Updated on: Mar 09, 2023 | 8:30 PM
LLC 2023: ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಭಾಗವಹಿಸಲಿರುವ ಮೂರು ತಂಡಗಳ ಘೋಷಣೆಯಾಗಿದೆ. ಈ ಬಾರಿ ಇಂಡಿಯಾ ಮಹಾರಾಜಾಸ್ ತಂಡವನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಮುನ್ನಡೆಸಲಿದ್ದಾರೆ. ಹಾಗೆಯೇ ವರ್ಲ್ಡ್ ಜೈಂಟ್ಸ್ ತಂಡಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಸಾರಥ್ಯವಹಿಸಲಿದ್ದಾರೆ. ಇನ್ನು ಏಷ್ಯಾ ಲಯನ್ಸ್ ತಂಡವನ್ನು ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಮುನ್ನಡೆಸಲಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯು ಮಾರ್ಚ್ 10 ರಿಂದ ಮಾರ್ಚ್ 20 ರವರೆಗೆ ಕತಾರ್‌ನ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮಹಾರಾಜಾಸ್ ಹಾಗೂ ಏಷ್ಯಾ ಲಯನ್ಸ್ ಮುಖಾಮುಖಿಯಾಗಲಿದೆ. ಈ ಲೀಗ್ನಲ್ಲಿ ವಿಶ್ವ ಮಾಜಿ ಕ್ರಿಕೆಟಿಗರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅದರಂತೆ ಮೂರು ತಂಡಗಳಲ್ಲಿರುವ ಆಟಗಾರರು ಈ ಕೆಳಗಿನಂತಿದೆ.
ಏಷ್ಯಾ ಲಯನ್ಸ್: ಶಾಹಿದ್ ಅಫ್ರಿದಿ (ನಾಯಕ), ಮುತ್ತಯ್ಯ ಮುರಳೀಧರನ್, ಅಸ್ಗರ್ ಅಫ್ಘಾನ್, ಮಿಸ್ಬಾ-ಉಲ್-ಹಕ್, ರಜಿನ್ ಸಲೇಹ್, ಅಬ್ದುಲ್ ರಜಾಕ್, ಪರಸ್ ಖಡ್ಕಾ, ತಿಸಾರ ಪೆರೇರಾ, ತಿಲಕರತ್ನೆ ದಿಲ್ಶಾನ್, ಉಪುಲ್ ತರಂಗ, ಅಬ್ದುರ್ ರಜಾಕ್, ದಿಲ್ಹರಾ ಫೆರ್ನಾಂಡೋ, ಶೋಯೆಬ್ ಅಖ್ತರ್, ಮೊಹಮ್ಮದ್ ಹಫೀಜ್, ಸೊಹೈಲ್ ತನ್ವೀರ್, ಮೊಹಮ್ಮದ್ ಅಮೀರ್.
ವರ್ಲ್ಡ್ ಜೈಂಟ್ಸ್: ಆರೋನ್ ಫಿಂಚ್ (ನಾಯಕ), ಕ್ರಿಸ್ ಗೇಲ್, ಹಾಶಿಮ್ ಆಮ್ಲಾ, ರಾಸ್ ಟೇಲರ್, ಶೇನ್ ವಾಟ್ಸನ್, ಅಲ್ಬಿ ಮೊರ್ಕೆಲ್, ಜಾಕ್ವೆಸ್ ಕಾಲಿಸ್, ಕೆವಿನ್ ಒ'ಬ್ರೇನ್, ಮೋರ್ನೆ ವ್ಯಾನ್ ವೈಕ್, ಬ್ರೆಟ್ ಲೀ, ಮಾಂಟಿ ಪನೇಸರ್, ಲೆಂಡ್ಲ್ ಸಿಮನ್ಸ್, ಪಾಲ್ ಕಾಲಿಂಗ್ವುಡ್, ಮೊರ್ನೆ ಮೊರ್ಕೆಲ್
ಇಂಡಿಯಾ ಮಹಾರಾಜಾಸ್: ಗೌತಮ್ ಗಂಭೀರ್ (ನಾಯಕ), ಮೊಹಮ್ಮದ್ ಕೈಫ್, ಮುರಳಿ ವಿಜಯ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮನ್ವಿಂದರ್ ಬಿಸ್ಲಾ, ರಾಬಿನ್ ಉತ್ತಪ್ಪ, ಅಶೋಕ್ ದಿಂಡಾ, ಹರ್ಭಜನ್ ಸಿಂಗ್, ಜೋಗಿಂದರ್ ಶರ್ಮಾ, ಪರ್ವಿಂದರ್ ಅವಾನಾ, ಪ್ರಗ್ಯಾನ್ ಓಜಾ, ಪ್ರವೀಣ್ ಕುಮಾರ್, ಪ್ರವೀಣ್ ತಾಂಬೆ, ಎಸ್ ಶ್ರೀಶಾಂತ್, ಸ್ಟುವರ್ಟ್ ಬಿನ್ನಿ