2022ರ ಟಿ20 ವಿಶ್ವಕಪ್‌ನಲ್ಲಿ ಆಟಗಾರರ ಇಂಜುರಿ ಸರಣಿ ಮುಂದುವರಿದಿದೆ. ಬುಧವಾರ ಒಂದೇ ದಿನ ವಿವಿದ ತಂಡಗಳ 4 ಆಟಗಾರರು ಇಂಜುರಿಯಿಂದ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಇದೀಗ ಮತ್ತೊಬ್ಬ ಆಟಗಾರ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿಯಬೇಕಾಗಿದೆ.

ಟಿ20 ವಿಶ್ವಕಪ್ಗೆ ಆತಿಥ್ಯವಹಿಸಿರುವ ಆಸ್ಟ್ರೇಲಿಯ ತಂಡಕ್ಕೆ ಈ ಬಾರಿ ಆಘಾತ ಎದುರಾಗಿದ್ದು, ತಂಡದ ಸ್ಫೋಟಕ ಆರಂಭಿಕ ಆಟಗಾರ ಜೋಶ್ ಇಂಗ್ಲಿಸ್ ಇಂಜುರಿಗೊಂಡು ಟಿ20 ಸರಣಿಯಿಂದ ಹೊರನಡೆದಿದ್ದಾರೆ. ಜೋಶ್ ಇಂಗ್ಲಿಸ್ ಗಾಲ್ಫ್ ಆಡುವಾಗ ತನ್ನ ಕೈಗೆ ಗಾಯಮಾಡಿಕೊಂಡಿದ್ದು, ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿತ್ತು. ಆದರೆ ಇದೀಗ ಟೂರ್ನಿಯಿಂದಲೇ ಅವರು ಹೊರಬಿದ್ದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಆಸ್ಟ್ರೇಲಿಯ ಜೊತೆ ಶ್ರೀಲಂಕಾ ತಂಡ ಕೂಡ ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದು, ಬುಧವಾರ ಒಂದೇ ದಿನ ತಂಡದ ಇಬ್ಬರು ಆಟಗಾರರು ಇಂಜುರಿಯಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರನಡೆದಿದ್ದಾರೆ. ತಂಡದ ಸ್ಟಾರ್ ಬೌಲರ್ ದುಷ್ಮಂತ ಚಮೀರ ಮತ್ತು ಸ್ಫೋಟಕ ಬ್ಯಾಟರ್ ಧನುಷ್ಕಾ ಗುಣತಿಲ್ಕ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.

ಇಂಗ್ಲೆಂಡ್ ತಂಡದ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿ ಕೂಡ ಇಂಜುರಿಯಿಂದ ಈ ಬಾರಿಯ ಟಿ20 ವಿಶ್ವಕಪ್ಗೆ ಅಲಭ್ಯರಾಗಿದ್ದಾರೆ. ಅವರ ಬದಲಿಯಾಗಿ ಟಿಮಲ್ ಮಿಲ್ಸ್ ಆಂಗ್ಲ ತಂಡಕ್ಕೆ ಸೇರಿಕೊಂಡಿದ್ದಾರೆ.