
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂರನೇ ಸೀಸನ್ಗಾಗಿ ಹರಾಜು ನಡೆಸಲಾಗಿದೆ. 6 ಫ್ರಾಂಚೈಸಿಗಳ ನಡುವಣ ಈ ಹರಾಜು ಪೈಪೋಟಿಯಲ್ಲಿ ಐವರು ಆಟಗಾರರು 50 ಲಕ್ಷ ರೂ.ಗೂ ಅಧಿಕ ಮೊತ್ತ ಪಡೆದಿದ್ದಾರೆ. ಅದರಂತೆ ಈ ಬಾರಿಯ ಎಲ್ಎಲ್ಸಿ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಐವರು ಆಟಗಾರರ ಪಟ್ಟಿ ಇಲ್ಲಿದೆ...

5- ಧವಳ್ ಕುಲ್ಕರ್ಣಿ: ಟೀಮ್ ಇಂಡಿಯಾದ ಮಾಜಿ ವೇಗಿ ಧವಳ್ ಕುಲ್ಕರ್ಣಿ ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. 35 ವರ್ಷದ ಧವಳ್ ಅವರನ್ನು ಇಂಡಿಯಾ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 50 ಲಕ್ಷ ರೂ. ನೀಡಿ ಖರೀದಿಸಿದೆ.

4- ರಾಸ್ ಟೇಲರ್: ನ್ಯೂಝಿಲೆಂಡ್ ತಂಡದ ಮಾಜಿ ಹೊಡಿಬಡಿ ದಾಂಡಿಗ ರಾಸ್ ಟೇಲರ್ ಈ ಬಾರಿಯ ಲೆಜೆಂಡ್ಸ್ ಲೀಗ್ ಆಕ್ಷನ್ನಲ್ಲಿ ಕಾಣಿಸಿಕೊಂಡಿದ್ದರು. ಟೇಲರ್ ಖರೀದಿಗಾಗಿ ಆರಂಭದಲ್ಲಿ ಕೆಲ ಫ್ರಾಂಚೈಸಿಗಳು ಆಸಕ್ತಿ ತೋರಿಸಿದರು. ಅಂತಿಮವಾಗಿ ಕೋನಾರ್ಕ್ ಸೂರ್ಯಸ್ ಒಡಿಶಾ ತಂಡವು 50.34 ಲಕ್ಷ ರೂ. ನೀಡಿ ಟೇಲರ್ ಅವರನ್ನು ಖರೀದಿಸಿದೆ.

3- ಡೇನಿಯಲ್ ಕ್ರಿಶ್ಚಿಯನ್: ಆಸ್ಟ್ರೇಲಿಯಾ ಮಾಜಿ ಆಲ್ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ವಿಶ್ವದ ಹಲವು ಲೀಗ್ಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇದೀಗ ಎಲ್ಎಲ್ಸಿಯತ್ತ ಮುಖ ಮಾಡಿರುವ ಕ್ರಿಶ್ಚಿಯನ್ ಅವರನ್ನು ಮಣಿಪಾಲ್ ಟೈಗರ್ಸ್ ತಂಡವು 55.95 ಲಕ್ಷ ರೂ. ನೀಡಿ ಖರೀದಿಸಿದೆ.

2- ಚಾಡ್ವಿಕ್ ವಾಲ್ಟನ್: ವೆಸ್ಟ್ ಇಂಡೀಸ್ನ ಮಾಜಿ ಸ್ಪೋಟಕ ಆರಂಭಿಕ ಆಟಗಾರ ಚಾಡ್ವಿಕ್ ವಾಲ್ಟನ್ ಅವರನ್ನು ಈ ಬಾರಿ ಅರ್ಬನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಅದು ಸಹ 60.30 ಲಕ್ಷ ರೂ. ನೀಡುವ ಮೂಲಕ ಎಂಬುದು ವಿಶೇಷ.

1- ಇಸುರು ಉಡಾನ: ಈ ಬಾರಿಯ ಲೆಜೆಂಡ್ಸ್ ಲೀಗ್ ಹರಾಜಿನಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗಿದ್ದು ಶ್ರೀಲಂಕಾದ ಎಡಗೈ ವೇಗಿ ಇಸುರು ಉಡಾನ. ಅರ್ಬನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಉಡಾನ ಅವರನ್ನು 61.97 ಲಕ್ಷ ರೂ. ನೀಡಿ ಖರೀದಿಸಿದೆ. ವಿಶೇಷ ಎಂದರೆ 2020 ರಲ್ಲಿ ಐಪಿಎಲ್ ಆಡಿದ್ದ ಉಡಾನ ಆರ್ಸಿಬಿಯಿಂದ ಪಡೆದಿದ್ದು ಕೇವಲ 50 ಲಕ್ಷ ರೂ. ಇದೀಗ ನಿವೃತ್ತರಾಗಿರುವ ಉಡಾನ ಐಪಿಎಲ್ಗಿಂತ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ.