IND vs SA: ಗುರು ದ್ರಾವಿಡ್ ಜೊತೆ ಟೀಂ ಇಂಡಿಯಾ ಕ್ರಿಕೆಟಿಗರ ಮೋಜು- ಮಸ್ತಿ; ಕೊಹ್ಲಿ ಮಿಸ್ಸಿಂಗ್

| Updated By: ಪೃಥ್ವಿಶಂಕರ

Updated on: Dec 23, 2021 | 3:22 PM

IND vs SA: ಪೂಜಾರ, ರಾಹುಲ್, ರಹಾನೆ, ಮಯಾಂಕ್, ರಾಹುಲ್ ದ್ರಾವಿಡ್ ಡಿನ್ನರ್ ಮಾಡುತ್ತಿರುವ ಫೋಟೋಗಳಲ್ಲೂ ಕೊಹ್ಲಿ ಕಾಣಿಸಿಕೊಂಡಿಲ್ಲ. ಜೊತೆಗೆ ಪೂಜಾರ ಪೋಸ್ಟ್ ಮಾಡಿದ ಚಿತ್ರದಲ್ಲಿ ಅವರು ಕಾಣಿಸಿಕೊಂಡಿಲ್ಲ.

1 / 5
ಭಾರತ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಈ ಸರಣಿಯು ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದೆ. ಈ ಪ್ರವಾಸದ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಘಟನೆಗಳು ನಡೆದಿವೆ. ಇದರಲ್ಲಿ ಕೊಹ್ಲಿ-ರೋಹಿತ್ ನಡುವಿನ ಭಿನ್ನಾಭಿಪ್ರಾಯ ಮತ್ತು ನಂತರ ಕೊಹ್ಲಿ-ಬಿಸಿಸಿಐ ನಡುವಿನ ವಿವಾದದ ಸುದ್ದಿ ಮುನ್ನೆಲೆಗೆ ಬಂದಿತ್ತು. ಇದೆಲ್ಲದರ ನಡುವೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಲುಪಿದ್ದು, ಅಲ್ಲಿನ ಕಠಿಣ ಸವಾಲಿಗೆ ಸಜ್ಜಾಗಿದೆ. ಆದಾಗ್ಯೂ, ಸರಣಿಯ ಆರಂಭದ ಮೊದಲು, ತಂಡದ ಕೆಲವು ಆಟಗಾರರು ಹೊಸ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

2 / 5
ಮಯಾಂಕ್ ಅಗರ್ವಾಲ್, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್ ಮತ್ತು ಚೇತೇಶ್ವರ್ ಪೂಜಾರ ಅವರು ಡಿನ್ನರ್ ಮಾಡಿದರು ಮತ್ತು ತಂಡದ ಹೊಸ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಬಾರ್ಬೆಕ್ಯೂ ಅನ್ನು ಆನಂದಿಸಿದರು. ಈ ಔತಣಕೂಟದ ಕೆಲವು ಚಿತ್ರಗಳನ್ನು ಮಯಾಂಕ್ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

3 / 5
ರಾಹುಲ್ ದ್ರಾವಿಡ್ ಮಾತ್ರವಲ್ಲ. ಆಟಗಾರರ ಜೊತೆಗೆ, ಉಳಿದ ಸಹಾಯಕ ಸಿಬ್ಬಂದಿಯ ಜನರು ಸಹ ಈ ವಿಹಾರ ಮತ್ತು ಭೋಜನವನ್ನು ಆನಂದಿಸಿದರು. ಇದರಲ್ಲಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫಿಸಿಯೋಥೆರಪಿಸ್ಟ್ ನಿತಿನ್ ಪಟೇಲ್ ಕೂಡ ಇದ್ದರು. ಮಯಾಂಕ್ ಪೋಸ್ಟ್ ಮಾಡಿದ ಫೋಟೋಗಳಲ್ಲಿಯೂ ಅವರನ್ನು ಕಾಣಬಹುದು.

4 / 5
ಚೇತೇಶ್ವರ್ ಪೂಜಾರ ಸಹ ಆಟಗಾರರೊಂದಿಗೆ ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೂಜಾರ ಜೊತೆಗೆ ರಹಾನೆ, ಅಶ್ವಿನ್, ಉಮೇಶ್ ಯಾದವ್ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

5 / 5
ಆದಾಗ್ಯೂ, ಈ ಎಲ್ಲಾ ಚಿತ್ರಗಳಲ್ಲಿ ವಿರಾಟ್ ಕೊಹ್ಲಿ ಗೈರುಹಾಜರಾಗಿದ್ದರು. ಪೂಜಾರ, ರಾಹುಲ್, ರಹಾನೆ, ಮಯಾಂಕ್, ರಾಹುಲ್ ದ್ರಾವಿಡ್ ಡಿನ್ನರ್ ಮಾಡುತ್ತಿರುವ ಫೋಟೋಗಳಲ್ಲೂ ಕೊಹ್ಲಿ ಕಾಣಿಸಿಕೊಂಡಿಲ್ಲ. ಜೊತೆಗೆ ಪೂಜಾರ ಪೋಸ್ಟ್ ಮಾಡಿದ ಚಿತ್ರದಲ್ಲಿ ಅವರು ಕಾಣಿಸಿಕೊಂಡಿಲ್ಲ.