- Kannada News Photo gallery Cricket photos List of top 10 wicketkeepers who picked wickets in international cricket
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದ ಟಾಪ್ 10 ವಿಕೆಟ್ ಕೀಪರ್ಗಳಿವರು
Cricket: ಇತ್ತೀಚಿನ ದಿನಗಳಲ್ಲಿ ವಿಕೆಟ್ ಕೀಪರ್ಗಳು ಕೇವಲ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ಗೆ ಸೀಮತರಾಗಿರುತ್ತಾರೆ. ಆದರೆ ಈ ವಿಕೆಟ್ ಕೀಪರ್ಗಳಲ್ಲಿಯೂ ಕೆಲವರು ಕೀಪಿಂಗ್, ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಕಮಾಲ್ ಮಾಡಿದ್ದಾರೆ
Updated on: Jun 16, 2023 | 7:23 PM

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲರ್ಗಳು ಹಾಗೂ ಆಲ್ರೌಂಡರ್ಗಳನ್ನು ಹೊರತುಪಡಿಸಿ ಅರೆಕಾಲಿಕ ಬೌಲರ್ಗಳು ಬೌಲಿಂಗ್ ಮಾಡುವುದು ತೀರ ವಿರಳ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ನಂತಹ ಬ್ಯಾಟರ್ಗಳು ಅರೆಕಾಲಿಕ ಸ್ಪಿನ್ನರ್ ಸಹ ಆಗಿದ್ದಾರೆ. ಆದರೆ ಇವರಿಗೆ ಬೌಲಿಂಗ್ ಮಾಡುವ ಅವಕಾಶ ಸಿಗವುದು ತೀರ ವಿರಳ.

ಇನ್ನೂ ವಿಕೆಟ್ ಕೀಪರ್ಗಳ ವಿಚಾರಕ್ಕೆ ಬಂದರೆ, ಇತ್ತೀಚಿನ ದಿನಗಳಲ್ಲಿ ವಿಕೆಟ್ ಕೀಪರ್ಗಳು ಕೇವಲ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ಗೆ ಸೀಮತರಾಗಿರುತ್ತಾರೆ. ಆದರೆ ಈ ವಿಕೆಟ್ ಕೀಪರ್ಗಳಲ್ಲಿಯೂ ಕೆಲವರು ಕೀಪಿಂಗ್, ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಕಮಾಲ್ ಮಾಡಿದ್ದಾರೆ ಎಂದರೆ ನೀವು ನಂಬುತ್ತೀರಾ? ಅಂತಹ ಟಾಪ್ 10 ವಿಕೆಟ್ ಕೀಪರ್ಗಳ ವಿವರ ಹೀಗಿದೆ.

ಟೀಂ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ನಲ್ಲಿ 1, ಏಕದಿನದಲ್ಲಿ 4 ವಿಕೆಟ್ ಪಡೆದಿದ್ದಾರೆ.

ಆಫ್ರಿಕಾ ತಂಡ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೀಪಿಂಗ್ ಜೊತೆಗೆ ಬೌಲಿಂಗ್ ಮಾಡಿ ಟೆಸ್ಟ್ನಲ್ಲಿ 2, ಏಕದಿನದಲ್ಲಿ 7 ವಿಕೆಟ್ ಪಡೆದಿದ್ದಾರೆ.

ಭಾರತದ ಸಯ್ಯದ್ ಕೀರ್ಮಾನಿ ಟೆಸ್ಟ್ನಲ್ಲಿ 1 ವಿಕೆಟ್ ಪಡೆದಿದ್ದಾರೆ.

ಲಂಕಾ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಟೆಸ್ಟ್ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡಿ 1 ವಿಕೆಟ್ ಪಡೆದಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಏಕದಿನದಲ್ಲಿ 1 ವಿಕೆಟ್ ಪಡೆದಿದ್ದಾರೆ.

ನ್ಯೂಜಿಲೆಂಡ್ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಬ್ರೆಂಡನ್ ಮೆಕಲಮ್ ಕೂಡ ಟೆಸ್ಟ್ನಲ್ಲಿ 1 ವಿಕೆಟ್ ಉರುಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ ಟೆಸ್ಟ್ನಲ್ಲಿ 1 ವಿಕೆಟ್ ಪಡೆದಿದ್ದಾರೆ.

ಮತ್ತೊಬ್ಬ ಲಂಕಾ ಆಟಗಾರ ತಿಲಕರತ್ನೆ ದಿಲ್ಶಾನ್ ಕೀಪಿಂಗ್ ಜೊತೆಗೆ, ಏಕದಿನದಲ್ಲಿ 106, ಟೆಸ್ಟ್ನಲ್ಲಿ 39 ಹಾಗೂ ಟಿ20ಯಲ್ಲಿ 9 ವಿಕೆಟ್ ಪಡೆದಿದ್ದಾರೆ.

ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಟಿ20ಯಲ್ಲಿ 1 ಏಕದಿನದಲ್ಲಿ 9 ವಿಕೆಟ್ ಪಡೆದಿದ್ದಾರೆ.

ಜಿಂಬಾಬ್ವೆಯ ಟಾಟೆಂಡರ್ ಟೈಬು ಟೆಸ್ಟ್ನಲ್ಲಿ 1, ಏಕದಿನದಲ್ಲಿ 2 ವಿಕೆಟ್ ಪಡೆದಿದ್ದಾರೆ.




