Jasprit Bumrah: ಮೈದಾನಕ್ಕಿಳಿಯುತ್ತಿದ್ದಂತೆ ವಿಶೇಷ ದಾಖಲೆ ಬರೆದ ಜಸ್​ಪ್ರೀತ್ ಬುಮ್ರಾ

| Updated By: ಝಾಹಿರ್ ಯೂಸುಫ್

Updated on: Sep 19, 2021 | 9:24 PM

Mumbai Indians: ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಕೀರನ್ ಪೊಲಾರ್ಡ್​ ಕೂಡ ಐಪಿಎಲ್​ನಲ್ಲಿ ಒಂದೇ ತಂಡದ ಪರ 100 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ.

1 / 6
ಐಪಿಎಲ್​ನ ದ್ವಿತಿಯಾರ್ಧದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್​ ವೇಗಿ ಜಸ್​ಪ್ರೀತ್ ಬುಮ್ರಾ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

2 / 6
 ಹೌದು,  ಐಪಿಎಲ್ 2021 ರ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಬುಮ್ರಾ ಮುಂಬೈ ಇಂಡಿಯನ್ಸ್  ಪರ 100 ಪಂದ್ಯವಾಡಿದ ವಿಶೇಷ ದಾಖಲೆ ಬರೆದರು. ಅದರಲ್ಲೂ ಐಪಿಎಲ್​ನಲ್ಲಿ ಒಂದೇ ತಂಡದ ಪರ 100 ಪಂದ್ಯವಾಡಿದ ಆಟಗಾರರ ಪಟ್ಟಿಗೆ ಬುಮ್ರಾ ಸೇರ್ಪಡೆಯಾದರು. 2013 ರಿಂದ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಕಾಣಿಸಿಕೊಂಡಿರುವ ಬುಮ್ರಾ ಕಳೆದ 8 ಸೀಸನ್​ಗಳಿಂದ ತಂಡದ ಖಾಯಂ ಸದಸ್ಯರಾಗಿದ್ದಾರೆ. ಇನ್ನು ಬುಮ್ರಾ ಅಲ್ಲದೆ ಇನ್ನು ನಾಲ್ವರು ಆಟಗಾರರು ಒಂದು ತಂಡದ ಪರ ಮಾತ್ರ 100 ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ. ಅವರೆಂದರೆ...

3 / 6
ವಿರಾಟ್​ ಕೊಹ್ಲಿ: ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ 2008 ರಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಆರ್​ಸಿಬಿ ಪರ ಇದುವರೆಗೆ 199 ಪಂದ್ಯಗಳನ್ನು ಆಡಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

4 / 6
 ಕೀರನ್ ಪೊಲಾರ್ಡ್: ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಕೀರನ್ ಪೊಲಾರ್ಡ್​ ಕೂಡ ಐಪಿಎಲ್​ನಲ್ಲಿ ಒಂದೇ ತಂಡದ ಪರ 100 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ. 2010 ರಿಂದ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಪೊಲಾರ್ಡ್​ ಇದುವರೆಗೆ 172 ಪಂದ್ಯಗಳನ್ನಾಡಿದ್ದಾರೆ.

5 / 6
ಸುನೀಲ್ ನರೇನ್: ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಸುನೀಲ್ ನರೇನ್ 2012 ರಿಂದ ಕೆಕೆಆರ್ ಪರ ಆಡುತ್ತಿದ್ದಾರೆ. ಕೆಕೆಆರ್​ ಪರ ಇದುವರೆಗೆ 124 ಪಂದ್ಯಗಳನ್ನು ಆಡುವ ಮೂಲಕ ಒಂದೇ ತಂಡದ ಪರ 100 ಪಂದ್ಯಗಳನ್ನಾಡಿದ ದಾಖಲೆ ನಿರ್ಮಿಸಿದ್ದಾರೆ.

6 / 6
ಲಸಿತ್ ಮಾಲಿಂಗ: ಮುಂಬೈ ಇಂಡಿಯನ್ಸ್​ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ ಕೂಡ ಐಪಿಎಲ್ ನಲ್ಲಿ ಒಂದೇ ತಂಡ ಪರ 100 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆ ಹೊಂದಿದ್ದಾರೆ. 2009 ರಿಂದ 2019 ರವರೆಗೆ ಮುಂಬೈ ಪರ ಕಣಕ್ಕಿಳಿದಿರುವ ಮಾಲಿಂಗ ಒಟ್ಟು 122 ಪಂದ್ಯಗಳನ್ನು ಆಡಿದ್ದಾರೆ.