕೊಟ್ಟಿದೆ. ವಿಶೇಷ ಎಂದರೆ ಕಳೆದ ಬಾರಿ ಸ್ಕಾಟ್ಲೆಂಡ್ ಟಿ20 ವಿಶ್ವಕಪ್ ಆಡಿತ್ತು. ಆದರೆ ಈ ಬಾರಿ ಸ್ಕಾಟಿಷ್ ಪಡೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಯುರೋಪ್ನಿಂದ ಇಟಲಿ ತಂಡ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.

ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಯುಎಸ್ಎ, ಕೆನಡಾ, ನೆದರ್ಲೆಂಡ್ಸ್, ಇಟಲಿ, ನಮೀಬಿಯಾ, ಝಿಂಬಾಬ್ವೆ, ನೇಪಾಳ, ಒಮಾನ್. ಇನ್ನೂ ಒಂದು ತಂಡಕ್ಕೆ ಅವಕಾಶವಿದ್ದು, ಇದಕ್ಕಾಗಿ ಏಷ್ಯಾ/ಪೂರ್ವ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ತಂಡಗಳ ವಿಭಾಗದಲ್ಲಿ ಯುಎಇ, ಖತರ್ ಹಾಗೂ ಜಪಾನ್ ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.