ಜಸ್​ಪ್ರೀತ್ ಬುಮ್ರಾಗೆ ಒಲಿದ ತಿಂಗಳ ಆಟಗಾರನ ಪ್ರಶಸ್ತಿ

| Updated By: ಝಾಹಿರ್ ಯೂಸುಫ್

Updated on: Jan 15, 2025 | 7:03 AM

ICC Player of the Month: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರತಿ ತಿಂಗಳು ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯನ್ನು ನೀಡುತ್ತದೆ. ಈ ಬಾರಿ ಈ ಪ್ರಶಸ್ತಿ ಪಟ್ಟಿಯಲ್ಲಿ ಮೂವರು ವೇಗಿಗಳು ಕಾಣಿಸಿಕೊಂಡಿದ್ದರು. ಇದೀಗ ಎಲ್ಲರನ್ನು ಹಿಂದಿಕ್ಕಿ ಪ್ಲೇಯರ್ ಆಫ್ ದಿ ಮಂತ್​ ಆಗಿ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬಮ್ರಾ ಹೊರಹೊಮ್ಮಿದ್ದಾರೆ.

1 / 5
ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಡಿಸೆಂಬರ್ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಐಸಿಸಿ ಪ್ರತಿ ತಿಂಗಳು ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗಾಗಿ ಆಟಗಾರರನ್ನು ಆಯ್ಕೆ ಮಾಡುತ್ತಿದ್ದು, ಅದರಂತೆ ಕಳೆದ ತಿಂಗಳ ಅತ್ಯುತ್ತಮ ಆಟಗಾರನ ಪ್ರಶಸ್ತಿ ಜಸ್​ಪ್ರೀತ್ ಬುಮ್ರಾಗೆ ಒಲಿದಿದೆ. ಈ ಬಾರಿಯ ಪ್ರಶಸ್ತಿ ಸುತ್ತಲಿನಲ್ಲಿ ಮೂವರು ಆಟಗಾರರ ಹೆಸರು ನಾಮನಿರ್ದೇಶನಗೊಂಡಿತ್ತು. ಅವರೆಂದರೆ....

2 / 5
ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್​ ಡಿಸೆಂಬರ್ ತಿಂಗಳಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಿದ್ದರು. ಈ ವೇಳೆ ಬ್ಯಾಟಿಂಗ್​ ಮೂಲಕ 144 ರನ್​ ಬಾರಿಸಿದರೆ, ಬೌಲಿಂಗ್​ನಲ್ಲಿ 17 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೀಗಾಗಿ ಕಳೆದ ತಿಂಗಳ ಆಟಗಾರರ ಪಟ್ಟಿಯಲ್ಲಿ ಕಮಿನ್ಸ್ ನಾಮನಿರ್ದೇಶಿತರಾಗಿದ್ದರು.

3 / 5
ಡೇನ್ ಪ್ಯಾಟರ್ಸನ್: ಸೌತ್ ಆಫ್ರಿಕಾ ವೇಗಿ ಡೇನ್ ಪ್ಯಾಟರ್ಸನ್ ಡಿಸೆಂಬರ್​ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ್ ವಿರುದ್ಧ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 13 ವಿಕೆಟ್​ ಕಬಳಿಸುವ ಮೂಲಕ ಸೌತ್ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಡೇನ್ ಪ್ಯಾಟರ್ಸನ್ ಕೂಡ ಐಸಿಸಿ ಡಿಸೆಂಬರ್ ತಿಂಗಳ ಆಟಗಾರರನಾಗಿ ನಾಮನಿರ್ದೇಶಿತರಾಗಿದ್ದರು.

4 / 5
ಜಸ್​​ಪ್ರೀತ್ ಬುಮ್ರಾ: ಡಿಸೆಂಬರ್ ತಿಂಗಳಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಿದ್ದ ಜಸ್​ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ಅಡಿಲೇಡ್​ನಲ್ಲಿ 61ಕ್ಕೆ 4, ಬ್ರಿಸ್ಬೇನ್‌ನಲ್ಲಿ 76ಕ್ಕೆ 6, ಮತ್ತು ಮೆಲ್ಬೋರ್ನ್‌ನಲ್ಲಿ 9 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಡಿಸೆಂಬರ್ ತಿಂಗಳ ಅಟಗಾರರ ಪಟ್ಟಿಗೆ ನಾಮನಿರ್ದೇನಗೊಂಡಿದ್ದರು.

5 / 5
ಇದೀಗ ಪ್ಯಾಟ್ ಕಮಿನ್ಸ್ ಹಾಗೂ ಡೇನ್ ಪ್ಯಾಟರ್ಸನ್ ಅವರನ್ನು ಹಿಂದಿಕ್ಕಿ ಜಸ್ ಪ್ರೀತ್  ಬುಮ್ರಾ ಡಿಸೆಂಬರ್ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದರ ಜೊತೆ 2024 ರ ಐಸಿಸಿ ಪ್ಲೇಯರ್ ಆಫ್ ದಿ ಇಯರ್ ಪಟ್ಟಿಯಲ್ಲೂ ಬುಮ್ರಾ ಹೆಸರಿದ್ದು, ಈ ಪ್ರಶಸ್ತಿ ಕೂಡ ಟೀಮ್ ಇಂಡಿಯಾ ವೇಗಿಗೆ ಒಲಿಯುವ ನಿರೀಕ್ಷೆ ಇದೆ.

Published On - 7:03 am, Wed, 15 January 25