ಯಾರಿಂದಲೂ ಸಹ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಜೇಕಬ್ ಬೆಥೆಲ್

Updated on: Mar 06, 2026 | 8:41 AM

Jacob Bethell World Record: ಭಾರತದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್​ನ ಯುವ ಎಡಗೈ ದಾಂಡಿಗ ಜೇಕಬ್ ಬೆಥೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ 48 ಎಸೆತಗಳನ್ನು ಎದುರಿಸಿದ್ದ ಬೆಥೆಲ್ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 105 ರನ್ ಬಾರಿಸಿದ್ದರು.

1 / 6
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ ನಡೆದ ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಯುವ ದಾಂಡಿಗ ಜೇಕಬ್ ಬೆಥೆಲ್ (Jacob bethell) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಬೆಥೆಲ್ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಸಹ ಮಾಡದ ವಿಶೇಷ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

2 / 6
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೇಕಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಬೆಥೆಲ್ ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.

3 / 6
ಈ ಶತಕದೊಂದಿಗೆ ಜೇಕಬ್ ಬೆಥೆಲ್ ಕ್ರಿಕೆಟ್ ಇತಿಹಾಸದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಮೂಲಕ ಮೂರು ಸ್ವರೂಪಗಳಲ್ಲೂ ಸೆಂಚುರಿ ಖಾತೆ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಂದರೆ ಬೆಥೆಲ್ ದೇಶೀಯ ಅಂಗಳದಲ್ಲಿ ಶತಕ ಬಾರಿಸುವ ಮುನ್ನವೇ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಸೆಂಚುರಿ ಸಿಡಿಸಿದ್ದಾರೆ.

4 / 6
2025 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಜೇಕಬ್ ಬೆಥೆಲ್ ಶತಕದ ಖಾತೆ ತೆರೆದಿದ್ದರು.  ಆದರೆ ಅವರು ಇದಕ್ಕೂ ಮುನ್ನ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಒಂದೇ ಒಂದು ಶತಕ ಬಾರಿಸಿರಲಿಲ್ಲ ಎಂಬುದು ವಿಶೇಷ. ಅಂದರೆ ದೇಶೀಯ ಅಂಗಳದ ಏಕದಿನ ಪಂದ್ಯದಲ್ಲಿ ಮೊದಲ ಶತಕ ಗಳಿಸುವ ಮುನ್ನವೇ ಅವರು ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಚೊಚ್ಚಲ ಒಡಿಐ ಸೆಂಚುರಿ ಸಿಡಿಸಿದ್ದರು.

5 / 6
ಇದಾದ ಬಳಿಕ ಜೇಕಬ್ ಬೆಥೆಲ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಶತಕದ ಖಾತೆ ತೆರೆದಿದ್ದರು. ಇದು ಅವರ ಚೊಚ್ಚಲ ಫಸ್ಟ್ ಕ್ಲಾಸ್ ಶತಕ ಎಂಬುದು ವಿಶೇಷ. ಅಂದರೆ ದೇಶೀಯ ಟೆಸ್ಟ್ ಟೂರ್ನಿಯಲ್ಲಿ ಶತಕ ಬಾರಿಸುವ ಮುನ್ನವೇ ಬೆಥೆಲ್ ಅಂತಾರಾಷ್ಟ್ರೀಯ ಟೆಸ್ಟ್​ನಲ್ಲಿ ಸೆಂಚುರಿ ಸಿಡಿಸಿದ್ದರು.

6 / 6
ಇದೀಗ ಟೀಮ್ ಇಂಡಿಯಾ ವಿರುದ್ಧ ಟಿ20 ಸೆಂಚುರಿ ಸಿಡಿಸಿದ್ದಾರೆ. ಇದಕ್ಕೂ ಮುನ್ನ ಬೆಥೆಲ್ ಇಂಗ್ಲೆಂಡ್​ನ ದೇಶೀಯ ಟಿ20 ಟೂರ್ನಿಯಲ್ಲಿ ಒಂದೇ ಒಂದು ಟಿ20 ಸೆಂಚುರಿ ಬಾರಿಸಿರಲಿಲ್ಲ ಎಂಬುದು ವಿಶೇಷ. ಈ ಮೂಲಕ ಇಂಟರ್​ನ್ಯಾಷನಲ್ ಕ್ರಿಕೆಟ್​ ಮೂಲಕ ಮೂರು ಸ್ವರೂಪಗಳಲ್ಲೂ ಶತಕದ ಖಾತೆ ತೆರೆದ ವಿಶ್ವದ ಮೊದಲ ಬ್ಯಾಟರ್​ ಎಂಬ ವಿಶ್ವ ದಾಖಲೆಯನ್ನು ಜೇಕಬ್ ಬೆಥೆಲ್ ತಮ್ಮದಾಗಿಸಿಕೊಂಡಿದ್ದಾರೆ.

Follow Us