
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ಬುಧವಾರ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತ ತಂಡ ಮೊದಲ ಬೌಲಿಂಗ್ ಆಯ್ದುಕೊಂಡಿದೆ. ಇನ್ನು ಈ ಪಂದ್ಯ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ಗೆ ವಿಶೇಷ ಪಂದ್ಯವಾಗಿದ್ದು, ಕಣಕ್ಕಿಳಿದ ಕೂಡಲೇ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ಶತಕ ಪೂರೈಸಿದ್ದಾರೆ(PC-PTI).
ವಾಸ್ತವವಾಗಿ ಇದು ಕನ್ನಡಿಗ ಕೆಎಲ್ ರಾಹುಲ್ ಅವರ 100 ನೇ ಏಕದಿನ ಪಂದ್ಯವಾಗಿದ್ದು, 10 ವರ್ಷಗಳ ನಂತರ ಈ ಮೈಲಿಗಲ್ಲು ತಲುಪಿದ್ದಾರೆ. ಜೂನ್ 2016 ರಲ್ಲಿ ಭಾರತ ಪರ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ರಾಹುಲ್ ತಮ್ಮ ಮೊದಲ ಏಕದಿನ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಆಡಿದ್ದರು(PC-PTI).
34 ವರ್ಷದ ರಾಹುಲ್ ಇದುವರೆಗೆ 50 ಓವರ್‌ಗಳ ಸ್ವರೂಪದಲ್ಲಿ 49.44 ಸರಾಸರಿಯಲ್ಲಿ 3,412 ರನ್ ಗಳಿಸಿದ್ದಾರೆ, ಇದರಲ್ಲಿ ಎಂಟು ಶತಕಗಳು ಮತ್ತು 20 ಅರ್ಧಶತಕಗಳು ಸೇರಿವೆ. ಏಕದಿನ ಪಂದ್ಯಗಳಲ್ಲಿ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ ಅಜೇಯ 112 ರನ್ಗಳಾಗಿದೆ(PC-PTI).
ಕೆ.ಎಲ್. ರಾಹುಲ್ ತಮ್ಮ 100 ನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ದಾಟುವ ಅವಕಾಶ ಹೊಂದಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ಪೂರ್ಣಗೊಳಿಸಲು ಕೇವಲ 35 ರನ್‌ಗಳ ದೂರದಲ್ಲಿದ್ದಾರೆ. ಪ್ರಸ್ತುತ 241 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ರಾಹುಲ್ 40.50 ರ ಸರಾಸರಿಯಲ್ಲಿ 9965 ರನ್ ಗಳಿಸಿದ್ದಾರೆ(PC-PTI).
ಡಿಸೆಂಬರ್ 2014 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಾಹುಲ್ ಇದುವರೆಗೆ 70 ಟೆಸ್ಟ್‌ಗಳಲ್ಲಿ 4288 ರನ್ ಗಳಿಸಿದ್ದಾರೆ. ರಾಹುಲ್ ಭಾರತ ಟೆಸ್ಟ್ ತಂಡದ ಉಪನಾಯಕರಾಗಿದ್ದು, ಇದೀಗ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ಸರಣಿಯಲ್ಲಿ ಭಾರತೀಯ ಏಕದಿನ ತಂಡದ ಉಪನಾಯಕರನ್ನಾಗಿಯೂ ಆಯ್ಕೆಯಾಗಿದ್ದಾರೆ(PC-PTI).