ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ಜಸ್​ಪ್ರೀತ್ ಬುಮ್ರಾಗೆ ದಾಖಲೆಯ ರೇಟಿಂಗ್

|

Updated on: Dec 26, 2024 | 9:08 AM

ICC Test Rankings: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳಿಂದ 21 ವಿಕೆಟ್ ಕಬಳಿಸಿರುವ ಜಸ್​ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲರ್​​ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅದು ಕೂಡ ರವಿಚಂದ್ರನ್ ಅಶ್ವಿನ್ ಅವರ ಸರ್ವಶ್ರೇಷ್ಠ ಸಾಧನೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

1 / 5
ಐಸಿಸಿ ಟೆಸ್ಟ್ ಬೌಲರ್​​ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ. ಅದು ಕೂಡ 904 ಅಂಕಗಳನ್ನು ಪಡೆಯುವ ಮೂಲಕ ಎಂಬುದೇ ವಿಶೇಷ.

2 / 5
ಈ ಮೂಲಕ ಐಸಿಸಿ ರ‍್ಯಾಂಕಿಂಗ್​ ಇತಿಹಾಸದಲ್ಲಿ 900+ ಅಂಕಗಳನ್ನು ಪಡೆದ ಭಾರತದ 2ನೇ ಬೌಲರ್ ಎಂಬ ದಾಖಲೆಯನ್ನು ಜಸ್​ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ. ಅದು ಸಹ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಸರ್ವಶ್ರೇಷ್ಠ ರೇಟಿಂಗ್ ಸಾಧನೆಯನ್ನು ಸರಿಗಟ್ಟುವ ಮೂಲಕ ಈ ಸಾಧನೆ ಮೆರೆದಿದ್ದಾರೆ.

3 / 5
2016 ರಲ್ಲಿ ರವಿಚಂದ್ರನ್ ಅಶ್ವಿನ್ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಬರೋಬ್ಬರಿ 904 ಅಂಕಗಳನ್ನು ಕಲೆಹಾಕಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಬುಮ್ರಾ ಸರಿಗಟ್ಟಿದ್ದಾರೆ.

4 / 5
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿರುವ ಜಸ್​ಪ್ರೀತ್ ಬುಮ್ರಾ ಇದೀಗ ಐಸಿಸಿ ಟೆಸ್ಟ್ ಬೌಲರ್​​ ರ‍್ಯಾಂಕಿಂಗ್​ನಲ್ಲಿ  904 ರೇಟಿಂಗ್ ಪಡೆದಿದ್ದು, ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಇನ್ನೊಂದು ಅಂಕ ಪಡೆದರೆ ಟೆಸ್ಟ್​ನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ.

5 / 5
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಬೌಲರ್ ದಾಖಲೆ ಇಂಗ್ಲೆಂಡ್ ಬೌಲರ್​ ಸಿಡ್ನಿ ಬಾರ್ನ್ಸ್ ಹೆಸರಿನಲ್ಲಿದೆ. 1914 ರಲ್ಲಿ 932 ರೇಟಿಂಗ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ದಾಖಲೆಯನ್ನು ಮುರಿಯಲು ಜಸ್​ಪ್ರೀತ್ ಬುಮ್ರಾಗೆ ಉತ್ತಮ ಅವಕಾಶವಿದ್ದು, ಅದಕ್ಕಾಗಿ ಮುಂಬರುವ ಟೆಸ್ಟ್ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಬೇಕಿದೆ.