Kedar Jadhav: ಮುಂದಿನ ಪಂದ್ಯದಲ್ಲಿ ಕೇದರ್ ಜಾಧವ್ ಕಣಕ್ಕೆ: ಅಭ್ಯಾಸದ ವೇಳೆ ಅಬ್ಬರಿಸಿದ ಕಾಮೆಂಟೇಟರ್
DC vs RCB, IPL 2023: ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೇ 6 ರಂದು ಆಡಲಿದೆ. ಇದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಕೇದರ್ ಜಾಧವ್ ಕಣಕ್ಕಿಳಿಯುವ ಸಾಧ್ಯತೆ ಇದೆ.
1 / 7
ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಥಿತಿ ಸುರಕ್ಷಿತವಾಗಿಲ್ಲ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಮತ್ತು ನಾಲ್ಕು ಸೋಲು ಕಂಡು 10 ಅಂಕ ಸಂಪಾದಿಸಿದೆ. -0.030 ರನ್ರೇಟ್ ಹೊಂದಿದೆ. ಹೀಗಾಗಿ ಮುಂಬರುವ ಮ್ಯಾಚ್ಗಳು ಬೆಂಗಳೂರಿಗೆ ಮಹತ್ವದ್ದಾಗಿದೆ.
2 / 7
ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೇ 6 ರಂದು ಆಡಲಿದೆ. ಇದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಕೇದರ್ ಜಾಧವ್ ಕಣಕ್ಕಿಳಿಯುವ ಸಾಧ್ಯತೆ ಇದೆ.
3 / 7
ಗಾಯದ ಕಾರಣ ಐಪಿಎಲ್ನಿಂದ ಹೊರಬಿದ್ದಿರುವ ಆರ್ಸಿಬಿ ಆಟಗಾರ ಡೇವಿಡ್ ವಿಲ್ಲಿ ಬದಲಿಗೆ ಮೊನ್ನೆಯಷ್ಟೆ ಬೆಂಗಳೂರು ಮ್ಯಾನೇಜ್ಮೆಂಟ್ ಐಪಿಎಲ್ 2023 ರಲ್ಲಿ ಮರಾಠಿ ಕಾಮೆಂಟ್ರಿ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೇದಾರ್ ಜಾಧವ್ ಅವರನ್ನು ಆಯ್ಕೆ ಮಾಡಿದೆ.
4 / 7
38 ವರ್ಷದ ಕೇದಾರ್ ಜಾಧವ್ ಇದೀಗ ಆರ್ಸಿಬಿ ಕ್ಯಾಂಪ್ ಸೇರಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಮೈದಾನದಲ್ಲಿ ಫೋರ್, ಸಿಕ್ಸರ್ ಸಿಡಿಸಿ ತಾನಿನ್ನೂ ಫಿಟ್ ಆಗಿದ್ದೇನೆ, ನನ್ನಲ್ಲೂ ಕ್ರಿಕೆಟ್ ಆಡುವ ಶಕ್ತಿಯಿದೆ ಎಂದು ತೋರಿಸಿದ್ದಾರೆ.
5 / 7
ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಇವರು ಮಾತನಾಡಿದ್ದು, ನಾನು ವಿಶ್ರಾಂತಿಯನ್ನು ಬಯಸಿದ್ದೆ. ಆದರೆ, ಬಳಿಕ ನಾನು ನನ್ನ ಫ್ಯಾಶನ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮನವರಿಕೆ ಆಯಿತು. ಹೀಗಾಗಿ ಮತ್ತೆ ಕ್ರಿಕೆಟ್ಗೆ ಮರಳಿದೆ ಎಂದು ಕೇದರ್ ಜಾಧವ್ ಹೇಳಿದ್ದಾರೆ.
6 / 7
ನಾನು ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ಪ್ರಥಮ ದರ್ಜೆ ಕ್ರಿಕೆಟ್ ಆಡಿದೆ. ಅಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. ನನ್ನಲ್ಲಿ ಇನ್ನಷ್ಟು ಕ್ರಿಕೆಟ್ ಬಾಕಿಯಿದೆ. ದೊಡ್ಡ ಸ್ಕೋರ್ ಕಲೆಹಾಕಬೇಕು ಎಂಬ ಹಸಿವಿದೆ. ನಾನೀಗ ಎಲ್ಲದಕ್ಕೂ ಸಿದ್ದವಿದ್ದೇನೆ ಎಂಬುದು ಜಾಧವ್ ಮಾತು.
7 / 7
ಕೇದದರ್ ಜಾಧವ್ ಆರ್ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬಲ ತುಂಬಲಿದ್ದಾರೆ. ಸದ್ಯ ಬೆಂಗಳೂರು ತಂಡದಲ್ಲಿ ಫಾಪ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಬಿಟ್ಟರೆ ಇತರೆ ಯಾವ ಬ್ಯಾಟರ್ ಕೂಡ ಅಬ್ಬರಿಸುತ್ತಿಲ್ಲ. ಹೀಗಾಗಿ ಜಾಧವ್ 4 ಅಥವಾ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.