Kavya Maran: ಟ್ರೋಫಿ ಕನಸಿನೊಂದಿಗೆ ಬಂದು ಕಣ್ಣೀರಲ್ಲೇ ಕಳೆದ ಕಾವ್ಯ ಮಾರನ್

| Updated By: ಝಾಹಿರ್ ಯೂಸುಫ್

Updated on: May 27, 2024 | 12:07 PM

Kavya Maran: ಐಪಿಎಲ್ 2023 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ಸ್​ ಟೇಬಲ್​ನಲ್ಲಿ 10ನೇ ಸ್ಥಾನ ಅಲಂಕರಿಸಿತ್ತು. ಆದರೆ ಈ ಬಾರಿ ಕಾವ್ಯ ಮಾರನ್ ನೇತೃತ್ವದ ಎಸ್​ಆರ್​ಹೆಚ್ ಫ್ರಾಂಚೈಸಿ ಬಲಿಷ್ಠ ಆಟಗಾರರನ್ನು ಖರೀದಿಸಿ ಅತ್ಯುತ್ತಮ ತಂಡವನ್ನು ರೂಪಿಸಿಕೊಂಡಿತ್ತು. ಅದರಂತೆ ಬಲಿಷ್ಠ ಪಡೆಯಾಗಿ ಕಾಣಿಸಿಕೊಂಡ ಎಸ್​ಆರ್​ಹೆಚ್ ತಂಡವು ಫೈನಲ್​ ಪಂದ್ಯದಲ್ಲಿ ಎಡವಿ ಚಾಂಪಿಯನ್ ಪಟ್ಟವನ್ನು ಕೈಚೆಲ್ಲಿಕೊಂಡಿದೆ.

1 / 6
IPL 2024: ಐಪಿಎಲ್ ಸೀಸನ್ 16 ರಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಭರ್ಜರಿ ಪ್ರದರ್ಶನ ನೀಡಿದೆ. ಟೂರ್ನಿಯ ಆರಂಭದಿಂದಲೇ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ದ ಎಸ್​ಆರ್​ಹೆಚ್ ನಿರೀಕ್ಷೆಯಂತೆ ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಫೈನಲ್​ಗೆ ಪ್ರವೇಶಿಸಿತ್ತು.

2 / 6
ಅಲ್ಲದೆ ಫೈನಲ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದರಿಂದ ಬಹುತೇಕರು ಕಪ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದು ಭಾವಿಸಿದ್ದರು. ಇದೇ ವಿಶ್ವಾಸದಲ್ಲಿ ಎಸ್​ಆರ್​ಹೆಚ್ ತಂಡ ಮಾಲಕಿ ಕಾವ್ಯ ಮಾರನ್ ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

3 / 6
ಆದರೆ ಪಂದ್ಯದ ಆರಂಭದಲ್ಲೇ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಮೊದಲ ಓವರ್​ನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡು ಸನ್​ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಸಂಕಷ್ಟದಿಂದ ಪಾರಾಗುವ ಮುನ್ನವೇ ಕೆಕೆಆರ್ ಬೌಲರ್​ಗಳು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅತ್ತ ಫೈನಲ್​ನಲ್ಲಿ ತಮ್ಮ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಿದ್ದ ಕಾವ್ಯ ಮಾರನ್ ಕೂಡ ಹತಾಶಾಭಾವದೊಂದಿಗೆ ಕಾಣಿಸಿಕೊಂಡರು.

4 / 6
ಪಂದ್ಯದ ಆರಂಭದಲ್ಲಿ ಹತಾಶರಾದ ಕಾವ್ಯ ಮಾರನ್​ ಅವರ ನಿರೀಕ್ಷೆಗಳು ಒಂದೊಂದೇ ಓವರ್​ಗಳ ಮುಕ್ತಾಯದೊಂದಿಗೆ ಹುಸಿಯಾಗುತ್ತಿತ್ತು. ಇದಾಗ್ಯೂ ತಮ್ಮ ನೋವನ್ನೆಲ್ಲಾ ಎಸ್​ಆರ್​ಹೆಚ್​ ಮಾಲಕಿ ಅದುಮಿಟ್ಟುಕೊಂಡಿದ್ದರು. ಯಾವಾಗ ಎಸ್​ಆರ್​ಹೆಚ್ ತಂಡ 113 ರನ್​ಗಳಿಗೆ ಆಲೌಟ್ ಆಯಿತೋ, ಆಗಲೇ ಕಾವ್ಯ ಮಾರನ್ ಕೂಡ ಗ್ಯಾಲರಿಯಲ್ಲಿ ಕೂಡ ಮ್ಯಾಚ್ ಮುಗಿದೇ ಹೋಯ್ತು ಎಂಬಂತೆ ಮುಖಭಾವ ಪ್ರದರ್ಶಿಸಿದ್ದರು.

5 / 6
ಇನ್ನು ಎಸ್​ಆರ್​ಹೆಚ್ ನೀಡಿದ 114 ರನ್​ಗಳ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 10.3 ಓವರ್​ಗಳಲ್ಲಿ ಚೇಸ್ ಮಾಡಿತು. ಅಲ್ಲದೆ 8 ವಿಕೆಟ್​ಗಳ ಜಯದೊಂದಿಗೆ ಮೈದಾನದಲ್ಲಿ ಸಂಭ್ರಮಿಸುತ್ತಿದ್ದರೆ, ಅತ್ತ ಕಾವ್ಯ ಮಾರನ್ ಕಣ್ಣೀರು ಹಾಕಲಾರಂಭಿಸಿದರು.

6 / 6
ಆದರೆ ಇತ್ತ ಕ್ಯಾಮೆರಾಮ್ಯಾನ್ ತನ್ನತ್ತ ಕ್ಯಾಮೆರಾ ತಿರುಗಿಸಿದ್ದಾರೆ ಎಂಬುದು ಗೊತ್ತಾಗುತ್ತಿದಂತೆ ಹಿಂತಿರುಗಿ ನಿಂತು ಅಳಲಾರಂಭಿಸಿದರು. ಇದೀಗ ಕಾವ್ಯ ಮಾರನ್ ಅವರ ಭಾವನಾತ್ಮಕ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನೋವಿನ ನಡುವೆಯು ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಗೆ ಎಸ್​ಆರ್​ಹೆಚ್ ಅಭಿಮಾನಿಗಳು ಸಮಾಧಾನ ಮಾಡಿದ್ದು, ಮುಂದಿನ ಸಲ ಇನ್ನೂ ಉತ್ತಮ ತಂಡ ಕಟ್ಟಬೇಕೆಂದು ದೈರ್ಯ ತುಂಬಿದ್ದಾರೆ. ಅಲ್ಲದೆ ಐಪಿಎಲ್ 2025 ರಲ್ಲಿ ಆರೆಂಜ್ ಆರ್ಮಿ ಟ್ರೋಫಿಯೊಂದಿಗೆ ಸಂಭ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.