IPL Auction 2026: ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದಿದ್ದ ಲಿವಿಂಗ್‌ಸ್ಟೋನ್​ಗೆ 13 ಕೋಟಿ ಕೊಟ್ಟ ಕಾವ್ಯಾ

Updated on: Dec 16, 2025 | 8:50 PM

Liam Livingstone IPL 2026: ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಐಪಿಎಲ್ 2026 ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರೂ.ಗೆ ಖರೀದಿಸಿದೆ. ಆರ್‌ಸಿಬಿಯಲ್ಲಿ ವೈಫಲ್ಯ ಕಂಡಿದ್ದರೂ, ಅವರ ಆಲ್ ರೌಂಡರ್ ಸಾಮರ್ಥ್ಯ (ಬ್ಯಾಟಿಂಗ್, ಬೌಲಿಂಗ್, ಮ್ಯಾಚ್ ಫಿನಿಷರ್) ಅವರನ್ನು ದುಬಾರಿ ಆಟಗಾರನನ್ನಾಗಿಸಿದೆ. ಎರಡನೇ ಸುತ್ತಿನಲ್ಲಿ ಹಲವು ತಂಡಗಳ ಪೈಪೋಟಿಯ ಬಳಿಕ ಎಸ್‌ಆರ್‌ಹೆಚ್ ಅವರನ್ನು ಪಡೆಯಿತು.

1 / 5
ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಐಪಿಎಲ್ 2026 ರ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಖರೀದಿಯಾಗಿದ್ದಾರೆ. ಲಿವಿಂಗ್‌ಸ್ಟೋನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರೂ. ನೀಡಿ ಖರೀದಿಸಿದೆ. ಅಚ್ಚರಿಯೆಂದರೆ ಮೊದಲ ಸುತ್ತಿನಲ್ಲಿ ಯಾರೂ ಖರೀದಿಸಿದ ಲಿವಿಂಗ್‌ಸ್ಟೋನ್ ಎರಡನೇ ಸುತ್ತಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿಯಾದರು.

2 / 5
ಕಳೆದ ಆವೃತ್ತಿಯಲ್ಲಿ ಲಿವಿಂಗ್‌ಸ್ಟೋನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆರ್​ಸಿಬಿ ಚಾಂಪಿಯನ್ ಆಯಿತ್ತ್ತಾದರೂ ಲಿವಿಂಗ್‌ಸ್ಟೋನ್ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಆಡಿದ 8 ಇನ್ನಿಂಗ್ಸ್‌ಗಳಲ್ಲಿ ಕೇವಲ 16 ಸರಾಸರಿಯಲ್ಲಿ ಕೇವಲ 112 ರನ್ ಗಳಿಸಿದರು. ಹೀಗಾಗಿ ಅವರನ್ನು ಆರ್​ಸಿಬಿ ತಂಡದಲ್ಲಿ ಉಳಿಸಿಕೊಳ್ಳಲಿಲ್ಲ.

3 / 5
ಮೇಲೆ ಹೇಳಿದಂತೆ ಮೊದಲ ಸುತ್ತಿನಲ್ಲಿ ಲಿವಿಂಗ್‌ಸ್ಟೋನ್ ಮಾರಾಟವಾಗಲಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ಅವರ ಖರೀದಿಗಾಗಿ ಕೆಕೆಆರ್, ಹೈದರಾಬಾದ್, ಲಕ್ನೋ ಮತ್ತು ಗುಜರಾತ್ ತಂಡಗಳು ಪೈಪೋಟಿ ನಡೆಸಿದವು. ಕೆಕೆಆರ್ ಹಾಗೂ ಗುಜರಾತ್‌ ಆರಂಭಿಸಿದರೆ, ಕೊನೆಯಲ್ಲಿ ಲಕ್ನೋ ಮತ್ತು ಹೈದರಾಬಾದ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತು. ಅಂತಿಮವಾಗಿ ಅಧಿಕ ಹಣ ಹೊಂದಿದ್ದ ಸನ್‌ರೈಸರ್ಸ್ ಹೈದರಾಬಾದ್ 13 ಕೋಟಿ ರೂಪಾಯಿಗಳಿಗೆ ಬಿಡ್‌ ಗೆದ್ದಿತು.

4 / 5
ಲಿವಿಂಗ್‌ಸ್ಟೋನ್ ಇಷ್ಟೊಂದು ಹಣ ಗಳಿಸಲು ಮುಖ್ಯ ಕಾರಣ ಅವರ ಸಾಮರ್ಥ್ಯ. ಅವರು 4 ನೇ ಕ್ರಮಾಂಕದಿಂದ 6 ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಮಾಡಬಲ್ಲರು. ಅವರನ್ನು ಮ್ಯಾಚ್ ಫಿನಿಷರ್ ಎಂದು ಪರಿಗಣಿಸಲಾಗುತ್ತದೆ. ಅವರು ಲೆಗ್ ಮತ್ತು ಆಫ್ ಸ್ಪಿನ್ ಎರಡನ್ನೂ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೆ ಪ್ರಪಂಚದಾದ್ಯಂತದ ಟಿ20 ಲೀಗ್‌ಗಳಲ್ಲಿ ಆಡುವ ಲಿವಿಂಗ್‌ಸ್ಟೋನ್ ಇದುವರೆಗೆ 330 ಪಂದ್ಯಗಳಲ್ಲಿ ಅನುಭವ ಹೊಂದಿದ್ದಾರೆ.

5 / 5
ಐಪಿಎಲ್​ನಲ್ಲಿ 49 ಪಂದ್ಯಗಳನ್ನು ಆಡಿರುವ ಲಿವಿಂಗ್‌ಸ್ಟೋನ್ 26.27 ರ ಸರಾಸರಿಯಲ್ಲಿ 1051 ರನ್ ಗಳಿಸಿದ್ದಾರೆ. ಇದರಲ್ಲಿ ಏಳು ಅರ್ಧಶತಕಗಳು ಸೇರಿವೆ. ಲಿವಿಂಗ್‌ಸ್ಟೋನ್ ಬಿಗ್ ಬ್ಯಾಷ್ ಲೀಗ್, ಟಿ 20 ಬ್ಲಾಸ್ಟ್, ಪುರುಷರ ಹಂಡ್ರೆಂಡ್, ಪಿಎಸ್‌ಎಲ್ ಮತ್ತು ಎಸ್‌ಎ 20 ಲೀಗ್‌ನಲ್ಲೂ ಆಡಿದ್ದಾರೆ.