Updated on:Aug 11, 2022 | 6:23 PM
ಸೌತ್ ಆಫ್ರಿಕಾದಲ್ಲಿ ನಡೆಯಲಿರುವ ಸಿಎಸ್ಎ ಟಿ20 ಲೀಗ್ (CSA T20 League) ಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಐದು ಆಟಗಾರರನ್ನು ಫೈನಲ್ ಮಾಡಿದೆ. ಎಂಐ ಕೇಪ್ಟೌನ್ ಹೆಸರಿನಲ್ಲಿರುವ ಕಣಕ್ಕಿಳಿಯಲಿರುವ ಈ ತಂಡದಲ್ಲಿ ಸೌತ್ ಆಫ್ರಿಕಾದ ಇಬ್ಬರು ಆಟಗಾರರು ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಮೂವರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
CSA T20 ಲೀಗ್‌ನಲ್ಲಿ ಹರಾಜಿಗೂ ಮುನ್ನ ಪ್ರತಿ ತಂಡವು ಗರಿಷ್ಠ ಐದು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲಾಗುತ್ತದೆ. ಇಲ್ಲಿ ಪ್ರತಿ ತಂಡವು 10 ದಕ್ಷಿಣ ಆಫ್ರಿಕಾ ಮತ್ತು 7 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗೆಯೇ ಪ್ಲೇಯಿಂಗ್ 11 ನಲ್ಲಿ 7 ದಕ್ಷಿಣ ಆಫ್ರಿಕಾದ ಆಟಗಾರರು ಮತ್ತು 4 ವಿದೇಶಿ ಆಟಗಾರರಿಗೆ ಅವಕಾಶ ಇರಲಿದೆ.
ಇದೀಗ ಮಾರ್ಕ್ಯೂ ಲೀಸ್ಟ್ ಆಯ್ಕೆಯ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಕೇಪ್ಟೌನ್ ತಂಡವು ಐವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಈ ಆಟಗಾರರ ಪಟ್ಟಿ ಹೀಗಿದೆ...
ಕಗಿಸೋ ರಬಾಡ (ಸೌತ್ ಆಫ್ರಿಕಾ)
ಡೆವಾಲ್ಡ್ ಬ್ರೇವಿಸ್ (ಸೌತ್ ಆಫ್ರಿಕಾ)
ರಶೀದ್ ಖಾನ್ (ಅಫ್ಘಾನಿಸ್ತಾನ್)
ಸ್ಯಾಮ್ ಕರನ್ (ಇಂಗ್ಲೆಂಡ್)
ಲಿಯಾಮ್ ಲಿವಿಂಗ್ಸ್ಟೋನ್ (ಇಂಗ್ಲೆಂಡ್)
ಈ ಹೊಸ ಲೀಗ್‌ನಲ್ಲಿ ಒಟ್ಟು 6 ತಂಡಗಳಿದ್ದು, ಈ ಎಲ್ಲಾ ತಂಡಗಳನ್ನು ಐಪಿಎಲ್ನಲ್ಲಿ ತಂಡಗಳ ಮಾಲೀಕತ್ವವನ್ನು ಹೊಂದಿರುವ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ. ಅದರಂತೆ ಕೇಪ್ ಟೌನ್ ತಂಡವನ್ನು ಮುಂಬೈ ಇಂಡಿಯನ್ಸ್ ಖರೀದಿಸಿದರೆ , ಜೋಹಾನ್ಸ್ ಬರ್ಗ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದೆ. ಇನ್ನು ಡರ್ಬನ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ಒಡೆತನದಲ್ಲಿದ್ದರೆ, ಪೋರ್ಟ್ ಎಲಿಜಬೆತ್ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಹಾಗೆಯೇ ಪ್ರಿಟೋರಿಯಾ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರೆ, ಪರ್ಲ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖರೀದಿಸಿದೆ. ಹೀಗಾಗಿಯೇ ಸೌತ್ ಆಫ್ರಿಕಾ ಟಿ20 ಲೀಗ್ ಅನ್ನು ಮಿನಿ ಐಪಿಎಲ್ ಎಂದೇ ವರ್ಣಿಸಲಾಗುತ್ತಿದೆ.
ಇದೀಗ ಹೊಸ ಟಿ20 ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಐವರು ಸ್ಟಾರ್ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
Published On - 6:23 pm, Thu, 11 August 22