Kuldeep Yadav: ಟೆಸ್ಟ್ ಕ್ರಿಕೆಟ್​ನಲ್ಲಿ ಶತಮಾನದ ದಾಖಲೆ ಬರೆದ ಕುಲ್ದೀಪ್ ಯಾದವ್

| Updated By: ಝಾಹಿರ್ ಯೂಸುಫ್

Updated on: Mar 09, 2024 | 8:58 AM

Kuldeep Yadav Records: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅದು ಕೂಡ ಅತೀ ಕಡಿಮೆ ಎಸೆತಗಳಲ್ಲಿ 50 ವಿಕೆಟ್​ಗಳನ್ನು ಕಬಳಿಸುವ ಮೂಲಕ ಎಂಬುದು ವಿಶೇಷ. ಹಾಗಿದ್ರೆ ಕುಲ್ದೀಪ್ ಯಾದವ್ ಬರೆದಿರುವ ಈ ವಿಶೇಷ ದಾಖಲೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ...

1 / 6
ಧರ್ಮಶಾಲಾದ ಹೆಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಕಮಾಲ್ ಮಾಡಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 15 ಓವರ್ ಬೌಲಿಂಗ್ ಮಾಡಿದ್ದ ಕುಲ್ದೀಪ್ 72 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.

2 / 6
ಈ ಐದು ವಿಕೆಟ್​ಗಳೊಂದಿಗೆ ಕುಲ್ದೀಪ್ ಯಾದವ್ ಟೆಸ್ಟ್ ಕ್ರಿಕೆಟ್​ನಲ್ಲಿ 50 ವಿಕೆಟ್​ಗಳನ್ನು ಪೂರೈಸಿದ್ದಾರೆ. ಅದು ಕೂಡ ಅತೀ ಕಡಿಮೆ ಎಸೆತಗಳ ಮೂಲಕ ಎಂಬುದು ವಿಶೇಷ. ಅಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ಪರ ಅತೀ ಕಡಿಮೆ ಎಸೆತಗಳನ್ನು ಎಸೆದು 50 ವಿಕೆಟ್​ಗಳನ್ನು ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಯಾದವ್ ಪಾತ್ರರಾಗಿದ್ದಾರೆ.

3 / 6
ಇದಕ್ಕೂ ಮುನ್ನ ಈ ದಾಖಲೆ ಅಕ್ಷರ್ ಪಟೇಲ್ ಹೆಸರಿನಲ್ಲಿತ್ತು. ಎಡಗೈ ಸ್ಪಿನ್ನರ್ ಅಕ್ಷರ್ 2205 ಎಸೆತಗಳ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ 50 ವಿಕೆಟ್ ಕಬಳಿಸಿ ಇತಿಹಾಸ ಬರೆದಿದ್ದರು. ಇದೀಗ ಈ ದಾಖಲೆಯನ್ನು ಕುಲ್ದೀಪ್ ಯಾದವ್ ಅಳಿಸಿ ಹಾಕಿದ್ದಾರೆ.

4 / 6
ಕೇವಲ 1871 ಎಸೆತಗಳ ಮೂಲಕ 50 ವಿಕೆಟ್ ಕಬಳಿಸಿರುವ ಕುಲ್ದೀಪ್ ಯಾದವ್ ಇದೀಗ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕೇವಲ ಇಬ್ಬರು ಸ್ಪಿನ್ನರ್ ಮಾತ್ರ ಕಡಿಮೆ ಎಸೆತಗಳಲ್ಲಿ 50 ವಿಕೆಟ್​ಗಳ ಸಾಧನೆ ಮಾಡಿದ್ದಾರೆ.

5 / 6
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇಂಗ್ಲೆಂಡ್​ನ ಮಾಜಿ ಸ್ಪಿನ್ನರ್ ಜಾನಿ ಬ್ರಿಗ್ಸ್​. 1879-90 ರ ನಡುವೆ ಇಂಗ್ಲೆಂಡ್ ಪರ ಆಡಿದ್ದ ಬ್ರಿಗ್ಸ್ 1512 ಎಸೆತಗಳಲ್ಲಿ 50 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

6 / 6
ಇದೀಗ 1871 ಎಸೆತಗಳ ಮೂಲಕ ಕುಲ್ದೀಪ್ ಯಾದವ್ 50 ವಿಕೆಟ್​ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಶತಮಾನದಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ 50 ವಿಕೆಟ್ ಕಬಳಿಸಿದ ವಿಶ್ವ ದಾಖಲೆಯನ್ನು ಕುಲ್ದೀಪ್ ಯಾದವ್ ತಮ್ಮದಾಗಿಸಿಕೊಂಡಿದ್ದಾರೆ.