IPL 2025: ಪ್ಲೇಆಫ್‌ನಿಂದ ಹೊರಬಿದ್ದ ಕೆಕೆಆರ್ ತಂಡಕ್ಕೆ ಯುವ ಆಟಗಾರನ ಆಗಮನ

Updated on: May 18, 2025 | 5:04 PM

Kolkata Knight Riders IPL 2025: ಕಳೆದ ವರ್ಷದ ಚಾಂಪಿಯನ್ ಕೆಕೆಆರ್ ಈ ಬಾರಿ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ. ಬೆಂಗಳೂರು ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಒಂದು ಅಂಕ ಪಡೆದ ಕೆಕೆಆರ್ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ರೋವ್‌ಮನ್ ಪೊವೆಲ್ ಗಾಯದಿಂದಾಗಿ, ಮಧ್ಯಪ್ರದೇಶದ ಸ್ಪಿನ್ನರ್ ಶಿವಂ ಶುಕ್ಲಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಶುಕ್ಲಾ ಅವರು ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

1 / 7
ಕಳೆದ ವರ್ಷದ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಈ ಸೀಸನ್​ನಲ್ಲಿ ಲೀಗ್ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದೆ. ಕೆಕೆಆರ್​ನ ಪ್ಲೇಆಫ್‌ ಕನಸಿಗೆ ತಣ್ಣೀರೆರಚಿದ ಮಳೆರಾಯ ರಹಾನೆ ಪಡೆಯನ್ನು ಲೀಗ್​ನಿಂದ ಹೊರಹಾಕಿತು. ವಾಸ್ತವವಾಗಿ ಶನಿವಾರ (ಮೇ 17) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು.

2 / 7
ಇದರಿಂದಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಹೀಗಾಗಿ 1 ಅಂಕ ಪಡೆದ ಕೆಕೆಆರ್ ಪ್ಲೇಆಫ್‌ನಿಂದ ಹೊರಬಿದ್ದಿತು. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಕೊನೆಯ ಔಪಚಾರಿಕ ಲೀಗ್ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಆದರೆ ಅದಕ್ಕೂ ಮುನ್ನ ತಂಡಕ್ಕೆ ಹೊಸ ಆಟಗಾರನನ್ನು ಸೇರಿಸಿಕೊಂಡಿದೆ.

3 / 7
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರೋವ್‌ಮನ್ ಪೊವೆಲ್ ಬದಲಿಗೆ ಮಧ್ಯಪ್ರದೇಶದ ಮಿಸ್ಟ್ರಿ ಸ್ಪಿನ್ನರ್ ಶಿವಂ ಶುಕ್ಲಾ ಅವರನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಂಡಿದೆ. ರೋವ್‌ಮನ್ ಪೊವೆಲ್ ಗಾಯಗೊಂಡಿದ್ದಾರೆ ಎಂಬ ವರದಿಗಳಿದ್ದು, ಇದರಿಂದಾಗಿ ಅವರು ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ.

4 / 7
ಅವರ ಸ್ಥಾನದಲ್ಲಿ, ಶಿವಂ ಶುಕ್ಲಾ ಅವರನ್ನು ಒಂದು ಪಂದ್ಯಕ್ಕೆ ಕೆಕೆಆರ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಶಿವಂ ಶುಕ್ಲಾ ಮೊದಲ ಬಾರಿಗೆ ಐಪಿಎಲ್‌ಗೆ ಆಯ್ಕೆಯಾಗಿದ್ದು, ಕೆಕೆಆರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

5 / 7
ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಿವಂ ಶುಕ್ಲಾ ಕಳೆದ ವರ್ಷ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 8 ಟಿ20 ಪಂದ್ಯಗಳನ್ನು ಆಡಿ, 6.30 ರ ಎಕಾನಮಿಯಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದರು. ಕಳೆದ ವರ್ಷವಷ್ಟೇ ದೇಶೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಶಿವಂ, ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ 4 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ.

6 / 7
ಮೇಲೆ ಹೇಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಈ ಮೂಲಕ ಐಪಿಎಲ್ 2025 ರ ಮೊದಲ ಸುತ್ತಿನಲ್ಲೇ ಹೊರಬಿದ್ದ ನಾಲ್ಕನೇ ತಂಡ ಎನಿಸಿಕೊಂಡಿದೆ. ಕೆಕೆಆರ್​ಗೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಸೀಸನ್​ನಿಂದ ಹೊರಬಿದ್ದಿವೆ.

7 / 7
ಕೆಕೆಆರ್ ಇದುವರೆಗೆ 13 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 5 ರಲ್ಲಿ ಗೆದ್ದು 6 ರಲ್ಲಿ ಸೋತಿದ್ದರೆ, ಎರಡು ಪಂದ್ಯಗಳು ರದ್ದಾಗಿವೆ. ಈ ರೀತಿಯಾಗಿ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಸೀಸನ್​ನ ಎರಡು ಪಂದ್ಯಗಳು ಮಳೆಯಿಂದ ರದ್ದಾಗಿದ್ದವು. ಕೋಲ್ಕತ್ತಾದಲ್ಲಿ ನಡೆದ ಒಂದು ಪಂದ್ಯ ಮತ್ತು ಬೆಂಗಳೂರಿನಲ್ಲಿ ನಡೆದ ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.