KS Bharat: ಕೇವಲ 20ರ ಸರಾಸರಿ: ಆದರೂ ಭಾರತ ತಂಡಕ್ಕೆ ಆಯ್ಕೆ..!

| Updated By: ಝಾಹಿರ್ ಯೂಸುಫ್

Updated on: Feb 10, 2024 | 2:05 PM

India vs England Test: ಇಂಗ್ಲೆಂಡ್ ವಿರುದ್ಧದ ಉಳಿದ ಟೆಸ್ಟ್​ ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಕೆಎಸ್ ಭರತ್​ಗೆ ಮಣೆಹಾಕಲಾಗಿದೆ. ಅತ್ತ ಸತತ ಕಳಪೆ ಪ್ರದರ್ಶನ ನೀಡಿದ್ದರೂ ಭರತ್​ಗೆ ಮತ್ತೊಮ್ಮೆ ಅವಕಾಶ ನೀಡಿರುವುದು ಇದೀಗ ಅಚ್ಚರಿಗೆ ಕಾರಣವಾಗಿದೆ.

1 / 7
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. 17 ಸದಸ್ಯರ ಈ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಕೆಎಸ್ ಭರತ್ ಮತ್ತೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಭರತ್ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

2 / 7
ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 28 ರನ್ ಬಾರಿಸಿದ್ದ ಭರತ್, 2ನೇ ಇನಿಂಗ್ಸ್​ನಲ್ಲಿ 41 ರನ್​ಗಳಿಸಿದ್ದರು. ಇನ್ನು ದ್ವಿತೀಯ ಟೆಸ್ಟ್​ನ ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 6 ರನ್​ಗೆ ಆಲೌಟ್ ಆಗಿದ್ದರು. ಹಾಗೆಯೇ 2ನೇ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು ಕೇವಲ 17 ರನ್ ಮಾತ್ರ. ಅಂದರೆ  4 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದರೂ ಕಲೆಹಾಕಿರುವ ಒಟ್ಟು ಸ್ಕೋರ್ 92 ರನ್​ಗಳು ಮಾತ್ರ.

3 / 7
ಇದಾಗ್ಯೂ ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಮುಖ್ಯ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಕೆಎಸ್ ಭರತ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಇತ್ತ ಬಿಸಿಸಿಐಯ ಈ ನಡೆಗೆ ಇದೀಗ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಸೇರಿದಂತೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ.

4 / 7
ಏಕೆಂದರೆ ಕೆಎಸ್ ಭರತ್ ಭಾರತದ ಪರ ಇದುವರೆಗೆ 12 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಇನ್ನು ಕಲೆಹಾಕಿರುವುದು ಕೇವಲ 221 ರನ್​ಗಳು ಮಾತ್ರ. ಅಂದರೆ 20.09 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ.

5 / 7
ಈ ಅಂಕಿ ಅಂಶಗಳ ಪ್ರಕಾರ ಕೆಎಸ್ ಭರತ್ ಟೀಮ್ ಇಂಡಿಯಾ ಪರ ಅಟ್ಟರ್ ಫ್ಲಾಪ್ ಆಟಗಾರ. ಇದಾಗ್ಯೂ ಆತನಿಗೆ ಸತತ ಅವಕಾಶ ನೀಡುತ್ತಿರುವುದೇಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಲ್ಲದೆ ಭರತ್ ಭಾರತ ತಂಡದ ಆಯ್ಕೆಗೆ ಅರ್ಹರೇ ಎಂಬ ಪ್ರಶ್ನೆಗಳನ್ನೂ ಕೂಡ ಮುಂದಿಡಲಾಗುತ್ತಿದೆ.

6 / 7
ಭರತ್ ಅರ್ಹತೆ ಬಗ್ಗೆ ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಅವರ ಪ್ರಥಮ ದರ್ಜೆ ಪ್ರದರ್ಶನದ ಅಂಕಿ ಅಂಶಗಳು. ಫಸ್ಟ್​ ಕ್ಲಾಸ್​ನಲ್ಲಿ ಇದುವರೆಗೆ 152 ಇನಿಂಗ್ಸ್ ಆಡಿರುವ ಕೆಎಸ್ ಭರತ್ ಕಲೆಹಾಕಿರುವುದು 5101 ರನ್​ಗಳು ಮಾತ್ರ. ಅಂದರೆ 36.69 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

7 / 7
ಇತ್ತ ಟೀಮ್ ಇಂಡಿಯಾ ಪರ ಕೂಡ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ಕಳೆದ ಕೆಲ ಸರಣಿಗಳಿಂದ ಅವರನ್ನೇ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ಆಗಿ ಆಯ್ಕೆ ಮಾಡಲಾಗಿದೆ. ಹೀಗೆ ಸಿಕ್ಕ ಅವಕಾಶಗಳಲ್ಲಿ ಭರತ್ ಬ್ಯಾಟ್​ನಿಂದ ಒಂದೇ ಒಂದು ದೊಡ್ಡ ಇನಿಂಗ್ಸ್ ಮೂಡಿಬಂದಿಲ್ಲ. ಇದಾಗ್ಯೂ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಿಗೆ ಮತ್ತೆ ಅವರನ್ನೇ ಆಯ್ಕೆ ಮಾಡಿರುವುದು ದೊಡ್ಡ ಅಚ್ಚರಿ.