IPL 2022 Final: ನೂತನ ದಾಖಲೆಯ ಹೊಸ್ತಿಲಲ್ಲಿ ಬಟ್ಲರ್: ಬೇಕಿರುವುದು ಕೇವಲ 5 ಸಿಕ್ಸರ್
Jos Buttler, GT vs RR: ಈ ಋತುವಿನಲ್ಲಿ ಈಗಾಗಲೇ 800 ಕ್ಕೂ ಹೆಚ್ಚು ರನ್ ಗಳಿಸಿರುವ ಬಟ್ಲರ್, ಮೇ 29 ರ ಭಾನುವಾರದಂದು ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ನಲ್ಲಿ ತಮ್ಮ ಸಿಕ್ಸರ್ ಗಳ ಅರ್ಧಶತಕವನ್ನು ಪೂರ್ಣಗೊಳಿಸಲು ತುದಿ ಗಾಲಿನಲ್ಲಿ ನಿಂತಿದ್ದಾರೆ.
1 / 5
IPL 2022 ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಮರಣೀಯ ಸೀಸನ್ ಆಗಿದೆ. 14 ವರ್ಷಗಳ ಬಳಿಕ ಫೈನಲ್ ತಲುಪಿದ ಸಾಧನೆ ಮಾಡಿದೆ. ರಾಜಸ್ಥಾನ ಇಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಆರಂಭಿಕ ಆಟಗಾರ ಜೋಸ್ ಬಟ್ಲರ್. ಈ ಆವೃತ್ತಿಯಲ್ಲಿ ಈಗಾಗಲೇ ನಾಲ್ಕು ಶತಕಗಳನ್ನು ಬಾರಿಸಿ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಸರಿದೂಗಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಬಟ್ಲರ್ ಶತಕ ಬಾರಿಸಿದರೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ.
2 / 5
ಈ ಋತುವಿನಲ್ಲಿ ಈಗಾಗಲೇ 800 ಕ್ಕೂ ಹೆಚ್ಚು ರನ್ ಗಳಿಸಿರುವ ಬಟ್ಲರ್, ಮೇ 29 ರ ಭಾನುವಾರದಂದು ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ನಲ್ಲಿ ತಮ್ಮ ಸಿಕ್ಸರ್ ಗಳ ಅರ್ಧಶತಕವನ್ನು ಪೂರ್ಣಗೊಳಿಸಲು ತುದಿ ಗಾಲಿನಲ್ಲಿ ನಿಂತಿದ್ದಾರೆ.
3 / 5
ಜೋಸ್ ಬಟ್ಲರ್ ಐಪಿಎಲ್ 2022 ರಲ್ಲಿ ಇದುವರೆಗೆ 16 ಇನ್ನಿಂಗ್ಸ್ ಗಳಲ್ಲಿ 45 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿನ ಅವರ ಪ್ರದರ್ಶನವನ್ನು ನೋಡಿದರೆ, ಅವರು 50 ಸಿಕ್ಸರ್ ಗಳನ್ನು ಪೂರೈಸುತ್ತಾರೆ ಎಂದೇ ಹೇಳಬಹುದು. 5 ಸಿಕ್ಸರ್ ಬಾರಿಸಿದರೆ ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ.
4 / 5
ವೆಸ್ಟ್ ಇಂಡೀಸ್ ಸೂಪರ್ ಸ್ಟಾರ್ ಕ್ರಿಸ್ ಗೇಲ್ ಐಪಿಎಲ್ ಸೀಸನ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ. 2012ರಲ್ಲಿ 59 ಸಿಕ್ಸರ್ಗಳನ್ನು ಬಾರಿಸಿದ್ದರು. ಗೇಲ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. 2013ರಲ್ಲಿ 51 ಸಿಕ್ಸರ್ಗಳನ್ನೂ ಬಾರಿಸಿದ್ದರು.
5 / 5
ಗೇಲ್ ಹೊರತುಪಡಿಸಿದರೆ ವೆಸ್ಟ್ ಇಂಡೀಸ್ ನ ಆಂಡ್ರೆ ರಸೆಲ್ ಕೂಡ 2019 ರಲ್ಲಿ 52 ಸಿಕ್ಸರ್ ಬಾರಿಸಿದ್ದಾರೆ.
Published On - 10:24 am, Sun, 29 May 22