
ಇಂದು ದೇಶದೆಲ್ಲೆಡೆ ರಾಖಿ ಹಬ್ಬ ಅಥವಾ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಹೋದರ-ಸಹೋದರಿಯರ ನಡುವಿನ ಬಾಂಧವ್ಯದ ಸಂಕೇತವಾಗಿರುವ ಈ ಹಬ್ಬದಂದು ಅಣ್ಣ ಅಥವಾ ತಮ್ಮನ ಕೈಗೆ ರಾಖಿ ಕಟ್ಟಿ ಸಂಭ್ರಮಿಸುವುದು ವಾಡಿಕೆ. ಬಾಂಧವ್ಯದ ಸಂಕೇತವಾಗಿರುವ ಈ ಹಬ್ಬದ ಆಚರಣೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ಹಿಂದೆ ಬಿದ್ದಿಲ್ಲ.

ಭಾರತ ತಂಡದ ಸ್ಟಾರ್ ಆಟಗಾರರು ತಮ್ಮ ಅಕ್ಕ-ತಂಗಿಯರಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ರಕ್ಷಾ ಬಂಧನದಂದು ಸಂಭ್ರಮಿಸಿದ್ದಾರೆ. ಹೀಗೆ ರಾಖಿ ಹಬ್ಬ ಆಚರಿಸಿದ ಕೆಲ ಕ್ರಿಕೆಟಿಗರ ಫೋಟೋಸ್ ಇಲ್ಲಿದೆ.

ಸಚಿನ್ ತೆಂಡೂಲ್ಕರ್- ಎಂದಿನಂತೆ ಈ ಬಾರಿ ಕೂಡ ಸಚಿನ್ ತೆಂಡೂಲ್ಕರ್ ತಮ್ಮ ತಂಗಿ ಅಪೂರ್ಣ ಅವರಿಂದ ರಾಖಿ ಕಟ್ಟಿಸಿಕೊಂಡು ರಕ್ಷಾ ಬಂಧನದ ಮಹತ್ವ ಸಾರಿದ್ದಾರೆ.

ವಿರಾಟ್ ಕೊಹ್ಲಿ- ಅಕ್ಕ ಭಾವನಾ ಅವರೊಂದಿಗೆ ವಿರಾಟ್ ಕೊಹ್ಲಿ ರಾಖಿ ಹಬ್ಬ ಆಚರಿಸಿದರು.

ಕೆಎಲ್ ರಾಹುಲ್- ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೂಡ ಅಕ್ಕ ಭಾವನಾ ಜೊತೆ ರಕ್ಷಾಬಂಧನ ಆಚರಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ರಕ್ಷಾಬಂಧನ ಸಂಭ್ರಮ

ಸಹೋದರಿ ಜೊತೆ ರಾಖಿ ಹಬ್ಬ ಆಚರಿಸಿಕೊಂಡ ಸೂರ್ಯಕುಮಾರ್ ಯಾದವ್

ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಅವರ ರಾಖಿ ಹಬ್ಬದ ಸಂಭ್ರಮ

ಸಹೋದರಿ ಕೈಯಿಂದ ರಾಖಿ ಕಟ್ಟಿಸಿಕೊಂಡ ದೀಪಕ್ ಚಹರ್

ಸೆಹ್ವಾಗ್ಗೆ ರಾಖಿ ಕಟ್ಟಿದ ಸಹೋದರಿ

ಸಹೋದರಿಯರ ಜೊತೆ ರವೀಂದ್ರ ಜಡೇಜಾರ ರಾಖಿ ಸಂಭ್ರಮ

ಸಹೋದರಿ ಕೈಯಿಂದ ರಾಖಿ ಕಟ್ಟಿಸಿಕೊಂಡ ಶ್ರೇಯಸ್ ಅಯ್ಯರ್