- Kannada News Photo gallery Cricket photos Josh hazlewood no 1 in t20i rankings imam ul haq surpass virat kohli icc odi ranking
ICC Rankings: ಕೊಹ್ಲಿಯನ್ನು ಹಿಂದಿಕ್ಕಿದ ಪಾಕ್ ಕ್ರಿಕೆಟಿಗ! ಆಲ್ರೌಂಡರ್ ಕೋಟಾದಲ್ಲಿ ಜಡೇಜಾ ನಂ.1
ICC Rankings: ಐಸಿಸಿ ಶ್ರೇಯಾಂಕಗಳನ್ನು ಪ್ರಕಟಿಸಲಾಗಿದ್ದು, ಜೋ ರೂಟ್ ಟೆಸ್ಟ್ನಲ್ಲಿ ನಂ.1 ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಮತ್ತೊಂದೆಡೆ ಏಕದಿನದಲ್ಲಿ ಪಾಕ್ ಬ್ಯಾಟ್ಸ್ಮನ್ಗಳ ಪ್ರಾಬಲ್ಯ ಮೆರೆದಿದ್ದು, ವಿರಾಟ್ ಕೊಹ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
Updated on:Jun 15, 2022 | 2:53 PM

ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ದೀರ್ಘ ಕಾಲದಿಂದ ಕಳಪೆ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಏಕದಿನ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದೇ ಸಮಯದಲ್ಲಿ, ಪಾಕಿಸ್ತಾನದ ಆರಂಭಿಕ ಇಮಾಮ್-ಉಲ್-ಹಕ್ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಏಕದಿನ ರ್ಯಾಂಕಿಂಗ್ನಲ್ಲಿ ಬಾಬರ್ ಅಜಮ್ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಮಿಂಚುತ್ತಿದೆ.

ಜೋಶ್ ಹ್ಯಾಜಲ್ವುಡ್ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ಬೌಲರ್ ಎನಿಸಿಕೊಂಡಿದ್ದಾರೆ. ಈ ಬೌಲರ್ 792 ರೇಟಿಂಗ್ ಪಾಯಿಂಟ್ಗಳೊಂದಿಗೆ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಹೇಜಲ್ವುಡ್ ODIಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಟ್ರೆಂಟ್ ಬೌಲ್ಟ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ, ಬಾಬರ್ ಅಜಮ್ ಬ್ಯಾಟಿಂಗ್ನ ಟಿ 20 ರ್ಯಾಂಕಿಂಗ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಟೆಸ್ಟ್ ಶ್ರೇಯಾಂಕದ ಬಗ್ಗೆ ಮಾತನಾಡುವುದಾದರೆ, ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ನಂಬರ್ 1 ಸ್ಥಾನವನ್ನು ತಲುಪಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ಗಳಲ್ಲಿ ಎರಡು ಶತಕಗಳನ್ನು ಗಳಿಸಿದ ರೂಟ್, ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಹಿಂದಿಕ್ಕಿದರು.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೋ ರೂಟ್ 4 ಇನ್ನಿಂಗ್ಸ್ಗಳಲ್ಲಿ 101 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 305 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರು 10 ಸಾವಿರ ಟೆಸ್ಟ್ ರನ್ಗಳನ್ನು ಪೂರ್ಣಗೊಳಿಸಿದ್ದು ಹೆಚ್ಚು ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ರವೀಂದ್ರ ಜಡೇಜಾ ಟೆಸ್ಟ್ನಲ್ಲಿ ನಂಬರ್ 1 ಆಲ್ರೌಂಡರ್ ಆಗಿ ಉಳಿದಿದ್ದಾರೆ. ಶಕೀಬ್ ಅಲ್ ಹಸನ್ ಏಕದಿನ ಮಾದರಿಯಲ್ಲಿ ನಂ. 1 ಆಗಿದ್ದರೆ ಮೊಹಮ್ಮದ್ ನಬಿ ವಿಶ್ವದ ನಂ. 1 T20 ಆಲ್ ರೌಂಡರ್ ಆಗಿ ಉಳಿದಿದ್ದಾರೆ.
Published On - 2:22 pm, Wed, 15 June 22




